ಪಂಚಾಂಗ:
ಶ್ರೀ ಪರಾಭವ ನಾಮ ಸಂವತ್ಸರ
ದಕ್ಷಿಣಾಯನ, ಗ್ರೀಷ್ಮ ಋತು
ಆಷಾಢ ಮಾಸ, ಶುಕ್ಲ ಪಕ್ಷ
ವಾರ: ಸೋಮವಾರ, ತಿಥಿ: ತ್ರಯೋದಶಿ
ನಕ್ಷತ್ರ: ಮೂಲ
ರಾಹುಕಾಲ: 7.45 ರಿಂದ 9.20
ಗುಳಿಕಕಾಲ: 2.05 ರಿಂದ 3.40
ಯಮಗಂಡಕಾಲ: 10.55 ರಿಂದ 12.30
ಮೇಷ: ವಿವಿಧ ಮೂಲಗಳಿಂದ ಧನ ಲಾಭ, ವೈರಿಗಳಿಂದ ದೂರವಿರಿ, ಮನಶಾಂತಿ, ಉದಾಸೀನದಿಂದ ಅಮೂಲ್ಯ ವಸ್ತು ಖರೀದಿ.
ವೃಷಭ: ಮಾತಾಪಿತರರಲ್ಲಿ ಪ್ರೀತಿ ವಾತ್ಸಲ್ಯ, ಕುಟುಂಬ ಸೌಖ್ಯ, ಕೃಷಿಯಲ್ಲಿ ನಷ್ಟ, ವಿಪರೀತ ಕೋಪ, ಆರೋಗ್ಯದಲ್ಲಿ ಏರುಪೇರು.
ಮಿಥುನ: ಅಪರಿಚಿತರ ವಿಷಯದಲ್ಲಿ ಜಾಗೃತೆ, ವಿದ್ಯಾರ್ಥಿಗಳಲ್ಲಿ ಗೊಂದಲ, ಕ್ರಯ ವಿಕ್ರಯಗಳಿಂದ ಅಲ್ಪ ಲಾಭ.
ಕಟಕ: ಸ್ತ್ರೀಯರು ತಾಳ್ಮೆಯಿಂದಿರಿ, ಮಕ್ಕಳಿಂದ ಸಂತಸ, ಪರಾಕ್ರಮ ಕೆಲಸಗಳಲ್ಲಿ ಯಶಸ್ಸು .
ಸಿಂಹ: ಅಧಿಕಾರಿಗಳಿಂದ ತೊಂದರೆ, ಕೋರ್ಟ್ ವ್ಯವಹಾರಗಳಲ್ಲಿ ಜಯ, ಮನಶಾಂತಿ, ಮಿತ್ರರ ಸಹಾಯ, ಸುಖ ಭೋಜನ.
ಕನ್ಯಾ: ಪರಿಶ್ರಮಕ್ಕೆ ತಕ್ಕ ಫಲ, ಕಾರ್ಯ ಸಾಧನೆಗಾಗಿ ತಿರುಗಾಟ, ದೇವತಾ ಕಾರ್ಯಗಳಲ್ಲಿ ಭಾಗಿ, ಕುಟುಂಬ ಸೌಖ್ಯ.
ತುಲಾ: ಈ ದಿನ ಅಧಿಕ ಕೆಲಸ, ವಸ್ತ್ರ ವ್ಯಾಪಾರಿಗಳಿಗೆ ಅನಿರೀಕ್ಷಿತ ಲಾಭ, ಬಡ ರೋಗಿಗಳಿಗೆ ಕೈಲಾದ ಸಹಾಯ ಮಾಡಿ.
ವೃಶ್ಚಿಕ: ಈ ದಿನ ಹಿತೈಷಿಗಳ ಸಲಹೆ, ಹಣಕಾಸಿನ ಸಮಸ್ಯೆ, ಸಲ್ಲದ ಅಪವಾದ, ಗೆಳೆಯರೊಂದಿಗೆ ವೈಮನಸ್ಸು.
ಧನಸ್ಸು: ಯಂತ್ರೋಪಕರಣಗಳಿಂದ ಲಾಭ, ಕಾರ್ಯಸಿದ್ಧಿ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ ನಾನ ವಿಚಾರಗಳಲ್ಲಿ ಆಸಕ್ತಿ.
ಮಕರ: ಅತಿಯಾದ ದೇಹಾಲಸ್ಯ, ಸಾಲ ಮಾಡುವವಿರಿ, ಪರರಿಂದ ತೊಂದರೆ, ಷೇರು ವ್ಯವಹಾರಗಳಲ್ಲಿ ಎಚ್ಚರ.
ಕುಂಭ: ಎಷ್ಟೇ ಹಣ ಬಂದರೂ ಉಳಿಯುವದಿಲ್ಲ, ಸ್ತ್ರೀ ಸೌಖ್ಯ, ಚೋರ ಭಯ, ಚಂಚಲ ಸ್ವಭಾವ, ಅನಾರೋಗ್ಯ.
ಮೀನ: ವಿದ್ಯಾಭ್ಯಾಸದಲ್ಲಿ ಉತ್ತಮ, ಕೆಲಸ ಕಾರ್ಯಗಳಲ್ಲಿ ನಿಧಾನ ಗತಿ, ವಿದೇಶ ಪ್ರಯಾಣ, ಶತ್ರು ದ್ವಂಸ.
