ಪಂಚಾಂಗ
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ಪ್ರಥಮಿ ತಿಥಿ,
ಬೆಳಗ್ಗೆ 6:41 ನಂತರ ದ್ವಿತೀಯಾ ತಿಥಿ,
ಶುಕ್ರವಾರ, ಆಶ್ಲೇಷ ನಕ್ಷತ್ರ
ಬೆಳಗ್ಗೆ 9:28 ನಂತರ ಮಖ ನಕ್ಷತ್ರ.
ರಾಹುಕಾಲ: ಬೆಳಗ್ಗೆ 10:54 ರಿಂದ 12:29
ಗುಳಿಕಕಾಲ: ಬೆಳಗ್ಗೆ 7:44 ರಿಂದ 9:19
ಯಮಗಂಡಕಾಲ: ಮಧ್ಯಾಹ್ನ 3:39 ರಿಂದ 5:14
Advertisement
ಮೇಷ: ಭೂಮಿ-ವಾಹ ಖರೀದಿಗೆ ಮನಸ್ಸು, ಸಾಲ ಬಾಧೆ, ಶತ್ರುಗಳ ಕಾಟ, ಮಾನಸಿಕ ವ್ಯಥೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ.
Advertisement
ವೃಷಭ: ಪತ್ರ ವ್ಯವಹಾರಗಳಿಂದ ಅನುಕೂಲ, ಉದ್ಯೋಗದಲ್ಲಿ ಅಧಿಕ ಲಾಭ, ವ್ಯಾಪಾರದಲ್ಲಿ ಹಣ ಸಂಪಾದನೆ, ಉತ್ತಮ ಹೆಸರು ಕೀರ್ತಿ ಪ್ರಾಪ್ತಿ, ಉತ್ತಮ ಗೌರವ ಲಭಿಸುವುದು.
Advertisement
ಮಿಥುನ: ಹಣಕಾಸು ಲಾಭ, ಕೌಟುಂಬಿಕ ನೆಮ್ಮದಿ, ಮೋಜು ಮಸ್ತಿಗಾಗಿ ಮನಸ್ಸು, ಆಕಸ್ಮಿಕ ಪ್ರೇಮದ ಬಲೆಯಲ್ಲಿ ಸಿಲುಕುವಿರಿ.
Advertisement
ಕಟಕ: ತಂದೆಯಿಂದ ಆರ್ಥಿಕ ಸಂಕಷ್ಟ, ಸ್ನೇಹಿತರು ವಿಕೃತ ಆಸೆಗಳಿಗೆ ಬಲಿಯಾಗುವರು, ಮಕ್ಕಳಿಂದ ಮಾನಸಿಕ ವ್ಯಥೆ, ನೆಮ್ಮದಿ ಇಲ್ಲದ ಜೀವನ.
ಸಿಂಹ: ಕುಟುಂಬದಲ್ಲಿ ಸಂಕಷ್ಟ, ಸ್ವಯಂಕೃತ ಅಪರಾಧಗಳಿಂದ ನಷ್ಟ, ಸ್ತ್ರೀಯರಿಗೆ ನೋವು, ಉದ್ಯೋಗ ಸ್ಥಳzದಲ್ಲಿ ಶತ್ರುಗಳ ಕಾಟ, ಮನಸ್ಸಿನಲ್ಲಿ ನಾನಾ ಆಲೋಚನೆ.
ಕನ್ಯಾ: ವ್ಯಾಪಾರಸ್ಥರಿಗೆ ಲಾಭ, ಬಡ್ಡಿ ವ್ಯವಹಾರದವರಿಗೆ ಅನುಕೂಲ, ಸಹೋದರಿಯಿಂದ ಧನ ಸಹಾಯ, ಹೆಣ್ಣು ಮಕ್ಕಳಿಂದ ಉತ್ತಮ ಹೆಸರು ಪ್ರಾಪ್ತಿ.
ತುಲಾ: ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ಮಾನಸಿಕ ನೆಮ್ಮದಿ ಲಭಿಸುವುದು, ಅಲಂಕಾರಿಕ ವಸ್ತು ಮಾರಾಟ ಕ್ಷೇತ್ರದಕ್ಕೆ ಲಾಭ, ಉದ್ಯಮಸ್ಥರಿಗೆ ಅನುಕೂಲ, ನಿದ್ರೆಯಲ್ಲಿ ಉಲ್ಲಾಸದಾಯಕ ಕನಸು.
ವೃಶ್ಚಿಕ: ಅದೃಷ್ಟ ಒಲಿಯುವುದು, ಅತೀ ಬುದ್ಧಿವಂತಿಕೆಯಿಂದ ನಷ್ಟ ಸಾಧ್ಯತೆ, ಬಂಧುಗಳಿಂದ ತೊಂದರೆ, ಐಟಿ ಕ್ಷೇತ್ರದವರಿಗೆ ಅನುಕೂಲ.
ಧನಸ್ಸು: ವಾಹನ ಚಾಲಕರು ಎಚ್ಚರಿಕೆ, ಸ್ನೇಹಿತರಿಂದ ತೊಂದರೆ, ಮನಸ್ಸಿನಲ್ಲಿ ಆತಂಕ, ದಾಂಪತ್ಯದಲ್ಲಿ ಕಲಹ, ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ.
ಮಕರ: ಪ್ರೀತಿ ಪ್ರೇಮ ವಿಚಾರದಲ್ಲಿ ಯಶಸ್ಸು, ