ರಾಹುಕಾಲ – 7:42 ರಿಂದ 9:18
ಗುಳಿಕಕಾಲ – 2:05 ರಿಂದ 3:41
ಯಮಗಂಡಕಾಲ- 10:54 ರಿಂದ 12:30
ವಾರ : ಸೋಮವಾರ, ತಿಥಿ : ಷಷ್ಠಿ ಉಪರಿ ಸಪ್ತಮಿ
ನಕ್ಷತ್ರ: ಹಸ್ತ, ಯೋಗ : ಶಿವ ,ಕರಣ : ಗರಜ
ಶ್ರೀ ಪರಾಭವ ನಾಮ ಸಂವತ್ಸರ,ದಕ್ಷಿಣಾಯನ
ಗ್ರೀಷ್ಮ ಋತು ಆಷಾಢ ಮಾಸ ,ಶುಕ್ಲ ಪಕ್ಷ
ಮೇಷ: ಈ ದಿನ ಯತ್ನ ಕಾರ್ಯಗಳಲ್ಲಿ ಜಯ, ಹಿತೈಷಿಗಳಿಂದ ಬೆಂಬಲ, ಶತ್ರಭಾದೆ, ರಾಜಕೀಯ ಕ್ಷೇತ್ರದಲ್ಲಿ ಗೊಂದಲ, ಶರೀರದಲ್ಲಿ ಆಲಸ್ಯ.
ವೃಷಭ: ಈ ದಿನ ಮಾತಿನ ಚಕಮುಕಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮಿತ್ರರಿಂದ ಕೆಡುಕು, ದೃಷ್ಟಿ ದೋಷದಿಂದ ತೊಂದರೆ.
ಮಿಥುನ: ಈ ದಿನ ದಾಯಾಧಿಕಲಹ, ಆಕಸ್ಮಿಕ ಖರ್ಚು, ವಿವಾಹ ಯೋಗ, ಚೋರ ಭಯ, ಮೂಗಿನ ಮೇಲೆ ಕೋಪ, ಸಾಲಬಾದೆ.
ಕಟಕ: ಈ ದಿನ ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ, ಉದ್ಯೋಗದಲ್ಲಿ ಕಿರಿಕಿರಿ, ದ್ರವ್ಯ ಲಾಭ, ಚಂಚಲ ಮನಸ್ಸು, ಸ್ತ್ರೀಯರು ತಾಳ್ಮೆಯಿಂದ ಇರಿ.
ಸಿಂಹ: ಈ ದಿನ ಅಲ್ಪ ಆದಾಯ ಅಧಿಕ ಖರ್ಚು, ವಸ್ತ್ರ ವ್ಯಾಪಾರಿಗಳಿಗೆ ಧನ ಲಾಭ, ಮನಶಾಂತಿ, ಷೇರು ವ್ಯವಹಾರಗಳಲ್ಲಿ ಲಾಭ, ಆಪ್ತ ಸ್ನೇಹಿತರ ಭೇಟಿ.
ಕನ್ಯಾ: ಈ ದಿನ ಕಾರ್ಯ ಸಾಧನೆ, ಆರೋಗ್ಯದಲ್ಲಿ ಏರುಪೇರು, ಮನಸ್ಸಿಗೆ ನಾನಾ ರೀತಿಯ ಚಿಂತೆ, ಶ್ರಮಕ್ಕೆ ತಕ್ಕ ಫಲ, ಸುಖ ಭೋಜನ.
ತುಲಾ: ಈ ದಿನ ಅನೇಕ ಜನರಿಗೆ ವಿವಾಹ ಯೋಗ, ಯಾರನ್ನು ಹೆಚ್ಚಾಗಿ ನಂಬಬೇಡಿ, ಕೋರ್ಟ್ ವ್ಯಾಜ್ಯಗಳಿಂದ ಮುಕ್ತಿ.
ವೃಶ್ಚಿಕ: ಈ ದಿನ ಭೂಲಾಭ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಮಾನಸಿಕ ಅಶಾಂತಿ, ಶತ್ರು ಭಾದೆ, ಕೈ ಕಾಲಿಗೆ ಪೆಟ್ಟು ಎಚ್ಚರದಿಂದಿರಿ.
ಧನಸ್ಸು: ಈ ದಿನ ಅಧಿಕಾರ ಪ್ರಾಪ್ತಿ, ಸುಖ ಭೋಜನ, ಸ್ಥಿರಾಸ್ತಿ ಮಾರಾಟ, ಸ್ನೇಹ ವೃದ್ಧಿ, ಋಣ ಬಾದೆಯಿಂದ ಮುಕ್ತಿ, ಉತ್ತಮ ಬುದ್ಧಿ.
ಮಕರ: ಈ ದಿನ ನಾನು ವಿಚಾರಗಳಲ್ಲಿ ಆಸಕ್ತಿ, ದೂರ ಪ್ರಯಾಣ, ಸ್ತ್ರೀಯರಿಗೆ ಶುಭದಿನ, ಶೀತ ಸಂಬಂಧಿತ ರೋಗ, ಅಧಿಕ ಖರ್ಚು.
ಕುಂಭ : ಈ ದಿನ ಪರರಿಗೆ ಸಹಾನುಭೂತಿ ತೋರುವಿರಿ, ವಿದ್ಯಾರ್ಥಿಗಳಲ್ಲಿ ಪ್ರಗತಿ, ಸ್ತ್ರೀ ಲಾಭ, ಉದ್ಯೋಗ ಅವಕಾಶ, ಮನಸ್ಸಿನಲ್ಲಿ ಭಯ ಭೀತಿ.
ಮೀನ: ಈ ದಿನ ಸ್ವಯಂಕೃತ ಅಪರಾಧ, ಅಭಿವೃದ್ಧಿ ಕುಂಠಿತ, ಅಧಿಕ ಕೋಪ, ಮನೆಯಲ್ಲಿ ಶುಭ ಸುದ್ದಿ ಕೇಳುವಿರಿ, ದಾಂಪತ್ಯದಲ್ಲಿ ಪ್ರೀತಿ.
