Connect with us

Dina Bhavishya

ದಿನ ಭವಿಷ್ಯ 30-11-2017

Published

on

ಪಂಚಾಂಗ

ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಮಾರ್ಗಶಿರ ಮಾಸ,
ಶುಕ್ಲ ಪಕ್ಷ, ಏಕಾದಶಿ ತಿಥಿ,
ಬೆಳಗ್ಗೆ 9:27 ನಂತರ ದ್ವಾದಶಿ ತಿಥಿ,
ಗುರುವಾರ, ರೇವತಿ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 1:38 ರಿಂದ 3:04
ಗುಳಿಕಕಾಲ: ಬೆಳಗ್ಗೆ 9:20 ರಿಂದ 10:46
ಯಮಗಂಡಕಾಲ: ಬೆಳಗ್ಗೆ 6:27 ರಿಂದ 7:54

ಮೇಷ: ತಾಂತ್ರಿಕ-ಟ್ರಾವೆಲ್ಸ್ ವೃತ್ತಿಪರರಿಗೆ ಲಾಭ, ಸೊಸೆಯಿಂದ ನೋವು, ಚಿಕ್ಕಪ್ಪನಿಂದ ಸಮಸ್ಯೆ, ಚರ್ಮ ತುರಿಕೆ, ನರ ದೌರ್ಬಲ್ಯ, ಆರೋಗ್ಯದಲ್ಲಿ ಏರುಪೇರು.

ವೃಷಭ: ಆಕಸ್ಮಿಕ ಧನ ಲಾಭ, ಗರ್ಭಿಣಿಯರು ಎಚ್ಚರಿಕೆ, ಕೆಟ್ಟ ದೃಷ್ಠಿಯಿಂದ ಅನಾಹುತ, ಉದ್ಯೋಗದಲ್ಲಿ ಒತ್ತಡ, ವೃತ್ತಿ ಕ್ಷೇತ್ರ ಬದಲಾಯಿಸುವ ಆಲೋಚನೆ, ಮಕ್ಕಳಲ್ಲಿ ಬೇಜವಾಬ್ದಾರಿ, ಮಾನಸಿಕ ಬೇಸರ.

ಮಿಥುನ: ಸ್ವಂತ ಉದ್ಯಮ ವ್ಯಾಪಾರದಲ್ಲಿ ನಷ್ಟ, ಮಾಟ-ಮಂತ್ರ ಭೀತಿ, ಭವಿಷ್ಯದ ಬಗ್ಗೆ ಆತಂಕ, ತಂದೆಯಿಂದ ಸಾಲ ಬಾಧೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ.

ಕಟಕ: ವಿಪರೀತ ನಷ್ಟ-ನಿರಾಸೆಗಳು, ಸಲ್ಲದ ಅಪವಾದ, ಗೌರವಕ್ಕೆ ಧಕ್ಕೆ, ಹೀಯಾಳಿಕೆ ಮಾತುಗಳಿಂದ ಜಿಗುಪ್ಸೆ, ವ್ಯಾಪಾರ-ವ್ಯವಹಾರ ಆರಂಭಿಸುವ ಯೋಚನೆ, ಆರೋಗ್ಯ ಸಮಸ್ಯೆ.

ಸಿಂಹ: ರಿಯಲ್ ಎಸ್ಟೇಟ್‍ನವರಿಗೆ ಲಾಭ, ಎಲೆಕ್ಟ್ರಾನಿಕ್ ಕ್ಷೇತ್ರದವರಿಗೆ ಅನುಕೂಲ, ಅಧಿಕ ಉಷ್ಣ ಬಾಧೆ, ಬಾಯಿಗೆ ಹುಣ್ಣು, ಚರ್ಮ ತುರಿಕೆ, ಮಕ್ಕಳಿಗೆ ಪೆಟ್ಟು,ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಪಾಲುದಾರಿಯಿಂದ ದೂರ ಉಳಿಯಲು ಯತ್ನ.

ಕನ್ಯಾ: ಮೋಜು-ಮಸ್ತಿ ಜೀವನಕ್ಕೆ ಮನಸ್ಸು, ಅಕ್ರಮ ಸಂಪಾದನೆ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಶತ್ರುಗಳ ಕಾಟ, ಉದ್ಯೋಗ ನಷ್ಟ, ಅನಾರೋಗ್ಯದಿಂದ ನರಳಾಟ.

ತುಲಾ: ಪ್ರಯಾಣದಲ್ಲಿ ಬೇಸರ, ಹಣ ಕಳೆದುಕೊಳ್ಳುವಿರಿ, ಮಕ್ಕಳಿಂದ ನೋವು, ದೈವ ನಿಂದನೆ, ನಿದ್ರಾಭಂಗ.

ವೃಶ್ಚಿಕ: ಪೆಟ್ಟಾಗುವ ಸಾಧ್ಯತೆ, ಆರೋಗ್ಯದಲ್ಲಿ ವ್ಯತ್ಯಾಸ, ಮನೆಯಲ್ಲಿ ಅಶಾಂತಿ, ಶತ್ರುಗಳಿಂದ ಭೀತಿ, ನಿರಾಸಕ್ತಿ ಜೀವನ, ಸೈಟ್-ವಾಹನ ನಷ್ಟ, ಮಿತ್ರರಿಂದ ಧನಾಗಮನ.

ಧನಸ್ಸು: ಸ್ಥಳ ಬದಲಾವಣೆ, ಉದ್ಯೋಗ ಬದಲಾವಣೆಗೆ ಮನಸ್ಸು, ಅಕ್ಕ ಪಕ್ಕದವರಿಂದ ಕಿರಿಕಿರಿ, ಆತ್ಮಗೌರವಕ್ಕೆ ಧಕ್ಕೆ, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ವ್ಯಥೆ.

ಮಕರ: ನೆರೆಹೊರೆಯವರಿಂದ ತೊಂದರೆ, ಸಾಲ ಬಾಧೆ, ದೂರ ಪ್ರಯಾಣ, ಆರ್ಥಿಕ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು.

ಕುಂಭ: ಮಕ್ಕಳಿಂದ ಅನುಕೂಲ, ಅನಗತ್ಯ ಮಾತಿನಿಂದ ಶತ್ರುತ್ವ, ವಾಗ್ವಾದ ಹೆಚ್ಚಾಗುವುದು, ಮಿತ್ರರಿಂದ ನೋವು, ಗೌರವ ಸನ್ಮಾನಗಳಿಗೆ ಅಡೆತಡೆ, ಬಿದ್ದು ಪೆಟ್ಟು ಮಾಡಿಕೊಳ್ಳುವಿರಿ.

ಮೀನ: ಸ್ಥಿರಾಸ್ತಿ-ವಾಹನ ಖರೀದಿ, ಉದ್ಯೋಗದಲ್ಲಿ ನಷ್ಟ, ನಷ್ಟ ನಿರಾಸೆ ಹೆಚ್ಚು, ಸಂಗಾತಿಯಿಂದ ನಿದ್ರಾಭಂಗ, ನಿದ್ರೆಯಲ್ಲಿ ಕೆಟ್ಟ ಕನಸು, ದುಶ್ಚಟಗಳಿಂದ ದೂರವಿರಿ.

Click to comment

Leave a Reply

Your email address will not be published. Required fields are marked *