Connect with us

Dina Bhavishya

ದಿನ ಭವಿಷ್ಯ: 22-12-2019

Published

on

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಧನುರ್ಮಾಸ,
ಕೃಷ್ಣ ಪಕ್ಷ, ಏಕಾದಶಿ ತಿಥಿ,
ಭಾನುವಾರ, ಸ್ವಾತಿ ನಕ್ಷತ್ರ

ರಾಹುಕಾಲ: ಸಂಜೆ 4:39 ರಿಂದ 6:04
ಗುಳಿಕಕಾಲ: ಮಧ್ಯಾಹ್ನ 3:13 ರಿಂದ 4:39
ಯಮಗಂಡಕಾಲ: ಮಧ್ಯಾಹ್ನ 12:22 ರಿಂದ 1:47

ಮೇಷ: ವಿಶ್ರಾಂತಿ ಇಲ್ಲದ ಕೆಲಸ ಕಾರ್ಯಗಳು, ಸ್ತ್ರೀಯರಿಗೆ ಅನುಕೂಲ, ಹೂಡಿಕೆಗಳಿಂದ ಲಾಭ, ಶರೀರದಲ್ಲಿ ತಳಮಳ, ಭೋಗ ವಸ್ತುಗಳ ಖರೀದಿ, ಖರ್ಚಿನ ಬಗ್ಗೆ ನಿಗಾವಿರಲಿ, ಮಾನಸಿಕ ನೆಮ್ಮದಿ.

ವೃಷಭ: ಅವಕಾಶಗಳು ಲಭಿಸುವುದು, ಸುಖ ಭೋಜನ ಪ್ರಾಪ್ತಿ, ಧನಾತ್ಮಕ ಚಿಂತನೆಯಿಂದ ಶುಭ, ಕಾರ್ಯದಲ್ಲಿ ಯಶಸ್ಸು, ಮೇಲಾಧಿಕಾರಿಗಳಿಂದ ಪ್ರಶಂಸೆ, ತಾಳ್ಮೆ ಅತ್ಯಗತ್ಯ.

ಮಿಥುನ: ಕೆಲಸ ಕಾರ್ಯಗಳಲ್ಲಿ ಅಡೆತಡೆ, ಅನ್ಯ ಜನರಲ್ಲಿ ದ್ವೇಷ, ನಾನಾ ವಿಚಾರಗಳಲ್ಲಿ ಆಸಕ್ತಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಕೃಷಿಯಲ್ಲಿ ನಷ್ಟ, ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕ್ಕೆ.

ಕಟಕ: ಬದುಕಿಗೆ ಉತ್ತಮ ತಿರುವು, ಇಷ್ಟವಾದ ವಸ್ತುಗಳ ಖರೀದಿ, ಪಿತ್ರಾರ್ಜಿತ ಆಸ್ತಿ ಲಭ್ಯ, ಪ್ರೀತಿ ಪಾತ್ರರೊಂದಿಗೆ ಬಾಂಧವ್ಯ, ಶತ್ರುಗಳ ಭಯ, ದ್ರವ ರೂಪದ ವಸ್ತುಗಳಿಂದ ಲಾಭ.

ಸಿಂಹ: ಸ್ತ್ರೀ ವಿಚಾರದಲ್ಲಿ ತೊಂದರೆ, ಮಾನಸಿಕ ವ್ಯಥೆ, ಶತ್ರುಗಳ ಬಾಧೆ, ಹೇಳಿಕೆ ಮಾತನ್ನು ಕೇಳುವಿರಿ, ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ, ಆರೋಗ್ಯದಲ್ಲಿ ವ್ಯತ್ಯಾಸ, ದ್ರವ್ಯ ಲಾಭ.

