ಪಂಚಾಂಗ
ಸಂವತ್ಸರ: 1948, ಪರಾಭವ
ಋತು: ಗ್ರೀಷ್ಮ
ಅಯನ: ಉತ್ತರಾಯಣ
ಮಾಸ: ಜ್ಯೇಷ್ಠ
ಪಕ್ಷ: ಶುಕ್ಲ
ತಿಥಿ: ಚತುರ್ದಶಿ
ನಕ್ಷತ್ರ: ಜ್ಯೇಷ್ಠಾ
ರಾಹುಕಾಲ: 05:12 – 06:49
ಗುಳಿಕಕಾಲ: 03:36 – 05:12
ಯಮಗಂಡಕಾಲ: 12:22 – 01:59
ಮೇಷ: ಪ್ರಯತ್ನಕ್ಕೆ ತಕ್ಕ ಪ್ರತಿಫಲ, ಆರೋಗ್ಯದಲ್ಲಿ ಸುಧಾರಣೆ, ಗೃಹೋದ್ಯಮ ಉತ್ಪನ್ನಗಳಿಂದ ಜನಪ್ರಿಯತೆ.
ವೃಷಭ: ದೂರ ಪ್ರಯಾಣ ಸಾಧ್ಯತೆ, ವ್ಯಾಜ್ಯದಲ್ಲಿ ಜಯ, ಸ್ವಾಭಿಮಾನಕ್ಕೆ ಧಕ್ಕೆ.
ಮಿಥುನ: ನಂಬಿಕೆ ದ್ರೋಹ, ಹಿರಿಯರ ಆರೋಗ್ಯ ಸುಧಾರಣೆ, ತಾಳ್ಮೆ ಕಳೆದುಕೊಳ್ಳದೆ ವ್ಯವಹರಿಸಿ.
ಕಟಕ: ಸಾಲ ಮರುಪಾವತಿ, ಪತ್ನಿ ಆರೋಗ್ಯದಲ್ಲಿ ಏರುಪೇರು, ಕೆಲಸದ ಒತ್ತಡ.
ಸಿಂಹ: ವಾಹನ ರಿಪೇರಿಗೆ ಖರ್ಚು, ಆಸ್ತಿ ಖರೀದಿ ಪ್ರಯತ್ನಕ್ಕೆ ಮುನ್ನಡೆ, ಬಂಧುಗಳಿಂದ ಶುಭ ಸುದ್ದಿ.
ಕನ್ಯಾ: ಸ್ವಂತ ಉದ್ಯಮದಲ್ಲಿ ಅಭಿವೃದ್ಧಿ, ಕೈ ಹಾಕಿದ ಕೆಲಸಗಳಲ್ಲಿ ನಿರೀಕ್ಷಿತ ಪ್ರಗತಿ, ದುಡುಕು ಮಾತಿನಿಂದ ಸಂಕಷ್ಟ.
ತುಲಾ: ಮಿತ್ರರಿಂದ ಧನಸಹಾಯ, ಸೋದರರೊಂದಿಗೆ ವಿರಸ, ನಿವೇಶನ ಖರೀದಿಗೆ ಪ್ರಯತ್ನ.
ವೃಶ್ಚಿಕ: ಆಭರಣ ವ್ಯಾಪಾರಿಗಳಿಗೆ ಲಾಭ, ಮೇಲಾಧಿಕಾರಿಗಳಿಂದ ಪ್ರಶಂಸೆ, ಅನಿರೀಕ್ಷಿತ ನೆರವುಗಳಿಂದ ಸಂಕಷ್ಟ ಪರಿಹಾರ.
ಧನಸ್ಸು: ಹಿರಿಯರೊಂದಿಗೆ ಮಾತಿನ ಸಮರ, ಚತುರ ನಡೆನುಡಿಯಿಂದ ಲಾಭ, ಹಿತಶತ್ರುಗಳ ಕಾಟ.
ಮಕರ: ಹೊಸ ಯೋಜನೆಗೆ ಕಾರ್ಯರೂಪ, ಸರ್ಕಾರಿ ನೌಕರರಿಗೆ ವರ್ಗಾವಣೆಯ ಭಯ, ಲೇವಾದೇವಿ ವ್ಯವಹಾರದಲ್ಲಿ ನಷ್ಟ.
ಕುಂಭ: ಉಳಿತಾಯ ಯೋಜನೆಯಲ್ಲಿ ಹಣ ಹೂಡಿಕೆ, ಸ್ವಂತ ಕೆಲಸಕ್ಕೆ ಆದ್ಯತೆ ಇರಲಿ, ಉದ್ಯೋಗದಲ್ಲಿ ಹೊಸ ಹೊಣೆಗಾರಿಕೆ.
ಮೀನ: ಅತಿಯಾದ ಆತ್ಮವಿಶ್ವಾಸ ಬೇಡ, ಸಣ್ಣ ಯೋಜನೆಗಳಿಂದ ಯಶಸ್ಸು, ವಾಹನ ಖರೀದಿಗೆ ಹಣಕಾಸಿನ ಅಡಚಣೆ.
