ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಶುಕ್ಲ ಪಕ್ಷ, ಚತುರ್ದಶಿ ತಿಥಿ, ಉಪರಿ ಹುಣ್ಣಿಮೆ
ಸೋಮವಾರ, ಪೂರ್ವಭಾದ್ರ ನಕ್ಷತ್ರ
ರಾಹುಕಾಲ: ಬೆಳಗ್ಗೆ 7:42 ರಿಂದ 9:13
ಗುಳಿಕಕಾಲ: ಮಧ್ಯಾಹ್ನ 1:46 ರಿಂದ 3:17
ಯಮಗಂಡಕಾಲ: ಬೆಳಗ್ಗೆ 10:44 ರಿಂದ 12:15
Advertisement
ಮೇಷ: ಕಾರ್ಯ ಸಾಧನೆಗಾಗಿ ತಿರುಗಾಟ, ಸ್ಥಿರಾಸ್ತಿ ಖರೀದಿ ಯೋಗ, ಆರೋಗ್ಯದಲ್ಲಿ ಏರುಪೇರು, ಅನಿರೀಕ್ಷಿತ ದ್ರವ್ಯ ಲಾಭ, ಮಾನಸಿಕ ನೆಮ್ಮದಿ ಪ್ರಾಪ್ತಿ.
Advertisement
ವೃಷಭ: ನಾನಾ ರೀತಿಯ ಸಂಪಾದನೆ, ವಿಪರೀತ ವ್ಯಸನ, ವಿದೇಶ ಪ್ರಯಾಣ, ಆತ್ಮೀಯರ ಭೇಟಿ, ನೆಮ್ಮದಿ ಜೀವನಕ್ಕೆ ತೊಂದರೆ.
Advertisement
ಮಿಥುನ: ದಾಂಪತ್ಯದಲ್ಲಿ ಅನ್ಯೋನ್ಯತೆ, ಇಲ್ಲ ಸಲ್ಲದ ಅಪವಾದ, ಮಾನಸಿಕ ಅಶಾಂತಿ, ಕೃಷಿಯಲ್ಲಿ ನಷ್ಟ, ವಾಹನ ರಿಪೇರಿ.
Advertisement
ಕಟಕ: ಗುರು ಹಿರಿಯರ ಆಗಮನ, ಶತ್ರುಗಳ ನಾಶ, ನೀಚ ಜನರ ಸಹವಾಸ, ನಂಬಿಕಸ್ಥರಿಂದ ಮೋಸ.
ಸಿಂಹ: ಆತ್ಮೀಯರಿಂದ ಸಹಾಯ, ವೃಥಾ ಧನವ್ಯಯ, ಅಭಿವೃದ್ಧಿ ಕುಂಠಿತ, ಯತ್ನ ಕಾರ್ಯದಲ್ಲಿ ವಿಳಂಬ.
ಕನ್ಯಾ: ಆಸ್ತಿ ತಗಾದೆ ನಿವಾರಣೆ, ಸ್ತ್ರೀಯರಿಗೆ ಸೌಖ್ಯ, ಮಾನಸಿಕ ನೆಮ್ಮದಿ ಪ್ರಾಪ್ತಿ, ಓದಿನಲ್ಲಿ ಹೆಚ್ಚು ಸಮಯ ವಿನಿಯೋಗ.
ತುಲಾ: ಅನಾವಶ್ಯಕ ವಿಚಾರಗಳಿಂದ ದೂರವಿರಿ, ಇಷ್ಟಾರ್ಥ ಸಿದ್ಧಿ, ಮಾನಸಿಕ ಒತ್ತಡ.
ವೃಶ್ಚಿಕ: ಪ್ರಚಾರ ಕಾರ್ಯಗಳಲ್ಲಿ ಭಾಗಿ, ಸ್ನೇಹಿತರಿಂದ ಸಹಾಯ, ವಿವಾಹದ ಮಾತುಕತೆ, ದೂರ ಪ್ರಯಾಣ.
ಧನಸ್ಸು: ತಮ್ಮ ಕಷ್ಟಕ್ಕೆ ಪ್ರತಿಫಲ ಲಭಿಸುವುದು, ದ್ರವ್ಯ ಲಾಭ, ವ್ಯಾಪಾರಿಗಳಿಗೆ ಅನುಕೂಲ, ಉದ್ಯಮಸ್ಥರಿಗೆ ಉತ್ತಮ ಲಾಭ.
ಮಕರ: ಸಾಲದಿಂದ ಮುಕ್ತಿ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಆರೋಗ್ಯದಲ್ಲಿ ಏರುಪೇರು, ಬಂಧುಗಳಿಂದ ಕಿರಿಕಿರಿ, ಅಕಾಲ ಭೋಜನ.
ಕುಂಭ; ಕೆಲಸ ಕಾರ್ಯಗಳಲ್ಲಿ ಜಯ, ಮಿತ್ರರಲ್ಲಿ ದ್ವೇಷ, ಇಲ್ಲದ ಸಲ್ಲದ ಅಪವಾದ ನಿಂದನೆ, ಮನಸ್ಸಿಗೆ ಬೇಸರ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ.
ಮೀನ: ಸ್ವಂತ ಪರಿಶ್ರಮದಿಂದ ಕಾರ್ಯ ಸಿದ್ಧಿ, ಮಾತಿನ ಚಕಮಕಿ, ಅನಾವಶ್ಯಕ ವಸ್ತುಗಳ ಖರೀದಿ, ಪ್ರತಿಭೆಗೆ ತಕ್ಕ ಮನ್ನಣೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv