ಪಂಚಾಂಗ
ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯಣ,
ವರ್ಷ ಋತು, ಶ್ರವಣ ಮಾಸ, ಕೃಷ್ಣ ಪಕ್ಷ,
ವಾರ:ಸೋಮವಾರ, ತಿಥಿ:ಪಾಡ್ಯ, ನಕ್ಷತ್ರ:ಶತಭಿಷ,
ರಾಹುಕಾಲ : 7.46 ರಿಂದ 9.19
ಗುಳಿಕಕಾಲ : 1.59 ರಿಂದ 3.32
ಯಮಗಂಡಕಾಲ : 10.52 ರಿಂದ 12.25
Advertisement
ಮೇಷ: ಶ್ರಮಕ್ಕೆ ತಕ್ಕ ಫಲ, ಕುಟುಂಬದಲ್ಲಿ ಶಾಂತಿಯ ವಾತಾವರಣ, ಇತರರನ್ನು ನಿಂದಿಸುವಿರಿ, ಉದ್ವೇಗಕ್ಕೆ ಒಳಗಾಗುವಿರಿ.
Advertisement
ವೃಷಭ: ದೂರ ಪ್ರಯಾಣ, ಸ್ವಜನ ವಿರೋಧ, ಶತ್ರುಭಯ, ಸಣ್ಣಪುಟ್ಟ ವಿಷಯಗಳಿಂದ ವೈಮನಸ್ಯ, ಶರೀರದಲ್ಲಿ ಆಲಸ್ಯ.
Advertisement
ಮಿಥುನ: ಸುಗಂಧ ದ್ರವ್ಯಗಳಿಗೆ ಅಧಿಕ ಖರ್ಚು, ದಾಂಪತ್ಯ ವಿರಸ, ನೆಮ್ಮದಿ ಇಲ್ಲದ ಜೀವನ.
Advertisement
ಕಟಕ: ಇಷ್ಟವಾದ ವಸ್ತು ಖರೀದಿ, ಬಂಧಗಳಿಂದ ಸಹಕಾರ, ಮನಸ್ಸಿನಲ್ಲಿ ಭಯ, ಅನಿರೀಕ್ಷಿತ ತೊಂದರೆಗಳು.
ಸಿಂಹ: ದೂರ ಪ್ರಯಾಣ, ವಿಪರೀತ ಖರ್ಚು, ಶುಭ ಸಮಾರಂಭಕ್ಕೆ ಭೇಟಿ, ವಾದ-ವಿವಾದಗಳಿಂದ ಲಾಭ.
ಕನ್ಯಾ: ಚಂಚಲ ಮನಸ್ಸು, ಸ್ತ್ರೀಯರಿಗೆ ಲಾಭ, ಆರೋಗ್ಯದಲ್ಲಿ ಚೇತರಿಕೆ, ಉನ್ನತ ವಿದ್ಯಾಭ್ಯಾಸಕ್ಕಾಗಿ ದೂರ ಪ್ರಯಾಣ.
ತುಲಾ: ವ್ಯಾಪಾರದಲ್ಲಿ ಲಾಭ, ವಿರೋಧಿಗಳಿಂದ ತೊಂದರೆ, ಇತರರ ಮಾತಿನಿಂದ ಜಗಳ, ಮನಃಸ್ತಾಪ.
ವೃಶ್ಚಿಕ: ಅಧಿಕ ಧನವ್ಯಯ, ವ್ಯಾಪಾರದಲ್ಲಿ ನಷ್ಟ, ವೈಮನಸ್ಸು, ಕೆಲಸಕಾರ್ಯಗಳಲ್ಲಿ ವಿಘ್ನ, ಮಿತ್ರರ ಸಹಾಯ.
ಧನಸು: ಉದ್ಯೋಗದಲ್ಲಿ ಬಡ್ತಿ, ಶುಭ ಸಮಾರಂಭಗಳಲ್ಲಿ ಭಾಗಿ, ಚಂಚಲ ಸ್ವಭಾವ, ವಾದ-ವಿವಾದ ಮಾಡಬೇಡಿ.
ಮಕರ: ಸ್ಥಳ ಬದಲಾವಣೆ, ಭೂಲಾಭ, ಯಾರನ್ನ ಹೆಚ್ಚಾಗಿ ನಂಬಬೇಡಿ, ಮಿತ್ರರಲ್ಲಿ ಮನಃಸ್ತಾಪ, ಅಲ್ಪ ಲಾಭ ಅಧಿಕ ಖರ್ಚು.
ಕುಂಭ: ಸ್ತ್ರೀಯರಿಗೆ ಅಧಿಕಾರ ಪ್ರಾಪ್ತಿ, ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ, ದೂರ ಪ್ರಯಾಣ, ಮನಸ್ಸಿಗೆ ನಾನಾ ರೀತಿಯ ಚಿಂತೆ.
ಮೀನ: ಋಣಭಾದೆ, ಯತ್ನ ಕಾರ್ಯಭಂಗ, ಸಾಲಭಾದೆ, ವ್ಯಾಜ್ಯಗಳಿಂದ ತೊಂದರೆ, ಇಲ್ಲ ಸಲ್ಲದ ಅಪವಾದ.