Connect with us

Dina Bhavishya

ದಿನ ಭವಿಷ್ಯ: 27-10-2018

Published

on

ಪಂಚಾಂಗ

ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಕೃಷ್ಣ ಪಕ್ಷ, ತೃತೀಯಾ ತಿಥಿ,
ಶನಿವಾರ, ಕೃತ್ತಿಕಾ ನಕ್ಷತ್ರ

ರಾಹುಕಾಲ: ಬೆಳಗ್ಗೆ 9:11 ರಿಂದ 10:39
ಗುಳಿಕಕಾಲ: ಬೆಳಗ್ಗೆ 6:15 ರಿಂದ 7:43
ಯಮಗಂಡಕಾಲ: ಮಧ್ಯಾಹ್ನ 1:35 ರಿಂದ 3:03

ದಿನ ವಿಶೇಷ: ಸಂಕಷ್ಟಹರ ಚತುರ್ಥಿ.

ಮೇಷ: ಮಕ್ಕಳಿಂದ ಅವಮಾನ, ಕುಟುಂಬ ಗೌರವಕ್ಕೆ ಧಕ್ಕೆ, ಪ್ರೇಮ ವಿಚಾರಕ್ಕೆ ವಿರೋಧ, ದಾಂಪತ್ಯದಲ್ಲಿ ಸಂಶಯ, ಸಂಗಾತಿಯಿಂದ ನೋವು.

ವೃಷಭ: ಸಾಲ ಬಾಧೆ, ಶತ್ರು ಕಾಟ, ಕುಟುಂಬದಲ್ಲಿ ಆತಂಕ, ಅನ್ಯರಿಂದ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು.

ಮಿಥುನ: ಪ್ರೇಮ ವಿಚಾರದಲ್ಲಿ ಮೋಸ, ಜೂಜಾಟಗಳಿಂದ ನಷ್ಟ, ದುಶ್ಚಟಗಳಿಂದ ತೊಂದರೆ, ಬಂಧುಗಳಿಂದ ಕಲಹ, ಪ್ರಯಾಣದಲ್ಲಿ ತಡೆ.

ಕಟಕ: ಹಣಕಾಸು ವ್ಯವಹಾರದಲ್ಲಿ ಮೋಸ, ಅಧಿಕ ನಷ್ಟ, ನೀವಾಡುವ ಮಾತಿನಿಂದ ಸಮಸ್ಯೆ, ಮಿತ್ರರನ್ನು ಶತ್ರುಗಳಾಗಿ ಮಾಡಿಕೊಳ್ಳುವಿರಿ, ಕೆಟ್ಟ ಕನಸುಗಳು, ಕುಟುಂಬದಲ್ಲಿ ಅಶಾಂತಿ, ಆಲೋಚನೆಗಳಿಂದ ನಿದ್ರಾಭಂಗ.

ಸಿಂಹ: ತಲೆ ನೋವು, ಆರೋಗ್ಯದಲ್ಲಿ ಏರುಪೇರು, ಸರ್ಕಾರಿ ಉದ್ಯೋಗಸ್ಥರಿಗೆ ಲಾಭ, ಅಕ್ರಮ ಹಣ ಸಂಪಾದನೆ, ಆತುರ ನಿರ್ಧಾರದಿಂದ ಸಮಸ್ಯೆ, ಸ್ನೇಹಿತರನ್ನು ದೂರ ಮಾಡಿಕೊಳ್ಳುವಿರಿ.

ಕನ್ಯಾ: ಆಕಸ್ಮಿಕ ಅನಗತ್ಯ ತೀರ್ಮಾನ, ಉದ್ಯೋಗ ನಷ್ಟ ಸಾಧ್ಯತೆ, ಉದ್ಯೋಗದಲ್ಲಿ ಒತ್ತಡ, ನಿದ್ರಾಭಂಗ, ಅಗೌರವದ ಕೆಲಸ ಮಾಡುವಿರಿ.

ತುಲಾ: ಸ್ವಯಂಕೃತ ಅಪರಾಧಗಳಿಂದ ತೊಂದರೆ, ಸ್ನೇಹಿತರ ಮೇಲೆ ಸಂಶಯ, ನಂಬಿಕೆ ಕಳೆದುಕೊಳ್ಳುವಿರಿ, ಗೌರವ ಪ್ರತಿಷ್ಠೆಗೆ ಕಳಂಕ.

ವೃಶ್ಚಿಕ: ಉದ್ಯೋಗ ಸ್ಥಳದಲ್ಲಿ ದುರ್ಘಟನೆ, ಸಂಶಯಾತ್ಮಕ ಸನ್ನಿವೇಶ, ಅನಿರೀಕ್ಷಿತ ಉದ್ಯೋಗ ನಷ್ಟ, ಕಾರ್ಯ ಕರ್ತವ್ಯಗಳಲ್ಲಿ ಹಿನ್ನಡೆ, ಮೇಲಾಧಿಕಾರಿಗಳಿಂದ ಕಿರಿಕಿರಿ.

ಧನಸ್ಸು: ಪ್ರಯಾಣದಲ್ಲಿ ಶತ್ರುಕಾಟ, ಶಕ್ತಿ ದೇವತೆಗಳ ಆರಾಧನೆ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಮಾಟ-ಮಂತ್ರ ತಂತ್ರಗಾರಿಕೆಗೆ ಮನಸ್ಸು.

ಮಕರ: ಶತ್ರು ದಮನ, ಆಕಸ್ಮಿಕ ಉದ್ಯೋಗ ಪ್ರಾಪ್ತಿ, ಆಯುಷ್ಯಕ್ಕೆ ಕಂಟಕ, ಕೋರ್ಟ್-ಕೇಸ್‍ ಗಳಿಂದ ನೋವು.

ಕುಂಭ: ಸಂಗಾತಿಯ ಮೇಲೆ ಸಂಶಯ, ಪ್ರೀತಿ-ಪ್ರೇಮ ವಿಚಾರದಲ್ಲಿ ಮೋಸ, ಭಾವನೆಗಳಿಗೆ ಧಕ್ಕೆ, ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ.

ಮೀನ: ಪಿತ್ರಾರ್ಜಿತ ಆಸ್ತಿಗಾಗಿ ಕಲಹ, ವಾಹನಗಳಿಂದ ಪೆಟ್ಟು, ತಲೆ ನೋವು, ಪಿತ್ತ ಬಾಧೆ, ಹೃದಯ ಸಂಬಂಧಿತ ರೋಗ,ಆರೋಗ್ಯದಲ್ಲಿ ಏರುಪೇರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *