ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ಚತುರ್ಥಿ ತಿಥಿ,
ಶುಕ್ರವಾರ, ವಿಶಾಖ ನಕ್ಷತ್ರ
ಬೆಳಗ್ಗೆ 10:41 ನಂತರ ಅನೂರಾಧ ನಕ್ಷತ್ರ.
ರಾಹುಕಾಲ: ಬೆಳಗ್ಗೆ 10:41 ರಿಂದ 12:09
ಗುಳಿಕಕಾಲ: ಬೆಳಗ್ಗೆ 7:42 ರಿಂದ 9:11
ಯಮಗಂಡಕಾಲ: ಬೆಳಗ್ಗೆ 6:12 ರಿಂದ 7:42
Advertisement
ಮೇಷ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಆಕಸ್ಮಿಕ ಲಾಭ ಪ್ರಮಾಣ ಹೆಚ್ಚು, ಅನಿರೀಕ್ಷಿತ ಸಮಸ್ಯೆ ಎದುರಾಗುವುದು, ದೂರ ಪ್ರಯಾಣ, ವಾಹನ ಚಾಲನೆಯಲ್ಲಿ ಎಚ್ಚರ, ಕಬ್ಬಿಣದ ವಸ್ತುವಿನಿಂದ ಪೆಟ್ಟಾಗುವುದು.
Advertisement
ವೃಷಭ: ಆಲಸ್ಯ ಮನೋಭಾವ, ಮನಸ್ಸಿನಲ್ಲಿ ಜಿಗುಪ್ಸೆ, ಸಹೋದ್ಯೋಗಿಗಳಿಂದ ಸಮಸ್ಯೆ, ದಾಂಪತ್ಯದಲ್ಲಿ ಬೇಸರ, ಅನುಮಾನ ಮೂಡುವುದು.
Advertisement
ಮಿಥುನ: ಆರ್ಥಿಕ ಸಮಸ್ಯೆ, ಸಾಲ ಮಾಡುವ ಪರಿಸ್ಥಿತಿ, ಕುಟುಂಬದಲ್ಲೇ ಶತ್ರುಗಳಾಗುವರು, ಅನಗತ್ಯ ಕಲಹ, ಆರೋಗ್ಯದ ಬಗ್ಗೆ ಕಾಳಜಿವಹಿಸಿ.
Advertisement
ಕಟಕ: ಮಾನ ಅಪಮಾನ, ಮಕ್ಕಳಿಂದ ನೋವು, ಆಕಸ್ಮಿಕ ನಷ್ಟ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಉದ್ಯೋಗ ಕಳೆದುಕೊಳ್ಳುವ ಭೀತಿ,ಶತ್ರುಗಳ ಕಾಟ.
ಸಿಂಹ: ಸ್ಥಿರಾಸ್ತಿಗಾಗಿ ಅಧಿಕ ಖರ್ಚು, ವಾಹನ ರಿಪೇರಿಗಾಗಿ ವೆಚ್ಚ, ದೀರ್ಘಕಾಲದ ರೋಗಬಾಧೆ, ಮಕ್ಕಳ ಬೇಜವಾಬ್ದಾರಿ ನಡವಳಿಕೆ, ದಾಂಪತ್ಯದಲ್ಲಿ ವೈಮನಸ್ಸು.
ಕನ್ಯಾ: ಮಿತ್ರರೊಂದಿಗೆ ಪ್ರಯಾಣ, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ಮನಸ್ಸಿನಲ್ಲಿ ಆತಂಕ, ಅವಕಾಶ ಕೈತಪ್ಪುವುದು, ನೆರೆಹೊರೆಯವರು ಶತ್ರುಗಳಾಗುವರು, ಮಾಟ ಮಂತ್ರದ ಭೀತಿ.
ತುಲಾ: ಕುಟುಂಬ ಸಮೇತ ಪ್ರಯಾಣ, ಬೇಜವಾಬ್ದಾರಿತನದಿಂದ ಉದ್ಯೋಗದಲ್ಲಿ ಸಮಸ್ಯೆ, ವಸ್ತ್ರಾಭರಣ ಖರೀದಿಯಲ್ಲಿ ಮೋಸ, ನಷ್ಟಗಳು ಹೆಚ್ಚು ಬಾಧಿಸುವುದು.
ವೃಶ್ಚಿಕ: ಪ್ರಯಾಣದಲ್ಲಿ ಅಡೆತಡೆ, ಸ್ಥಿರಾಸ್ತಿಯಲ್ಲಿ ಗೊಂದಲ, ತಂದೆ ಮಾಡಿದ ತಪ್ಪುಗಳಿಂದ ದುಷ್ಪರಿಣಾಮ, ದೇವರ ಕಾರ್ಯಗಳಲ್ಲಿ ನಿರಾಸಕ್ತಿ, ದಾನ ಧರ್ಮಗಳಲ್ಲಿ ನಿರುತ್ಸಾಹ.
ಧನಸ್ಸು: ಆರ್ಥಿಕ ಸಂಕಷ್ಟ ಹೆಚ್ಚಾಗುವುದು, ಮಕ್ಕಳ ನಡವಳಿಕೆ ಅನುಮಾನಸ್ಪದ, ಆತ್ಮೀಯರು ದೂರವಾಗುವರು, ಕಮಿಷನ್ ವ್ಯವಹಾರದಲ್ಲಿ ನಷ್ಟ, ಚೀಟಿ, ಯಂತ್ರೋಪಕರಣ ಖರೀದಿಯಲ್ಲಿ ಮೋಸ.
ಮಕರ: ಸ್ವಂತ ಉದ್ಯಮಸ್ಥರಿಗೆ ಅಧಿಕ ಲಾಭ, ವ್ಯಾಪಾರ-ವ್ಯವಹಾರದಲ್ಲಿ ಹೆಚ್ಚಿದ ಹೂಡಿಕೆ, ಸಾಲ ಮಾಡುವ ಸಾಧ್ಯತೆ, ಮಿತ್ರರಿಂದ ನೋವು, ಒತ್ತಡಗಳಿಂದ ನಿದ್ರಾಭಂಗ.
ಕುಂಭ: ನಾನಾ ಕ್ಷೇತ್ರದ ಉದ್ಯೋಗಸ್ಥರಿಗೆ ಲಾಭ, ಆರೋಗ್ಯ ವ್ಯತ್ಯಾಸದಿಂದ ನಷ್ಟ, ಸ್ವಯಂಕೃತ ಅಪರಾಧಗಳಿಂದ ಸಮಸ್ಯೆ, ಅಧಿಕಾರಿ-ರಾಜಕೀಯ ವ್ಯಕ್ತಿಗಳಿಗಾಗಿ ಖರ್ಚು.
ಮೀನ: ಮಕ್ಕಳ ಆರೋಗ್ಯದಲ್ಲಿ ಏರುಪೇರು, ಸೋದರ ಮಾವನಿಂದ ಸಮಸ್ಯೆ, ವಿಪರೀತ ನಷ್ಟಗಳ ಬಾಧೆ, ಭೂ ವ್ಯವಹಾರಗಳಲ್ಲಿ ಎಚ್ಚರ, ಮೊಬೈಲ್ ಕಂಪನಿಗಳಿಂದ ನಷ್ಟ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv