ಪಂಚಾಂಗ:
ಶ್ರೀವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಕೃಷ್ಣಪಕ್ಷ, ನವಮಿ ತಿಥಿ, ಶನಿವಾರ.
ಮೇಷ:ಮನೋಲ್ಲಾಸಕ್ಕೆ ಶುಭ ದಿನ, ದೂರದ ಪ್ರಯಾಣ ಮಾಡುವ ಸಂದರ್ಭ, ಬಂಧುಮಿತ್ರರಿಂದ ಸಹಕಾರ,
ಹೊಸ ಉದ್ಯೋಗ ಸೃಷ್ಟಿಸುವ ಲಕ್ಷಣ, ಉನ್ನತ ಸ್ಥಾನಮಾನಕ್ಕಾಗಿ ಓಡಾಟ, ಸರಕಾರಿ ನೌಕರರ ಪ್ರಯಾಣ.
Advertisement
ವೃಷಭ: ಮನೋಲ್ಲಾಸಕ್ಕೆ ಕಡಿವಾಣ, ಆರ್ಥಿಕ ವಲಯದಲ್ಲಿ ಕುಸಿತ, ಮನಸ್ಸಿಗೆ ಸಮಾಧಾನ ಕೊಡಲಾರದು, ಬಂಧು ಮಿತ್ರರ ಮಧ್ಯೆ ಕಲಹ, ಅನಿವಾರ್ಯವಾಗಿ ಖರ್ಚು, ಉದ್ಯೋಗಿಗಳಿಗೆ ಅಸಮಾಧಾನ, ತಂತ್ರಜ್ಞರಿಗೆ ಅನಾನುಕೂಲ.
Advertisement
ಮಿಥುನ: ವೈವಾಹಿಕ ಜೀವನದಲ್ಲಿ ಸಮಾಧಾನ, ಮಕ್ಕಳಿಂದ ಶುಭವಾರ್ತೆ, ಹೊಸ ಉದ್ಯೋಗವನ್ನು ಮಾಡುವ ಸಾಧ್ಯತೆ, ಹಣಕಾಸಿಗಾಗಿ ಪರದಾಟ, ಅನ್ಯರ ಮಾತಿನ ಬಗ್ಗೆ ಜಾಗ್ರತೆ, ವಿವಾಹಕ್ಕೆ ಅನುಕೂಲ.
Advertisement
ಕರ್ಕಾಟಕ: ಹೋಟೆಲ್ ಉದ್ಯಮಗಳಲ್ಲಿ ಲಾಭ, ಕೈಗಾರಿಕಾ ಪ್ರದೇಶದಲ್ಲಿ ಅನುಕೂಲ, ವಿದೇಶಯಾನದ ಯೋಗ, ನಿರುದ್ಯೋಗಿಗಳಿಗೆ ಉದ್ಯೋಗ, ವೈಜ್ಞಾನಿಕ ಕ್ಷೇತ್ರದಲ್ಲಿ ಮನ್ನಣೆ, ವಿದ್ಯಾರ್ಥಿಗಳಿಗೆ ಶುಭವಾರ್ತೆ.
Advertisement
ಸಿಂಹ: ಆರೋಗ್ಯದಲ್ಲಿ ವ್ಯತ್ಯಾಸ, ಆಸ್ಪತ್ರೆಗೆ ದಾಖಲಾಗುವ ಸಂಭವ, ಹಿರಿಯರ ಮಾತನ್ನು ಧಿಕ್ಕರಿಸುವುದು ಉತ್ತಮವಲ್ಲ, ಮಾನಸಿಕವಾದ ವ್ಯಥೆ, ಕಲಾವಿದರಿಗೆ ಅನಾನುಕೂಲ, ಬಾಂಧವರಿಂದ ಹೀಯಾಳಿಕೆ.
ಕನ್ಯಾ: ಹೆಣ್ಣುಮಕ್ಕಳಿಗೆ ಅನುಕೂಲ, ಉದ್ಯಮದಲ್ಲಿ ಸಮಾಧಾನ, ಬಾಂಧವರ ಮಧ್ಯೆ ಕಲಹ ಬೇಡ, ತಾಳ್ಮೆಯಿಂದ ಒಳಿತು, ಮಕ್ಳಳ ಬಗ್ಗೆ ಜಾಗ್ರತೆ, ಶುಭ ಕಾರ್ಯದಲ್ಲಿ ಸಮಾಧಾನ.
ತುಲಾ: ಮಾನಸಿಕ ನೆಮ್ಮದಿಗೆ ಸಮಾಧಾನ, ಉತ್ತಮ ಬಾಂಧವ್ಯ ವೃದ್ಧಿ, ಅನ್ಯರಿಂದ ಸಹಾಯ ಪ್ರಾಪ್ತಿ, ಪ್ರಗತಿಪರ ಜೀವನದಿಂದ ನೆಮ್ಮದಿ, ಕಬ್ಬಿಣ ವ್ಯಾಪಾರದಲ್ಲಿ ಲಾಭ.
ವೃಶ್ಚಿಕ: ಹಿರಿಯರಿಂದ ದೂರದ ಪ್ರಯಾಣ, ತೀರ್ಥಕ್ಷೇತ್ರ ಯಾತ್ರೆಯಿಂದ ಸಮಾಧಾನ, ಪರರಿಗೆ ಉಪಕಾರ ಮಾಡುವ ಲಕ್ಷಣ, ಕಪ್ಪು ಬಟ್ಟೆ ಧರಿಸುವುದು ಉತ್ತಮವಲ್ಲ, ಅನ್ಯೋನ್ಯತೆಯಿಂದ ಜೀವನ ಅಸಾಧ್ಯ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.
ಧನಸ್ಸು: ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳ ವಿಚಾರದಲ್ಲಿ ವೈಮನಸ್ಸು, ಹಣಕಾಸಿನ ಖರ್ಚು, ದೇಹದಲ್ಲಿ ಹೆಚ್ಚು ಆಯಾಸ, ಬಂಧುಗಳಿಂದ ಅನಾನುಕೂಲ, ಇಲ್ಲ ಸಲ್ಲದ ಅಪವಾದ.
ಮಕರ: ಅಂದುಕೊಂಡ ಕಾರ್ಯದಲ್ಲಿ ಯಶಸ್ಸು, ಬಂಧುಗಳ ಮಧ್ಯೆ ಕಲಹ ಸಾಧ್ಯತೆ, ಮಕ್ಕಳ ವಿಚಾರದಲ್ಲಿಯೂ ಮನಸ್ಸು ವಿಚಲಿತ, ಅನಿವಾರ್ಯವಾದ ಪ್ರಯಾಣ, ಹಿರಿಯರ ಅಗಲುವಿಕೆ ಬೇಸರ, ಕಬ್ಬಿಣ ವ್ಯಾಪಾರದಲ್ಲಿ ನಷ್ಟ.
ಕುಂಭ: ಮಾಡುತ್ತಿರುವ ಉದ್ಯಮದಲ್ಲಿ ಲಾಭ, ಹೊಸ ವಿಚಾರಗಳಲ್ಲಿ ತಲೆ ಹಾಕುವುದು ಉತ್ತಮ, ಅನ್ವೇಷಣೆಯಿಂದ ಲಾಭ, ಕಲಾವಿದರಿಗೆ ಅನುಕೂಲ, ಹೊಸ ಯೋಜನೆಗಳಿಂದ ಗೌರವ ಪ್ರಾಪ್ತಿ.
ಮೀನ: ಮನಸ್ಸಿಗೆ ನೆಮ್ಮದಿ, ಬಂಧುಗಳಿಂದ ಸಹಕಾರ, ಆರೋಗ್ಯದಲ್ಲಿ ಸುಧಾರಣೆ, ಹಿರಿಯರ ಮಾತಿನಿಂದ ಸಮಾಧಾನ, ಆರ್ಥಿಕ ಪ್ರಗತಿ, ಸ್ಥಿರಾಸ್ತಿಯಿಂದ ಲಾಭ.