ರಾಹುಕಾಲ – 7:39 ರಿಂದ 9:13
ಗುಳಿಕಕಾಲ – 1:55 ರಿಂದ 3:29
ಯಮಗಂಡಕಾಲ – 10.39 ರಿಂದ 12.13
ವಾರ : ಸೋಮವಾರ, ತಿಥಿ : ಏಕಾದಶಿ, ನಕ್ಷತ್ರ: ಪುಬ್ಬ
ಶ್ರೀ ಪರಾಭವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು ವೈಶಾಖ ಮಾಸ, ಶುಕ್ಲ ಪಕ್ಷ
ಮೇಷ: ಅಲ್ಪ ಆದಾಯ ಖರ್ಚು ಜಾಸ್ತಿ, ಮನಸ್ಸಿಗೆ ಚಿಂತೆ, ಅನಾರೋಗ್ಯ,ವೃಥಾ ತಿರುಗಾಟ, ಕುಟುಂಬದಲ್ಲಿ ಕಲಹ.
ವೃಷಭ: ಈ ದಿನ ಋಣಭಾದೆ, ಯತ್ನ ಕಾರ್ಯಗಳಲ್ಲಿ ವಿಳಂಬ, ಪರಸ್ಥಳವಾಸ, ವಿಪರೀತ ವ್ಯಸನ, ಆಲಸ್ಯ ಮನೋಭಾವ.
ಮಿಥುನ: ಈ ದಿನ ಉದ್ಯೋಗದಲ್ಲಿ ಕಿರಿಕಿರಿ, ಕೃಷಿಕರಿಗೆ ಅಲ್ಪ ಲಾಭ, ನಂಬಿಕಸ್ತರಿಂದ ಮೋಸ, ಶತ್ರುಭಾದೆ, ಸಲ್ಲದ ಅಪವಾದ.
ಕಟಕ: ಪ್ರಿಯ ಜನರ ಭೇಟಿ, ಅನಿರೀಕ್ಷಿತ ಧನ ಲಾಭ, ಋಣ ವಿಮೋಚನೆ, ಮಾನಸಿಕ ನೆಮ್ಮದಿ.
ಸಿಂಹ: ಈ ದಿನ ಕಾರ್ಯ ವಿಘಾತ, ಗುಪ್ತಾಂಗ ರೋಗಭಾದೆ, ಭೂಮಿಯಿಂದ ಲಾಭ, ಮಿತ್ರರಲ್ಲಿ ದ್ವೇಷ, ಅಕಾಲ ಭೋಜನ.
ಕನ್ಯಾ: ಈ ದಿನ ವಿಪರೀತ ಖರ್ಚು, ದೃಷ್ಟಿ ದೋಷದಿಂದ ತೊಂದರೆ, ವಿವಾಹ ಯೋಗ, ದಾಂಪತ್ಯದಲ್ಲಿ ಅನ್ಯೂನ್ಯತೆ.
ತುಲಾ: ಗುತ್ತಿಗೆ ಕೆಲಸಗಾರರಿಗೆ ಅನುಕೂಲ, ದ್ವಿಚಕ್ರವಾಹನದಿಂದ ತೊಂದರೆ, ಷೇರು ವ್ಯವಹಾರಗಳಲ್ಲಿ ಮೋಸ ಎಚ್ಚರ.
ವೃಶ್ಚಿಕ: ಹೋಟೆಲ್ ಉದ್ಯಮಿಗಳಿಗೆ ಶುಭ, ಕುಟುಂಬದಲ್ಲಿ ಶಾಂತಿ, ಅನಿರೀಕ್ಷಿತ ಆದಾಯ, ದೇವತಾ ಕಾರ್ಯ ನಡೆಸುವಿರಿ.
ಧನಸ್ಸು: ಈ ದಿನ ಪುಣ್ಯಕ್ಷೇತ್ರ ದರ್ಶನ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಅತಿಯಾದ ಪ್ರಯಾಣ, ಸ್ನೇಹಿತರಿಂದ ಸಹಾಯ.
ಮಕರ: ಅನ್ಯರಿಗೆ ಉಪಕಾರ ಮಾಡುದಿರಿ, ಹಿರಿಯರ ಹಿತ ನುಡಿ, ಸ್ತ್ರೀಯರಿಗೆ ಸಮಸ್ಯೆ, ಹಣಕಾಸು ಮುಗ್ಗಟ್ಟು.
ಕುಂಭ: ಈ ದಿನ ಮನೆಯಲ್ಲಿ ಸಂತಸ, ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ಕಾರ್ಯ ಸಾಧನೆ, ಸ್ಥಿರಾಸ್ತಿ ಖರೀದಿ, ಉತ್ತಮ ಬುದ್ಧಿಶಕ್ತಿ.
ಮೀನ: ಈ ದಿನ ಹೆತ್ತವರಲ್ಲಿ ಪ್ರೀತಿ,ಅವಕಾಶ ಕೈ ತಪ್ಪುವುದು, ಅತಿಯಾದ ಕೋಪ, ಕುತಂತ್ರದಿಂದ ಹಣ ಸಂಪಾದನೆ.

