ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಶುಕ್ಲ ಪಕ್ಷ, ಏಕಾದಶಿ ತಿಥಿ,
ಗುರುವಾರ, ಉತ್ತರಾಷಾಢ ನಕ್ಷತ್ರ,
ಮಧ್ಯಾಹ್ನ 1:44 ನಂತರ ಶ್ರವಣ ನಕ್ಷತ್ರ.
ರಾಹುಕಾಲ: ಮಧ್ಯಾಹ್ನ 1:47 ರಿಂದ 3:18
ಯಮಗಂಡಕಾಲ: ಬೆಳಗ್ಗೆ 9:14 ರಿಂದ 10:45
ಗುಳಿಕಕಾಲ: ಬೆಳಗ್ಗೆ 6:12 ರಿಂದ 7:43
Advertisement
ಮೇಷ:ಪಿತ್ರಾರ್ಜಿತ ಆಸ್ತಿ ತಗಾದೆ ನಿವಾರಣೆ, ತಾಯಿ ಕಡೆಯಿಂದ ಅನುಕೂಲ, ಉತ್ಪನ್ನ ಕ್ಷೇತ್ರಗಳಲ್ಲಿ ಉದ್ಯೋಗ ಪ್ರಾಪ್ತಿ, ಮಾನಸಿಕ ನೆಮ್ಮದಿ ಲಭಿಸುವುದು.
Advertisement
ವೃಷಭ: ಬಂಧು-ಮಿತ್ರರೊಂದಿಗೆ ಪ್ರಯಾಣ ಸಾಧ್ಯತೆ, ದಾಂಪತ್ಯದಲ್ಲಿ ಆಲಸ್ಯ, ಮನಸ್ಸಿಗೆ ಬೇಸರ, ಮಾಡುವ ಕೆಲಸಗಳಲ್ಲಿ ನಿರಾಸೆ, ಮನಸ್ಸಿನಲ್ಲಿ ಜಿಗುಪ್ಸೆ, ಪಾಲುದಾರಿಕೆ ವ್ಯವಹಾರದಲ್ಲಿ ನೋವು.
Advertisement
ಮಿಥುನ: ಆಕಸ್ಮಿಕ ಧನಾಗಮನ, ಕೋರ್ಟ್ ಕೇಸ್ಗಳಲ್ಲಿ ಜಯ, ಬಂಧುಗಳಿಂದ ಸಾಲ ಮಾಡುವಿರಿ, ಈ ದಿನ ಶುಭ ಫಲ ಪ್ರಾಪ್ತಿ.
Advertisement
ಕಟಕ: ವ್ಯಾಪಾರ-ವ್ಯವಹಾರದಲ್ಲಿ ಲಾಭ, ದುಶ್ಚಟಗಳು ಹೆಚ್ಚಾಗುವುದು, ಜೂಜು, ರೇಸ್, ಇಸ್ಪಿಟ್ ಆಟಗಳಿಂದ ಸಂಕಷ್ಟ,
ಕುಟುಂಬಸ್ಥರಿಂದಲೇ ಮಾನಹಾನಿ.
ಸಿಂಹ: ಶತ್ರುಗಳಿಂದ ಕಿರಿಕಿರಿ, ಕೆಲಸಗಾರರಿಂದ ತೊಂದರೆ, ಕುಟುಂಬಸ್ಥರಿಂದ ನಷ್ಟ, ಸಾಲ ಬಾಧೆ, ಮಾನಸಿಕ ವ್ಯಥೆ, ಗ್ಯಾಸ್ಟ್ರಿಕ್, ಸಂಧಿವಾತದ ಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ.
ಕನ್ಯಾ: ಮಿತ್ರರಿಂದ ಉತ್ತಮ ಗೌರವ, ಕಿರಿಯ ಸಹೋದರನಿಂದ ತೊಂದರೆ, ಮಾನಸಿಕ ನೋವು, ಪ್ರಯಾಣದಲ್ಲಿ ಅಡೆತಡೆ.
ತುಲಾ: ಕೃಷಿ ಚಟುವಟಿಕೆಗಳಿಂದ ಲಾಭ, ಉದ್ಯೋಗ ಸ್ಥಳದಲ್ಲಿ ಒತ್ತಡ, ಮಾನಸಿಕವಾಗಿ ಕಿರಿಕಿರಿ, ನೀವಾಡುವ ಮಾತಿನಿಂದ ತಾಯಿಗೆ ನೋವು.
ವೃಶ್ಚಿಕ: ತಂದೆಯ ಬಂಧುಗಳಿಂದ ಅನುಕೂಲ, ಆರೋಗ್ಯದಲ್ಲಿ ವ್ಯತ್ಯಾಸ, ಸ್ವಯಂಕೃತ ಅಪರಾಧಗಳಿಂದ ನಷ್ಟ, ಆತ್ಮೀಯರು ವೈಮನಸ್ಸು, ಬಂಧು-ಮಿತ್ರರು ದೂರವಾಗುವರು.
ಧನಸ್ಸು: ಕುಟುಂಬದಲ್ಲಿ ಆಕಸ್ಮಿಕ ದುರ್ಘಟನೆ, ಹಣಕಾಸು ಸಮಸ್ಯೆ, ಆಕಸ್ಮಿಕ ನಷ್ಟ ಬಾಧಿಸುವುದು, ಅನ್ಯರ ಮಾತಿನಿಂದ ನೋವು ಪಡುವಿರಿ.
ಮಕರ: ಕುಟುಂಬಸ್ಥರಿಂದ ಅನುಕೂಲ, ಸ್ನೇಹಿತರಿಂದ ಸಹಕಾರ, ಸಹೋದರನಿಂದ ಬೈಗುಳ, ಹೇಳಿಕೆ ಮಾತುಗಳಿಂದ ಕಲಹ, ಅಹಂಭಾವದಿಂದ ದಾಂಪತ್ಯದಲ್ಲಿ ವಿರಸ.
ಕುಂಭ: ಋಣ ರೋಗ ಬಾಧೆ, ಅಧಿಕವಾದ ಖರ್ಚು, ಶೀತ ಕಫ ಬಾಧೆ, ಮುಟ್ಟಿನ ಸಮಸ್ಯೆ, ಗರ್ಭ ದೋಷ, ಬಾಲಗ್ರಹ ದೋಷ, ಕೆಲಸಗಾರರಿಂದ ನಷ್ಟ.
ಮೀನ: ಹೆಣ್ಣು ಮಕ್ಕಳಿಂದ ಲಾಭ, ಮಹಿಳಾ ಮಿತ್ರರ ಭೇಟಿ, ಮಕ್ಕಳಿ ಉತ್ತಮ ಅವಕಾಶ, ಶುಭ ಸೂಚನೆ ಲಭಿಸುವುದು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv