ಪಂಚಾಂಗ
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜ್ಯೇಷ್ಠ ಮಾಸ,
ಕೃಷ್ಣಪಕ್ಷ, ನವಮಿ ತಿಥಿ,
ಬುಧವಾರ, ರೇವತಿ ನಕ್ಷತ್ರ
Advertisement
ರಾಹುಕಾಲ: ಮಧ್ಯಾಹ್ನ 12:26 ರಿಂದ 2:02
ಗುಳಿಕಕಾಲ: ಬೆಳಗ್ಗೆ 10:50 ರಿಂದ 12:26
ಯಮಗಂಡಕಾಲ: ಬೆಳಗ್ಗೆ 7:38 ರಿಂದ 9:14
Advertisement
ಮೇಷ: ಅನಗತ್ಯ ಖರ್ಚುಗಳಿಂದ ದೂರ ಉಳಿಯಿರಿ, ಶತ್ರುಗಳ ಕಾಟ ನಿವಾರಣೆ, ಮಾನಸಿಕ ನೆಮ್ಮದಿ ಪ್ರಾಪ್ತಿ, ಉನ್ನತ ಶಿಕ್ಷಣದಲ್ಲಿ ಪ್ರಗತಿ, ವ್ಯವಹಾರ ನಿಮಿತ್ತ ದೂರ ಪ್ರಯಾಣ.
Advertisement
ವೃಷಭ: ಮಾಡುವ ಕಾರ್ಯಕ್ಕೆ ಜನರಿಂದ ಬೆಂಬಲ, ನಿರೀಕ್ಷೆಗೆ ತಕ್ಕಂತೆ ಆದಾಯ ಲಭಿಸುವುದು, ಸರ್ಕಾರಿ ಕೆಲಸಗಳಿಗಾಗಿ ಓಡಾಟ, ತಾಳ್ಮೆಯಿಂದ ಕಾರ್ಯ ಪ್ರಗತಿ.
Advertisement
ಮಿಥುನ: ಮಾನಸಿಕ ವೇದನೆ, ವೃತ್ತಿಯಲ್ಲಿ ಸಣ್ಣ ಪುಟ್ಟ ತೊಂದರೆ, ಹಣಕಾಸು ವಿಚಾರದಲ್ಲಿ ಎಚ್ಚರ, ನಂಬಿಕಸ್ಥರಿಂದ ಮೋಸ ಹೋಗುವ ಸಾಧ್ಯತೆ.
ಕಟಕ: ವಾಹನ ಯೋಗ, ಪರಿಚಯಸ್ಥರಿಂದಲೇ ಮೋಸ, ಆರೋಗ್ಯದಲ್ಲಿ ವ್ಯತ್ಯಾಸ, ಅಕಾಲ ಭೋಜನ, ಈ ದಿನ ಮಿಶ್ರ ಫಲ.
ಸಿಂಹ: ಯತ್ನ ಕಾರ್ಯದಲ್ಲಿ ಜಯ, ಕ್ರಯ ವಿಕ್ರಯಗಳಲ್ಲಿ ಲಾಭ, ಹಿತ ಶತ್ರುಗಳ ಬಾಧೆ, ವ್ಯವಹಾರದಲ್ಲಿ ಬುದ್ಧವಂತಿಕೆ ಅವಶ್ಯಕ.
ಕನ್ಯಾ: ಸ್ವಯಂ ಸಾಮಥ್ರ್ಯದಿಂದ ಅವಕಾಶ ಪಡೆದುಕೊಳ್ಳುವಿರಿ, ವ್ಯವಹಾರದಲ್ಲಿ ಅಲ್ಪ ಲಾಭ, ಅಧಿಕವಾದ ಖರ್ಚು, ಸ್ಥಿರಾಸ್ತಿ ವಿಚಾರಗಳು ಇತ್ಯರ್ಥ ಸಾಧ್ಯತೆ.
ತುಲಾ: ಪಾಪ ಪ್ರಜ್ಞೆ ಕಾಡುವುದು, ರಾಜಕೀಯ ವ್ಯಕ್ತಿಗಳ ಭೇಟಿ, ಸೇವಕ ವರ್ಗದಿಂದ ತೊಂದರೆ, ಒಳ್ಳೆಯತನವನ್ನು ಅನ್ಯರು ಉಪಯೋಗಿಸಿಕೊಳ್ಳುವರು.
ವೃಶ್ಚಿಕ: ಬಂಧು-ಮಿತ್ರರಲ್ಲಿ ವೈಮನಸ್ಸು, ಮಾನಸಿಕ ವ್ಯಥೆ, ಆರೋಗ್ಯದಲ್ಲಿ ವ್ಯತ್ಯಾಸ, ಆಲಸ್ಯ ಮನೋಭಾವ, ಸ್ಥಳ ಬದಲಾವಣೆ, ಚಂಚಲ ಮನಸ್ಸು.
ಧನಸ್ಸು: ಅಧಿಕವಾದ ತಿರುಗಾಟ, ದುಷ್ಟ ಜನರಿಂದ ದೂರವಿರಿ, ಸಗಟು ವ್ಯಾಪಾರದಲ್ಲಿ ಧನ ಲಾಭ, ನಿರ್ಧಾರಗಳಲ್ಲಿ ಎಚ್ಚರ, ಯೋಚಿಸಿ ಒಪ್ಪಂದ ಮಾಡಿಕೊಳ್ಳುವುದು ಉತ್ತಮ.
ಮಕರ: ತಾತ್ಕಾಲಿಕ ಸಮಸ್ಯೆಗಳು ಬಗೆಹರಿಯುವುದು, ಮನೆ ನಿರ್ಮಾಣದ ಕೆಲಸಕ್ಕಾಗಿ ಖರ್ಚು, ದಾಂಪತ್ಯದಲ್ಲಿ ಪ್ರೀತಿ, ಮಾನಸಿಕ ನೆಮ್ಮದಿ ಲಭಿಸುವುದು.
ಕುಂಭ: ಉದ್ಯೋಗದಲ್ಲಿ ಹೆಚ್ಚಿನ ಒತ್ತಡ, ಸಹೋದ್ಯೋಗಿಗಳಿಂದ ತೊಂದರೆ, ಮನೆಯಲ್ಲಿ ನೆಮ್ಮದಿ ವಾತಾವರಣ, ಆರ್ಥಿಕ ಪರಿಸ್ಥಿತಿ ಚೇತರಿಕೆ.
ಮೀನ: ದಲ್ಲಾಳಿಗಳಿಗೆ ನಷ್ಟ ಸಾಧ್ಯತೆ, ಆರೋಗ್ಯದಲ್ಲಿ ಏರುಪೇರು, ಶತ್ರುಗಳ ಬಾಧೆ, ಸ್ತ್ರೀಯರಿಗೆ ಶುಭ, ಉದ್ಯೋಗದಲ್ಲಿ ಕಿರಿಕಿರಿ.