ಬೆಂಗಳೂರು: ಇಂದಿನಿಂದ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಗುತ್ತಿದೆ. ವಾಹನ ಸವಾರರ ಜೇಬಿಗೆ ಬರೆ ಇಡಲು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸಿದ್ಧವಾಗಿದೆ.
ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯನ್ನು ಬಜೆಟ್ ಸಂದರ್ಭದಲ್ಲಿ ಏರಿಸಲಾಗುವುದು ಎಂದು ರಾಜ್ಯ ಸರ್ಕಾರ ಘೋಷಿಸಿತ್ತು. ಇಂದಿನಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಾಳವಾಗುತ್ತಿದ್ದು, ಪೆಟ್ರೋಲ್, ಡೀಸೆಲ್ ಬೆಲೆ ಸಾರ್ವಕಾಲಿಕ ದಾಖಲೆ ಸೃಷ್ಟಿಸಲಿದೆ.
Advertisement
Advertisement
ಒಂದು ವಾರದಿಂದ ನಿರಂತರ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುತ್ತಲೇ ಇದ್ದು, ಈಗ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಸೆಸ್ ವಿಧಿಸೋದ್ರಿಂದ ಮತ್ತೆ ದರ ಏರಿಕೆಯ ಬಿಸಿ ತಟ್ಟಲಿದೆ. ಇನ್ನೂ ಈ ಭಾರಿ 1.14 ಪೆಟ್ರೋಲ್ ಹಾಗೂ 1.12 ಡೀಸೆಲ್ ಬೆಲೆ ಹೆಚ್ಚಳವಾಗುತ್ತಿದ್ದು, ವಾಹನ ಸವಾರರ ಜೇಬನ್ನು ಸುಡಲಿದೆ.
Advertisement
ಕರ್ನಾಟಕದಲ್ಲಿ ಒಂದೇ ದಿನದಲ್ಲಿ ಬರೋಬ್ಬರಿ 2 ರೂ.ಗಳಷ್ಟು ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವಾಗಿದ್ದು, ವಾಹನ ಸವಾರರಿಗೆ ನುಂಗಲಾರದ ತುತ್ತಾಗಿದೆ. ಉಭಯ ಸದನಗಳಲ್ಲಿ ಬಜೆಟ್ ಅನುಮೋದನೆಯಾಗಿದ್ದು, ಮಧ್ಯರಾತ್ರಿಯಿಂದಲೇ ಕೆಲ ವಸ್ತುಗಳ ಮೇಲಿನ ಪರಿಷ್ಕೃತ ತೆರಿಗೆ ಅನ್ವಯವಾಗಿದೆ. ಪರಿಣಾಮ ಪೆಟ್ರೋಲ್, ಡೀಸೆಲ್, ವಿದ್ಯುತ್, ತರಕಾರಿ, ಹಾಲು, ಬಸ್ ಟಿಕೆಟ್ ದರ, ಮದ್ಯ, ಹೀಗೆ ಹಲವು ಬೆಲೆಗಳು ಏರಿಕೆ ಆಗಲಿವೆ.
Advertisement
ದಿನಾಂಕ 13/07/18
ಪೆಟ್ರೋಲ್ ದರ – 78.01 ರೂಪಾಯಿ
ಡೀಸೆಲ್ ದರ – 69.49 ರೂಪಾಯಿ
ಎಕ್ಸ್ ಟ್ರಾ ಪ್ರೀಮಿಯಂ ಪೆಟ್ರೋಲ್ – 80.76 ರೂಪಾಯಿ
ದಿನಾಂಕ 14/07/18
ಪೆಟ್ರೋಲ್ ದರ – 79.36 ರೂಪಾಯಿ
ಡೀಸೆಲ್ ದರ – 70.74 ರೂಪಾಯಿ
ಎಕ್ಸ್ ಟ್ರಾ ಪ್ರೀಮಿಯಂ ಪೆಟ್ರೋಲ್ – 82.16 ರೂಪಾಯಿ
ಪ್ರೀಪಿಯಂ ಪೆಟ್ರೋಲ್- 1.40 ರೂಪಾಯಿ ಹೆಚ್ಚಳ
* ವಿದ್ಯುತ್
ವಿದ್ಯುತ್ ತೆರಿಗೆ ದರ ಪ್ರತಿ ಯೂನಿಟ್‍ಗೆ ಶೇ.3 ರಷ್ಟು ಹೆಚ್ಚಳ
* ಹಾಲು, ತರಕಾರಿ, ಬಸ್ ಟಿಕೆಟ್ ದರ
ಪೆಟ್ರೋಲ್, ಡಿಸೇಲ್ ತೆರಿಗೆ ಹೆಚ್ಚಾಗಿರೋದ್ರಿಂದ ಸರಕು ಸಾಗಾಣೆ ವೆಚ್ಚ ಹೆಚ್ಚಾಗಲಿದೆ. ಪರಿಣಾಮ ದಿನಬಳಕೆ ವಸ್ತುಗಳ ಬೆಲೆ ಹೆಚ್ಚಳ
* ಮದ್ಯ
ಮದ್ಯದ ಮೇಲೆ ಶೇ.4 ರಷ್ಟು ಅಬಕಾರಿ ಸುಂಕ
* ಖಾಸಗಿ ವಾಹನ ಸೇವೆ
ಖಾಸಗಿ ವಾಹನ ಸೇವಾ ತೆರಿಗೆ ಶೇ.21 ರಷ್ಟು ಹೆಚ್ಚಳ
( ಇದು ಆಗಸ್ಟ್ ನಿಂದ ಜಾರಿಗೆ ಬರಲಿದೆ )