ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರಮಾಸ,
ಕೃಷ್ಣ ಪಕ್ಷ, ತ್ರಯೋದಶಿ ತಿಥಿ,
ಬೆಳಗ್ಗೆ 9:12 ನಂತರ ಚತುರ್ದಶಿ ತಿಥಿ,
ಶನಿವಾರ, ಉತ್ತಭಾದ್ರಪದ ನಕ್ಷತ್ರ
ರಾಹುಕಾಲ: ಬೆಳಗ್ಗೆ 9:18 ರಿಂದ 10:51
ಗುಳಿಕಕಾಲ: ಬೆಳಗ್ಗೆ 6:11 ರಿಂದ 7:45
ಯಮಗಂಡಕಾಲ: ಮಧ್ಯಾಹ್ನ 1:57 ರಿಂದ 3:30
Advertisement
ಮೇಷ: ವಾಹನದಿಂದ ತೊಂದರೆ, ಪೆಟ್ಟಾಗುವ ಸಾಧ್ಯತೆ, ಮಾನಸಿಕ ಕಿರಿಕಿರಿ, ಉದ್ಯೋಗ ಸ್ಥಳದಲ್ಲಿ ಬೇಸರ, ನಿದ್ರಾಭಂಗ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ.
Advertisement
ವೃಷಭ: ದಾಂಪತ್ಯದಲ್ಲಿ ವಿರಸ, ಮನಸ್ಸಿಗೆ ಬೇಸರ, ಕೆಲಸಗಳಲ್ಲಿ ನಿರುತ್ಸಾಹ, ಪತ್ರ ವ್ಯವಹಾರಗಳಲ್ಲಿ ಮೋಸ, ಮಿತ್ರರಿಂದ ತೊಂದರೆ, ದಾಯಾದಿಗಳಿಂದ ಸ್ಥಿರಾಸ್ತಿ ತಗಾದೆ.
Advertisement
ಮಿಥುನ: ಆರ್ಥಿಕ ಸಂಕಷ್ಟ ನಿವಾರಣೆ, ಕೌಟುಂಬಿಕ ಕಲಹ ಶಮನ, ಕೋರ್ಟ್ ಕೇಸ್‍ಗಳಲ್ಲಿ ಜಯ, ದೀರ್ಘಕಾಲದ ಅನಾರೋಗ್ಯ, ವ್ಯಾಪಾರ-ಉದ್ಯೋಗದಲ್ಲಿ ನಿರಾಸಕ್ತಿ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ.
Advertisement
ಕಟಕ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಪ್ರಯಾಣ ರದ್ದಾಗುವುದು, ಸ್ವಂತ ಉದ್ಯಮದಲ್ಲಿ ನಷ್ಟ, ಮಾಟ-ಮಂತ್ರದ ಭೀತಿ, ದಾಯಾದಿಗಳ ಕಲಹ, ಮಕ್ಕಳ ತಪ್ಪಿನಿಂದ ಅಧಿಕ ಚಿಂತೆ.
ಸಿಂಹ: ವಾಹನಕ್ಕಾಗಿ ಖರ್ಚು, ವ್ಯಾಪಾರ ಸ್ಥಳದಲ್ಲಿ ಬದಲಾವಣೆ, ಅಧಿಕ ಖರ್ಚು, ಮಾನಸಿಕ ವ್ಯಥೆ, ಅಧಿಕವಾದ ಒತ್ತಡ, ನಿದ್ರಾಭಂಗ, ಮನೆಯ ವಾತಾವರಣದಲ್ಲಿ ಅಶಾಂತಿ.
ಕನ್ಯಾ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಕಟ್ಟಡ ಕೆಲಸಗಾರರಿಗೆ ಅನುಕೂಲ, ಗುತ್ತಿಗೆದಾರರಿಗೆ ಲಾಭ, ಉದ್ಯಮದಲ್ಲಿ ಅಧಿಕ ಲಾಭ, ಮಿತ್ರರಿಂದ ಅನುಕೂಲ, ಸಂಗಾತಿಯಿಂದ ನೋವು.
ತುಲಾ: ಅನಗತ್ಯ ಮಾತುಗಳಿಂದ ನಿಷ್ಠೂರ, ಶತ್ರುಗಳನ್ನು ಅಧಿಕ ಮಾಡಿಕೊಳ್ಳುವಿರಿ, ಆರೋಗ್ಯದಲ್ಲಿ ವ್ಯತ್ಯಾಸ, ಸಾಲ ಪಡೆದವರು ಮೋಸ ಮಾಡುವರು, ಕುಟುಂಬದಲ್ಲಿ ಆತಂಕ.
ವೃಶ್ಚಿಕ: ಆರೋಗ್ಯದಲ್ಲಿ ಸಮಸ್ಯೆ, ಅನ್ಯರ ತಪ್ಪುಗಳಿಂದ ಗೌರವಕ್ಕೆ ಧಕ್ಕೆ, ಇಲ್ಲ ಸಲ್ಲದ ಅಪವಾದ ನಿಂದನೆ, ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ, ಸಂತಾನ ಚಿಂತೆ.
ಧನಸ್ಸು: ಸ್ಥಿರಾಸ್ತಿ ತಗಾದೆ, ದಾಯಾದಿಗಳ ಜಗಳ, ಕೋರ್ಟ್ ಮೊರೆ ಹೋಗುವ ಸಾಧ್ಯತೆ, ವ್ಯಾಪಾರ-ಉದ್ಯೋಗದಲ್ಲಿ ನಷ್ಟ, ಮಾನಸಿಕ ವ್ಯಥೆ, ಮಾಟ-ಮಂತ್ರದ ಭೀತಿ.
ಮಕರ: ಸೇವಾ ವೃತ್ತಿಪರರಿಗೆ ಅನುಕೂಲ, ಉದ್ಯೋಗದಲ್ಲಿ ಲಾಭ, ನೆರೆಹೊರೆಯವರಿಂದ ಕಿರಿಕಿರಿ, ಸ್ವಯಂಕೃತ್ಯಗಳಿಂದ ಸಂಕಷ್ಟ, ಮಾಟ-ಮಂತ್ರದವರಿಂದ ನಷ್ಟ, ಸಂಕಷ್ಟಕ್ಕೆ ಸಿಲುಕುವಿರಿ.
ಕುಂಭ: ತಂದೆ ಮಾಡಿದ ಸಾಲ ಬಾಧೆ, ಕುಟುಂಬದಲ್ಲಿ ಆತಂಕ, ನೀವಾಡುವ ಮಾತಿನಿಂದ ತೊಂದರೆ, ಕುಟುಂಬದಲ್ಲಿಯೇ ಕುತಂತ್ರ ಮಾಡುವರು.
ಮೀನ: ಮಕ್ಕಳು ದೂರವಾಗುವ ಸಾಧ್ಯತೆ, ಪ್ರಯಾಣದಲ್ಲಿ ನಷ್ಟ, ವಿದೇಶ ಪ್ರಯಾಣ ಯೋಗ, ಭವಿಷ್ಯದ ಚಿಂತೆ, ಸಾಧಿಸಬೇಕೆಂದು ಕನಸು, ವಿಘ್ನಗಳಿಂದ ಕನಸು ಭಗ್ನ.