ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಕೃಷ್ಣ ಪಕ್ಷ, ದಶಮಿ ತಿಥಿ,
ಮಂಗಳವಾರ, ಪುನರ್ವಸು ನಕ್ಷತ್ರ
ರಾಹುಕಾಲ: ಮಧ್ಯಾಹ್ನ 3:17 ರಿಂದ 4:48
ಗುಳಿಕಕಾಲ: ಮಧ್ಯಾಹ್ನ 12:15 ರಿಂದ 1:46
ಯಮಗಂಡಕಾಲ: ಬೆಳಗ್ಗೆ 9:13 ರಿಂದ 10:44
Advertisement
ಮೇಷ: ಮಾತಿನ ಚಕಮಕಿಯಿಂದ ಕಲಹ, ಮನಸ್ಸಿನ ಮೇಲೆ ದುಷ್ಪರಿಣಾಮ, ಮಿತ್ರರಲ್ಲಿ ಶತ್ರುತ್ವ ವೃದ್ಧಿ, ಶತ್ರುಗಳ ಕಾಟ ಹೆಚ್ಚಾಗುವುದು.
Advertisement
ವೃಷಭ: ಹಿರಿಯರಿಂದ ಸಹಾಯ, ಯತ್ನ ಕಾರ್ಯದಲ್ಲಿ ಜಯ, ಅಧಿಕವಾದ ಕೋಪ, ವಿವಾಹ-ಮಂಗಳ ಕಾರ್ಯದಲ್ಲಿ ಭಾಗಿ.
Advertisement
ಮಿಥುನ: ತೀರ್ಥಯಾತ್ರೆ ದರ್ಶನ, ಕೋರ್ಟ್ ವ್ಯವಹಾರಗಳಲ್ಲಿ ಜಯ, ಸ್ಥಳ ಬದಲಾವಣೆ, ಆರೋಗ್ಯದಲ್ಲಿ ವ್ಯತ್ಯಾಸ, ನೆಮ್ಮದಿ ಇಲ್ಲದ ಜೀವನ.
Advertisement
ಕಟಕ: ವ್ಯಾಪಾರ-ವ್ಯವಹಾರಗಳಲ್ಲಿ ಲಾಭ, ಹಿತ ಶತ್ರುಗಳಿಂದ ತೊಂದರೆ, ಬಂಧು-ಮಿತ್ರರ ಭೇಟಿ, ಮಾಡುವ ಕಾರ್ಯದಲ್ಲಿ ಎಚ್ಚರ.
ಸಿಂಹ: ಪ್ರಿಯ ಜನರ ಭೇಟಿ, ಕೃಷಿಯಲ್ಲಿ ಲಾಭ, ಕಾರ್ಯ ಸಾಧನೆಗಾಗಿ ತಿರುಗಾಟ, ಮನೆಯಲ್ಲಿ ಸಂತಸ, ಸುಖ ಭೋಜನ ಪ್ರಾಪ್ತಿ.
ಕನ್ಯಾ: ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಕಾಳಜಿವಹಿಸಿ, ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ, ಆರೋಗ್ಯದಲ್ಲಿ ಏರುಪೇರು, ಈ ದಿನ ಮಿಶ್ರ ಫಲ ಪ್ರಾಪ್ತಿ.
ತುಲಾ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಸೇವಕರಿಂದ ಸಹಾಯ, ಅಕಾಲ ಭೋಜನ, ಅನ್ಯ ಜನರಲ್ಲಿ ದ್ವೇಷ, ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ.
ವೃಶ್ಚಿಕ: ಕಾರ್ಯ ಕ್ಷೇತ್ರದಲ್ಲಿ ಒತ್ತಡ, ಉತ್ತಮ ಪ್ರಗತಿ, ಶೀತ ಸಂಬಂಧಿತ ರೋಗ, ವಿವಾದಗಳಿಂದ ದೂರವಿರಿ.
ಧನಸ್ಸು: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಶೀಘ್ರದಲ್ಲಿ ಸಂತಸದ ಸುದ್ದಿ ಕೇಳುವಿರಿ, ವಿರೋಧಿಗಳಿಂದ ತೊಂದರೆ, ಈ ದಿನ ಸಮಾಧಾನಕರ ಫಲ.
ಮಕರ: ಬಾಕಿ ಹಣ ಕೈ ಸೇರುವುದು, ವಿಪರೀತ ವ್ಯಸನ, ಪರರಿಂದ ತೊಂದರೆ, ಸಣ್ಣ ಪುಟ್ಟ ವಿಷಯಗಳಿಂದ ಮನಃಸ್ತಾಪ.
ಕುಂಭ: ವ್ಯಾಪಾರ ವ್ಯವಹಾರಗಳಲ್ಲಿ ಏರುಪೇರು, ನಿಮ್ಮ ಪ್ರಾಮಾಣಿಕತೆಯಿಂದ ಶುಭ ಫಲ, ಯಶಸ್ಸಿನ ಮೆಟ್ಟಿಲೇರುವಿರಿ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ.
ಮೀನ: ಸ್ತ್ರೀಯರಿಗೆ ಅನುಕೂಲ, ವೃಥಾ ತಿರುಗಾಟ, ಅವಿವಾಹಿತರಿಗೆ ವಿವಾಹಯೋಗ, ಅಲ್ಪ ಕಾರ್ಯ ಸಿದ್ಧಿ, ಅಕಾಲ ಭೋಜನ, ಶತ್ರುಗಳ ಬಾಧೆ.