ಪಂಚಾಂಗ
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜ್ಯೇಷ್ಠ ಮಾಸ,
ಶುಕ್ಲ ಪಕ್ಷ, ಚತುರ್ಥಿ ತಿಥಿ,
ಬೆಳಗ್ಗೆ 7:38 ರಿಂದ ಪಂಚಮಿ ತಿಥಿ,
ಶುಕ್ರವಾರ, ಪುಷ್ಯ ನಕ್ಷತ್ರ
Advertisement
ರಾಹುಕಾಲ: ಬೆಳಗ್ಗೆ 10:47 ರಿಂದ 12:23
ಗುಳಿಕಕಾಲ: ಬೆಳಗ್ಗೆ 7:35 ರಿಂದ 9:11
ಯಮಗಂಡಕಾಲ: ಮಧ್ಯಾಹ್ನ 3:35 ರಿಂದ 5:11
Advertisement
ಮೇಷ: ಆಧ್ಯಾತ್ಮಿಕ-ದೈವ ಚಿಂತನೆ ಅಧಿಕ, ವಾಹನ ಚಾಲನೆಯಲ್ಲಿ ಎಚ್ಚರ, ಅಪಘಾತವಾಗುವ ಸಾಧ್ಯತೆ, ಉದ್ಯೋಗ ಸ್ಥಳದಲ್ಲಿ ಆಕಸ್ಮಿಕ ತೊಂದರೆ, ಮಾನಸಿಕ ಕಿರಿಕಿರಿ.
Advertisement
ವೃಷಭ: ಸ್ವಯಂಕೃತ ಅಪರಾಧಗಳಿಂದ ನಷ್ಟ, ಸ್ನೇಹಿತರನ್ನು ದೂರ ಮಾಡಿಕೊಳ್ಳುವಿರಿ, ದಾಂಪತ್ಯದಲ್ಲಿ ವಿರಸ, ಮನಸ್ಸಿಗೆ ಬೇಸರ, ಸ್ಥಿರಾಸ್ತಿ-ಪತ್ರ ವ್ಯವಹಾರದಲ್ಲಿ ಗೊಂದಲ.
Advertisement
ಮಿಥುನ: ಹಣಕಾಸು ವಿಚಾರವಾಗಿ ತೊಂದರೆಗೆ ಸಿಲುಕುವಿರಿ, ಸೇವಕರಿಂದ ತೊಂದರೆ, ಅಧಿಕಾರಿಗಳು-ಕಾರ್ಮಿಕರಿಂದ ಧನ ನಷ್ಟ, ಕೌಟುಂಬಿಕ ಜಗಳಗಳಿಂದ ಸೆರೆವಾಸ.
ಕಟಕ: ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ, ಸಂಗಾತಿಯಿಂದ ಗೌರವಕ್ಕೆ ಧಕ್ಕೆ, ಸ್ನೇಹಿತರಿಂದ ಅವಮಾನ, ಮನಸ್ಸಿನಲ್ಲಿ ಆತಂಕ, ತಂದೆಯಿಂದ ಸಾಂತ್ವನ-ಬುದ್ಧಿಮಾತು ಕೇಳುವಿರಿ.
ಸಿಂಹ: ವಿಕೃತ ಮನಸ್ಥಿತಿಯಿಂದ ಧನ ನಷ್ಟ, ಆಲಸ್ಯ ಮನೋಭಾವ, ಅಧಿಕ ಸೋಮಾರಿತನ, ಗ್ಯಾಸ್ಟ್ರಿಕ್-ಶ್ವಾಸಕೋಶ ಸಮಸ್ಯೆ, ಸಾಲಗಾರರು-ಸೇವಕರಿಂದ ತೊಂದರೆ, ಸ್ನೇಹಿತರಿಂದ ನೆಮ್ಮದಿ ಹಾಳು.
ಕನ್ಯಾ: ನೆರೆಹೊರೆ-ಬಂಧುಗಳಿಂದ ಗೌರವಕ್ಕೆ ಚ್ಯುತಿ, ದುಶ್ಚಟಗಳಿಂದ ಹಣಕಾಸು ವ್ಯಯ, ಸಂಕಷ್ಟಕ್ಕೆ ಸಿಲುಕುವಿರಿ, ಸ್ಥಿರಾಸ್ತಿಯಿಂದ ಲಾಭ, ಸಂಗಾತಿಯಿಂದ ಅನುಕೂಲ, ಆಕಸ್ಮಿಕ ಕುಟುಂಬಸ್ಥರಿಂದ ಲಾಭ.
ತುಲಾ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗಾವಕಾಶ, ಕೈಗಾರಿಕೋದ್ಯಮದಲ್ಲಿ ಉತ್ತಮ ಅವಕಾಶ, ಆರ್ಥಿಕ ಸಂಕಷ್ಟಗಳು ಬಾಧಿಸುವುದು, ಸ್ಥಿರಾಸ್ತಿ ವಿಚಾರದಲ್ಲಿ ವಾಗ್ವಾದ, ವಾಹನ ಚಾಲನೆಯಲ್ಲಿ ಎಚ್ಚರ.
ವೃಶ್ಚಿಕ: ಸ್ವಯಂಕೃತ ಅಪರಾಧಗಳಿಂದ ಸಂಕಷ್ಟ, ಅವಕಾಶಗಳು ಕೈತಪ್ಪುವುದು, ಸೋಮಾರಿತನ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಸ್ಥಿರಾಸ್ತಿ ವಿಚಾರದಲ್ಲಿ ಗೊಂದಲ, ದಾಂಪತ್ಯದಲ್ಲಿ ಕಲಹ.
ಧನಸ್ಸು: ಹಣಕಾಸು ವಿಚಾರವಾಗಿ ತೊಂದರೆ, ಆಕಸ್ಮಿಕ ಅಪಘಾತವಾಗು ಸಾಧ್ಯತೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅನಿರೀಕ್ಷಿತವಾಗಿ ಸಂಕಷ್ಟಗಳಿಂದ ದೂರವಾಗುವಿರಿ.
ಮಕರ: ಸ್ನೇಹಿತರಿಂದ ಹಣಕಾಸು ಮೋಸ, ಧಾರ್ಮಿಕ ಕಾರ್ಯಗಳಿಗೆ ಅಧಿಕ ಖರ್ಚು, ದಾನ-ಧರ್ಮಕ್ಕಾಗಿ ಹಣ ವಿನಿಯೋಗ, ಅಪಪ್ರಚಾರಗಳಿಂದ ವಿವಾಹದಲ್ಲಿ ಅಡೆತಡೆ.
ಕುಂಭ: ಉದ್ಯೋಗ ಸ್ಥಳದಲ್ಲಿ ಶತ್ರುಕಾಟ, ಸಾಲ ಬಾಧೆ, ಗುಪ್ತ ರೋಗ ಬಾಧೆ, ಆಹಾರ-ನೀರು ವ್ಯತ್ಯಾಸದಿಂದ ಅನಾರೋಗ್ಯ.
ಮೀನ: ತಂದೆಯಿಂದ ಮಾನ ಅಪಮಾನ, ಉದ್ಯೋಗದಲ್ಲಿ ಬಡ್ತಿ, ಗೌರವ-ಕೀರ್ತಿ, ಪ್ರತಿಷ್ಠೆ ಪ್ರಾಪ್ತಿ, ಮಕ್ಕಳ ತಪ್ಪಿನಿಂದ ತೊಂದರೆ, ಅನಗತ್ಯ ಖರ್ಚು ಮಾಡುವಿರಿ.