ಕನ್ಯಾ: ರಾಜಕೀಯ ವ್ಯಕ್ತಿಗಳ ಭೇಟಿ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಉತ್ತಮ ಬುದ್ಧಿಶಕ್ತಿ, ವಸ್ತ್ರಾಭರಣ ಖರೀದಿ, ದಾಂಪತ್ಯದಲ್ಲಿ ಪ್ರೀತಿ, ತೀರ್ಥಯಾತ್ರೆ ದರ್ಶನ.

ತುಲಾ: ಹೊಸ ಪ್ರಯತ್ನಗಳಲ್ಲಿ ಯಶಸ್ಸು, ಉದ್ಯೋಗಾವಕಾಶ ಪ್ರಾಪ್ತಿ, ವಿದೇಶ ಪ್ರಯಾಣ, ಮಹಿಳೆಯರಿಗೆ ಶುಭ, ಕೋರ್ಟ್ ಕೇಸ್‍ಗಳಿಗೆ ಓಡಾಟ, ಕೆಲಸ ಕಾರ್ಯಗಳಲ್ಲಿ ಜಯ, ಅಪಘಾತವಾಗುವ ಸಾಧ್ಯತೆ ಎಚ್ಚರ.

ವೃಶ್ಚಿಕ: ಮಾನಸಿಕ ಒತ್ತಡ, ವಿದ್ಯೆಯಲ್ಲಿ ನಿರಾಸಕ್ತಿ, ದೃಷ್ಠಿದೋಷದ ತೊಂದರೆ, ಪರಿಶ್ರಮಕ್ಕೆ ತಕ್ಕ ಪಲ, ನೆರೆಹೊರೆಯವರ ಜೊತೆ ಸುತ್ತಾಟ, ಅಕಾಲ ಭೋಜನ.

ಧನಸ್ಸು: ಸರ್ಕಾರಿ ಕೆಲಸದಲ್ಲಿ ವಿಳಂಬ, ಪುಣ್ಯಕ್ಷೇತ್ರ ದರ್ಶನ, ಮಿತ್ರರಲ್ಲಿ ಪ್ರೀತಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಶೀತ ಸಂಬಂಧಿತ ರೋಗ ಬಾಧೆ, ಋಣ ವಿಮೋಚನೆ, ಮಾನಸಿಕ ನೆಮ್ಮದಿ.

ಮಕರ: ಆತ್ಮೀಯರಿಂದ ಸಹಕಾರ, ಇತರರ ಮಾತಿನಿಂದ ಕಲಹ, ಮನಸ್ಸಿಗೆ ಅಶಾಂತಿ, ದುಷ್ಟರಿಂದ ದೂರವಿರಿ, ಆರೋಗ್ಯದಲ್ಲಿ ವ್ಯತ್ಯಾಸ, ಮಾತಿನ ಚಕಮಕಿ, ವಾಸ ಗೃಹದಲ್ಲಿ ತೊಂದರೆ.

ಕುಂಭ: ಸಣ್ಣ ವಿಚಾರಗಳಲ್ಲಿ ಮನಃಸ್ತಾಪ, ಹಣಕಾಸು ಸಮಸ್ಯೆ, ಸಾಲ ಬಾಧೆ, ಹಿರಿಯರಲ್ಲಿ ಗೌರವ, ನೆಮ್ಮದಿ ಇಲ್ಲದ ಜೀವನ, ಕಾರ್ಯ ಸಾಧನೆಗಾಗಿ ಪರಿಶ್ರಮ, ಅತಿಯಾದ ಕೋಪ.

ಮೀನ: ಪ್ರತಿಭೆಗೆ ತಕ್ಕ ಫಲ, ಉದ್ಯೋಗದಲ್ಲಿ ಬಡ್ತಿ, ಯಾರನ್ನೂ ಹೆಚ್ಚು ನಂಬಬೇಡಿ, ದೇವತಾ ಕಾರ್ಯಗಳಲ್ಲಿ ಭಾಗಿ, ವಾಹನದಿಂದ ಖರ್ಚು, ಚಂಚಲ ಮನಸ್ಸು.

Click to comment

Leave a Reply

Your email address will not be published. Required fields are marked *