Astrology

ದಿನ ಭವಿಷ್ಯ: 25 -09 -2021

Published

on

Daily Horoscope in Kannada
Share this

ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,ದಕ್ಷಿಣಾಯಣ,
ವರ್ಷ ಋತು,ಭಾದ್ರಪದ ಮಾಸ,
ಕೃಷ್ಣಪಕ್ಷ, ಚತುರ್ಥಿ/ಪಂಚಮಿ,
ಶನಿವಾರ, ಭರಣಿ ನಕ್ಷತ್ರ/ಕೃತಿಕಾ ನಕ್ಷತ್ರ,
ರಾಹುಕಾಲ: 9:13 ರಿಂದ 10:44
ಗುಳಿಕಕಾಲ: 06:12 ರಿಂದ 07:42
ಯಮಗಂಡಕಾಲ: 01:45 ರಿಂದ 3:16

ಮೇಷ: ಕೆಲಸ ಕಾರ್ಯಗಳಲ್ಲಿ ಅನುಕೂಲ, ಸ್ಥಿರಾಸ್ತಿ ಮತ್ತು ವಾಹನ ನೋಂದಣಿಗೆ ಸುಸಮಯ, ಆರ್ಥಿಕ ಸಂಕಷ್ಟಗಳು, ಬಗೆಹರಿಯುವುದು.

ವೃಷಭ: ಆಸ್ತಿ ವಿಚಾರದಲ್ಲಿ ಕಿರಿಕಿರಿಗಳು, ಸಾಲದ ಸುಳಿಗೆ ಸಿಲುಕುವ ಸನ್ನಿವೇಶ, ರೋಗ ಬಾಧೆಗಳು, ಆಕಸ್ಮಿಕ ಘಟನೆಗಳಿಂದ ನೆಮ್ಮದಿ ಭಂಗ.

ಮಿಥುನ: ಅಧಿಕ ಧನವ್ಯಯ, ಅಧಿಕಾರಿಯಿಂದ/ರಾಜಕೀಯ ವ್ಯಕ್ತಿಯಿಂದ ಆರ್ಥಿಕ ನಷ್ಟ, ಅನಾರೋಗ್ಯ ಸಮಸ್ಯೆಗಳು ಭಾದಿಸುವುದು.

ಕಟಕ: ಅಧಿಕ ಲಾಭ, ಸಂಕಷ್ಟದಿಂದ ಮುಕ್ತಿಗೆ ಸುಸಂದರ್ಭ, ಅಹಂಭಾವದ ಮಾತಿನಿಂದ ಮಿತ್ರರಿಗೆ ನೋವು.

ಸಿಂಹ: ಉದ್ಯೋಗ ಲಾಭ, ಆರೋಗ್ಯ ವ್ಯತ್ಯಾಸಗಳಿಂದ ಖರ್ಚು, ಉದ್ಯೋಗ ನಿಮಿತ್ತ ದೂರ ಪ್ರಯಾಣ.

ಕನ್ಯಾ: ಪರಸ್ಥಳದಲ್ಲಿ ಉದ್ಯೋಗ ಲಾಭ, ಆತಂಕ ಮತ್ತು ನಿದ್ರಾಭಂಗ, ತಂದೆಯ ಮಿತ್ರರಿಂದ ಲಾಭ.

ತುಲಾ: ಉದ್ಯೋಗದಲ್ಲಿ ತೊಂದರೆ, ಉದ್ಯೋಗ ಬದಲಾವಣೆ ಮಾಡುವ ಸ್ಥಿತಿ, ಆತ್ಮಗೌರವಕ್ಕೆ ಅದೃಷ್ಟ ಒಲಿದು ಬರುವುದು.

ವೃಶ್ಚಿಕ: ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಮಿತ್ರರೊಂದಿಗೆ ಪ್ರಯಾಣ, ಅಡೆತಡೆಗಳ ನಿವಾರಣೆಗಳಿಂದ ಮಂದಹಾಸ.

ಧನಸ್ಸು: ರಾಜಕೀಯ ವ್ಯಕ್ತಿಗಳ ಭೇಟಿ, ಸಾಲಗಾರರಿಂದ ತೊಂದರೆ, ಪುಣ್ಯಕ್ಷೇತ್ರಗಳಿಗೆ ಪ್ರಯಾಣ.

ಮಕರ: ಮಕ್ಕಳಿಂದ ಆಕಸ್ಮಿಕ ಅವಘಡಗಳು, ಪೊಲೀಸ್ ಸ್ಟೇಷನ್ ಅಲೆದಾಡುವ ಸ್ಥಿತಿ, ದುರಾಲೋಚನೆಗಳಲ್ಲಿ ವಿಹರಿಸುವಿರಿ.

ಕುಂಭ: ಆಸ್ತಿ ಅಥವಾ ವಾಹನ ಮಾರಾಟ, ಪ್ರಯಾಣದಲ್ಲಿ ವಸ್ತುಗಳು ಕಳವು, ಶತ್ರುಗಳು ಅಧಿಕ.

ಮೀನ: ವಿದ್ಯಾಭ್ಯಾಸದ ನಿಮಿತ್ತ ಪ್ರಯಾಣ, ಆರೋಗ್ಯ ಸಮಸ್ಯೆ, ಕೆಲಸ ಕಾರ್ಯಗಳಲ್ಲಿ ಜಯ.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications