ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಕೃಷ್ಣ ಪಕ್ಷ, ಪಾಡ್ಯ ತಿಥಿ, ಬುಧವಾರ,
ಮೇಷ: ಪರಿಶ್ರಮಕ್ಕೆ ತಕ್ಕ ಫಲ, ಕಾರ್ಯ ಸಾಧನೆಗಾಗಿ ತಿರುಗಾಟ, ದೇವತಾ ಕಾರ್ಯಗಳಲ್ಲಿ ಭಾಗಿ, ಮನಸ್ಸಿನಲ್ಲಿ ಗೊಂದಲ.
Advertisement
ವೃಷಭ: ಅಧಿಕಾರಿಗಳಿಂದ ಪ್ರಶಂಸೆ, ಕೋರ್ಟ್ ಕೇಸ್‍ಗಳಲ್ಲಿ ಜಯ, ಮಿತ್ರರಿಂದ ವಂಚನೆ ಸಾಧ್ಯತೆ ಎಚ್ಚರಿಕೆ.
Advertisement
ಮಿಥುನ: ಸ್ತ್ರೀಯರಲ್ಲಿ ತಾಳ್ಮೆ ಅತ್ಯಗತ್ಯ, ಮಗನಿಂದ ಶುಭ ಸುದ್ದಿ ಕೇಳುವಿರಿ, ಕೆಲಸ ಕಾರ್ಯಗಳಲ್ಲಿ ಯಶಸ್ಸು.
Advertisement
ಕಟಕ: ಅಪರಿಚಿತರ ವಿಷಯದಲ್ಲಿ ಜಾಗ್ರತೆ, ವಿದ್ಯಾರ್ಥಿಗಳಲ್ಲಿ ಗೊಂದಲ, ಕ್ರಯ ವಿಕ್ರಯಗಳಲ್ಲಿ ಲಾಭ.
Advertisement
ಸಿಂಹ: ವಿವಿಧ ಮೂಲಗಳಿಂದ ಧನ ಲಾಭ, ವೈರಿಗಳಿಂದ ದೂರವಿರಿ, ಮಾನಸಿಕ ನೆಮ್ಮದಿ, ಉದಾಸೀನದಿಂದ ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ.
ಕನ್ಯಾ: ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ಕುಟುಂಬ ಸೌಖ್ಯ, ಕೃಷಿಯಲ್ಲಿ ಲಾಭ, ವಿಪರೀತ ಕೋಪ, ನಾನಾ ರೀತಿಯ ಸಂಕಷ್ಟ.
ತುಲಾ: ಅಧಿಕ ಕೆಲಸದಿಂದ ವಿಶ್ರಾಂತಿ, ವಸ್ತ್ರ ವ್ಯಾಪಾರಿಗಳಿಗೆ ಅಲ್ಪ ಲಾಭ, ಬಡ ರೋಗಿಗಳಿಗೆ ಸಹಾಯ ಮಾಡುವಿರಿ.
ವೃಶ್ಚಿಕ: ಹಿತೈಷಿಗಳಿಂದ ಸಲಹೆ, ಹಣಕಾಸು ಸಮಸ್ಯೆ, ಇಲ್ಲ ಸಲ್ಲದ ಅಪವಾದ, ಗೆಳೆಯರೊಂದಿಗೆ ವೈಮನಸ್ಸು.
ಧನಸ್ಸು: ಯಂತ್ರೋಪಕರಣಗಳಿಂದ ಲಾಭ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಕಾರ್ಯಗಳಲ್ಲಿ ಯಶಸ್ಸು, ನಾನಾ ವಿಚಾರಗಳಲ್ಲಿ ಆಸಕ್ತಿ.
ಮಕರ: ಅತಿಯಾದ ದೇಹಾಲಸ್ಯ, ಬಾಕಿ ಹಣ ವಸೂಲಿ, ಸುಖ ಭೋಜನ ಪ್ರಾಪ್ತಿ, ಷೇರು ವ್ಯವಹಾರಗಳಲ್ಲಿ ಎಚ್ಚರ, ಪರರಿಂದ ತೊಂದರೆ.
ಕುಂಭ: ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ, ಸ್ತ್ರೀಯರಿಗೆ ನೆಮ್ಮದಿ ವಾತಾವರಣ, ಚೋರ ಭಯ, ಚಂಚಲ ಸ್ವಭಾವ.
ಮೀನ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಕೆಲಸ ಕಾರ್ಯಗಳಲ್ಲಿ ನಿಧಾನಗತಿ, ಕೃಷಿಯಲ್ಲಿ ಲಾಭ, ವಿದೇಶ ಪ್ರಯಾಣ, ಶತ್ರು ಧ್ವಂಸ.