ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಕೃಷ್ಣ ಪಕ್ಷ, ದ್ವಿತೀಯಾ ತಿಥಿ,
ಬೆಳಗ್ಗೆ 9:04 ನಂತರ ತೃತೀಯಾ ತಿಥಿ,
ಗುರುವಾರ, ಅಶ್ವಿನಿ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 1:44 ರಿಂದ 3:15
ಗುಳಿಕಕಾಲ: ಬೆಳಗ್ಗೆ 9:13 ರಿಂದ 10:43
ಯಮಗಂಡಕಾಲ: ಬೆಳಗ್ಗೆ 6:12 ರಿಂದ 7:42
Advertisement
ಮೇಷ: ದಾಂಪತ್ಯದಲ್ಲಿ ವಾಗ್ವಾದ, ಮಾರಾಟಗಾರರಿಗೆ ಅನುಕೂಲ, ವ್ಯವಹಾರದಲ್ಲಿ ಲಾಭ, ಉದ್ಯೋಗದಲ್ಲಿ ಕಿರಿಕಿರಿ, ಮನೋವ್ಯಥೆಯಿಂದ ನಿದ್ರಾಭಂಗ.
Advertisement
ವೃಷಭ: ಆತ್ಮೀಯ ಸ್ನೇಹಿತರಿಂದಲೇ ಸಂಕಷ್ಟ, ಧಾರ್ಮಿಕ ಕ್ಷೇತ್ರದವರಿಗೆ ಲಾಭ, ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ದಾಂಪತ್ಯದಲ್ಲಿ ವೈಮನಸ್ಸು, ಸ್ನೇಹಿತರೊಂದಿಗೆ ಕಿರಿಕಿರಿ.
Advertisement
ಮಿಥುನ: ಹಣಕಾಸು ಪರಿಸ್ಥಿತಿ ಅಲ್ಪ ಚೇತರಿಕೆ, ಕುಟುಂಬದಲ್ಲಿ ವೈಮನಸ್ಸು-ಕಲಹ, ಶತ್ರುಗಳಿಂದ ಅನಗತ್ಯ ಕಿರಿಕಿರಿ, ಅಧಿಕಾರಿಗಳಿಂದ ತೊಂದರೆ, ಬಂದಂತಹ ಅವಕಾಶಗಳು ಕೈ ತಪ್ಪುವುದು.
Advertisement
ಕಟಕ: ಮಾಡುವ ವ್ಯವಹಾರದಲ್ಲಿ ಲಾಭ, ಉದ್ಯೋಗದಲ್ಲಿ ನೆಮ್ಮದಿ, ಮಕ್ಕಳಿಗೆ ಉದ್ಯೋಗದಲ್ಲಿ ಕಿರಿಕಿರಿ, ಉದ್ಯೋಗ ಬದಲಾವಣೆಗೆ ಚಿಂತನೆ, ಪ್ರಯಾಣದಲ್ಲಿ ಸಮಸ್ಯೆ.
ಸಿಂಹ: ಉದ್ಯೋಗ ನಿಮಿತ್ತ ದೂರ ಪ್ರಯಾಣ, ವಿದೇಶಕ್ಕೆ ತೆರಳುವ ಸಾಧ್ಯತೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಪಿತ್ರಾರ್ಜಿತ ಆಸ್ತಿ ತಗಾದೆ.
ಕನ್ಯಾ: ಆಕಸ್ಮಿಕ ವಿಪರೀತ ಲಾಭ, ತಂದೆ ಮಾಡಿದ ತಪ್ಪಿಂದ ಉದ್ಯೋಗಕ್ಕೆ ಭಂಗ, ದಾಂಪತ್ಯದಲ್ಲಿ ಕಲಹ, ಕೋರ್ಟ್-ಪೊಲೀಸ್ ಸ್ಟೇಷನ್ಗೆ ಅಲೆದಾಟ.
ತುಲಾ: ಕೌಟುಂಬಿಕ ಕಲಹ, ಆರ್ಥಿಕ ವಿಚಾರಗಳಲ್ಲಿ ತೊಂದರೆ, ಪಾಲುದಾರಿಕೆ ವ್ಯವಹಾರದಲ್ಲಿ ಒಡಕು, ಮಕ್ಕಳಿಂದ ಆಕಸ್ಮಿಕ ದುರ್ಘಟನೆ.
ವೃಶ್ಚಿಕ: ಪ್ರಯಾಣದಿಂದ ನಷ್ಟ-ಸಂಕಷ್ಟ, ಅಧಿಕ ಉಷ್ಣ ಬಾಧೆ, ತಲೆ ನೋವು, ಉದರ ಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ, ವಿಚ್ಚೇದನ ಕೇಸ್ಗಳಿಂದ ಮುಕ್ತಿ.
ಧನಸ್ಸು: ಮಕ್ಕಳಿಂದ ಮಾನಹಾನಿ, ಶತ್ರುಗಳ ಶಮನ, ಮಾನಸಿಕ ಕಿರಿಕಿರಿ, ಧಾರ್ಮಿಕ ಕಾರ್ಯಗಳಲ್ಲಿ ಒಲವು.
ಮಕರ: ವಾಹನ-ಸ್ಥಿರಾಸ್ತಿ ಖರೀದಿಯೋಗ, ಬಂಧುಗಳಲ್ಲಿ ವೈಮನಸ್ಸು, ಸಂಗಾತಿ ದೂರವಾಗುವ ಸಾಧ್ಯತೆ, ಸ್ವಯಂಕೃತ ಅಪರಾಧಗಳಿಂದ ತೊಂದರೆ, ತಾಯಿಗೆ ನೋವುಂಟು ಮಾಡುವಿರಿ.
ಕುಂಭ: ವಿಪರೀತ ರಾಜಯೋಗ ದಿನ, ಮೌನವಾಗಿರಲು ಇಷ್ಟ ಪಡುವಿರಿ, ಉದ್ಯೋಗ ಸ್ಥಳದಲ್ಲಿ ನೆಮ್ಮದಿ ಹಾಳು, ಉದ್ಯೋಗದಲ್ಲಿನ ಒತ್ತಡದಿಂದ ನಿದ್ರಾಭಂಗ.
ಮೀನ: ಹೆಣ್ಣು ಮಕ್ಕಳಿಂದ ಧನಾಗಮನ, ದಾಯಾದಿಗಳ ಕಲಹ, ತಾಯಿಗೆ ನೋವು, ಕೈಲಾಗದ ವ್ಯಕ್ತಿಗಳಿಗಾಗಿ ಖರ್ಚು ಮಾಡುವಿರಿ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv