ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಕೃಷ್ಣ ಪಕ್ಷ, ಸಪ್ತಮಿ ತಿಥಿ,
ಸೋಮವಾರ, ಮೃಗಶಿರ ನಕ್ಷತ್ರ
ರಾಹುಕಾಲ: ಬೆಳಗ್ಗೆ 7:43 ರಿಂದ 9:13
ಗುಳಿಕಕಾಲ: ಮಧ್ಯಾಹ್ನ 1:43 ರಿಂದ 3:13
ಯಮಗಂಡಕಾಲ: ಬೆಳಗ್ಗೆ 10:43 ರಿಂದ 12:13
Advertisement
ಮೇಷ: ಉದ್ಯೋಗದಲ್ಲಿ ಬಡ್ತಿ, ಆರೋಗ್ಯದಲ್ಲಿ ಚೇತರಿಕೆ, ಅನ್ಯರಿಗೆ ಉಪಕಾರ ಮಾಡುವಿರಿ, ಋಣ ವಿಮೋಚನೆ, ದ್ರವ್ಯ ಲಾಭ.
Advertisement
ವೃಷಭ: ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ದಾಂಪತ್ಯದಲ್ಲಿ ಪ್ರೀತಿ ಸಮಾಗಮ, ಶೀತ ಸಂಬಂಧಿತ ರೋಗ ಬಾಧೆ, ಶತ್ರುಗಳ ನಾಶ.
Advertisement
ಮಿಥುನ: ಸ್ನೇಹಿತರಿಂದ ಸಹಕಾರ, ವಿವಾಹ ಯೋಗ, ಮನಸ್ಸಿನಲ್ಲಿ ಭಯ, ಸ್ತ್ರೀಯರಿಗೆ ಲಾಭ.
Advertisement
ಕಟಕ: ದೃಷ್ಠಿ ದೋಷದಿಂದ ತೊಂದರೆ, ದೂರ ಪ್ರಯಾಣ, ಇಷ್ಟವಾದ ವಸ್ತುಗಳ ಖರೀದಿ, ಇಲ್ಲ ಸಲ್ಲದ ಅಪವಾದ.
ಸಿಂಹ: ಅಧಿಕ ತಿರುಗಾಟ, ಅನಗತ್ಯ ಯೋಚನೆ ಮಾಡುವಿರಿ, ಸ್ತ್ರೀಯರಿಗೆ ಲಾಭ, ಸರ್ಕಾರಿ ಕೆಲಸಗಳಲ್ಲಿ ಜಯ, ಉದ್ಯಮಿಗಳಿಗೆ ಶುಭ ದಿನ.
ಕನ್ಯಾ: ವ್ಯಾಪಾರದಲ್ಲಿ ಲಾಭ, ಸಹೋದರರಿಂದ ಸಹಾಯ, ನೆಮ್ಮದಿ ಇಲ್ಲದ ಜೀವನ, ಮನಸ್ಸಿನಲ್ಲಿ ಗೊಂದಲ.
ತುಲಾ: ಯಾರನ್ನೂ ಹೆಚ್ಚು ನಂಬಬೇಡಿ, ಅನಿರೀಕ್ಷಿತ ದ್ರವ್ಯ ಲಾಭ, ಅಮೂಲ್ಯ ವಸ್ತುಗಳ ಕಳೆದುಕೊಳ್ಳುವಿರಿ.
ವೃಶ್ಚಿಕ: ಅಪರಿಚಿತರಿಂದ ಕಲಹ, ಆರೋಗ್ಯದಲ್ಲಿ ವ್ಯತ್ಯಾಸ, ಮಾತಿನ ಮೇಲೆ ಹಿಡಿತ ಅಗತ್ಯ, ಮಹಿಳೆಯರಿಗೆ ವಿಶೇಷ ಲಾಭ.
ಧನಸ್ಸು: ಕುಟುಂಬದಲ್ಲಿ ಹೊರೆ ಹೆಚ್ಚಾಗುವುದು, ಅನ್ಯ ಜನರಲ್ಲಿ ವೈಮನಸ್ಸು, ಶತ್ರುಗಳ ಬಾಧೆ, ಎಷ್ಟೇ ಹಣ ಬಂದರೂ ಸಾಕಾಗುವುದಿಲ್ಲ.
ಮಕರ: ಸ್ವಯಂಕೃತ ಅಪರಾಧಗಳಿಂದ ನಷ್ಟ, ವಿಪರೀತ ಹಣವ್ಯಯ, ಆರೋಗ್ಯದಲ್ಲಿ ವ್ಯತ್ಯಾಸ, ಅತಿಯಾದ ನಿದ್ರೆ, ಅಪರಿಚಿತರಿಂದ ಕಲಹವಾಗುವ ಸಾಧ್ಯತೆ.
ಕುಂಭ: ಪ್ರಿಯ ಜನರ ಭೇಟಿ, ಸ್ತ್ರೀಯರಿಗೆ ಸೌಖ್ಯ, ಆಂತರಿಕ ಕಲಹ, ಮಾನಸಿಕ ವ್ಯಥೆ, ಆತ್ಮೀಯರೊಂದಿಗೆ ಸಂಕಷ್ಟ ಹೇಳಿಕೊಳ್ಳುವಿರಿ.
ಮೀನ: ಸ್ವಂತ ಪರಿಶ್ರಮದಿಂದ ಅಭಿವೃದ್ಧಿ, ತೀರ್ಥಯಾತ್ರೆ ದರ್ಶನ, ದೂರ ಪ್ರಯಾಣ, ವಾಸಗೃಹದಲ್ಲಿ ತೊಂದರೆ, ಆತ್ಮೀಯರೊಂದಿಗೆ ಮನಃಸ್ತಾಪ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv