ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ದ್ವಿತೀಯಾ ಉಪರಿ ತೃತೀಯಾ
ಸೋಮವಾರ, ಧನಿಷ್ಟ ಉಪರಿ ಶತಭಿಷ ನಕ್ಷತ್ರ
Advertisement
ರಾಹುಕಾಲ: ಬೆಳಗ್ಗೆ 7:45 ರಿಂದ 9:20
ಗುಳಿಕಕಾಲ: ಮಧ್ಯಾಹ್ನ 2:05 ರಿಂದ 3:40
ಯಮಗಂಡಕಾಲ: ಬೆಳಗ್ಗೆ 10:55 ರಿಂದ 12:30
Advertisement
ಮೇಷ: ಆಕಸ್ಮಿಕ ಧನ ಲಾಭ, ಸ್ತ್ರೀಯರಿಗೆ ಲಾಭ ಮಾನಸಿಕ ಒತ್ತಡ, ಋಣ ವಿಮೋಚನೆ, ಶತ್ರುಗಳಿಂದ ಜಯ.
Advertisement
ವೃಷಭ: ಚಂಚಲ ಮನಸ್ಸು, ವ್ಯಾಪಾರ ವ್ಯವಹಾರದಲ್ಲಿ ಅಲ್ಪ ಲಾಭ, ಶತ್ರುಗಳ ಬಾಧೆ, ಅತಿಯಾದ ಕೋಪ, ದೂರ ಪ್ರಯಾಣ.
Advertisement
ಮಿಥುನ: ರಾಜಕೀಯ ವ್ಯಕ್ತಿಗಳಿಗೆ ತೊಂದರೆ, ವಾಹನ ಅಪಘಾತ ಸಾಧ್ಯತೆ, ಮಾನಸಿಕ ವ್ಯಥೆ, ದಾಂಪತ್ಯದಲ್ಲಿ ಕಲಹ, ಹಿರಿಯರಲ್ಲಿ ಗೌರವ.
ಕಟಕ: ಅನಾವಶ್ಯಕ ಮಾತುಗಳಿಂದ ದೂರವಿರಿ, ಶ್ರಮಕ್ಕೆ ತಕ್ಕ ಫಲ, ಪಿತ್ರಾರ್ಜಿತ ಆಸ್ತಿ ಮಾರಾಟ, ವಿದ್ಯೆಯಲ್ಲಿ ಹಿನ್ನಡೆ.
ಸಿಂಹ: ರೇಷ್ಮೆ ವ್ಯಾಪಾರಿಗಳಿಗೆ ಲಾಭ, ಉದ್ಯೋಗದಲ್ಲಿ ಬಡ್ತಿ, ಉತ್ತಮ ಬುದ್ಧಿಶಕ್ತಿ, ಮಕ್ಕಳ ಆರೋಗ್ಯದಲ್ಲಿ ಏರುಪೇರು.
ಕನ್ಯಾ: ಕೈಗೊಂಡ ಕಾರ್ಯಗಳಲ್ಲಿ ವಿಳಂಬ, ಅನ್ಯರೊಂದಿಗೆ ನಿಷ್ಠೂರ, ಪರರಿಂದ ಸಹಾಯ, ಮಾನಸಿಕ ನೆಮ್ಮದಿ.
ತುಲಾ: ಉದ್ಯೋಗದಲ್ಲಿ ಕಿರಿಕಿರಿ, ವಿದ್ಯಾರ್ಥಿಗಳಲ್ಲಿ ಪ್ರತಿಭೆ, ಮಾನಸಿಕ ನೆಮ್ಮದಿ, ಆರೋಗ್ಯದಲ್ಲಿ ವ್ಯತ್ಯಾಸ, ನಂಬಿಕಸ್ಥರಿಂದ ದ್ರೋಹ.
ವೃಶ್ಚಿಕ: ಮಿತ್ರರಿಂದ ನಿಂದನೆ, ಇಲ್ಲ ಸಲ್ಲದ ಅಪವಾದ, ವಾಗ್ವಾದಗಳಲ್ಲಿ ಜಯ, ಅತಿಯಾದ ಕೋಪಗೊಂಡು ಸಮಾಧಾನಗೊಳ್ಳುವಿರಿ.
ಧನಸ್ಸು: ಅನಿರೀಕ್ಷಿತ ಧನಲಾಭ, ಧಾರ್ಮಿಕ ಕಾರ್ಯಗಳಲ್ಲಿ ಒಲವು, ಶತ್ರುಗಳ ಬಾಧೆ, ಯತ್ನ ಕಾರ್ಯದಲ್ಲಿ ಜಯ, ವಿವಾಹ ಯೋಗ.
ಮಕರ: ಈ ದಿನ ತಾಳ್ಮೆ ಅತ್ಯಗತ್ಯ, ಕಾರ್ಯದಲ್ಲಿ ಪ್ರಗತಿ, ಚಂಚಲ ಮನಸ್ಸು, ಅನಗತ್ಯ ನಿಷ್ಠೂರ ಮಾಡಿಕೊಳ್ಳುವಿರಿ, ಕಾರ್ಯ ಸಾಧನೆಗಾಗಿ ತಿರುಗಾಟ.
ಕುಂಭ: ಕಾರ್ಯ ಕ್ಷೇತ್ರದಲ್ಲಿ ಪ್ರಗತಿ, ವಿವಾದಗಳಿಂದ ದೂರವಿರಿ, ತೀರ್ಥಯಾತ್ರೆ ದರ್ಶನ, ವಿದೇಶ ಪ್ರಯಾಣ.
ಮೀನ: ಯಾರನ್ನೂ ಹೆಚ್ಚು ನಂಬಬೇಡಿ, ಪರಸ್ಥಳ ವಾಸ, ದಂಡ ಕಟ್ಟುವ ಸಾಧ್ಯತೆ, ಸುಖ ಭೋಜನ, ಕುಟುಂಬದಲ್ಲಿ ಪ್ರೀತಿ.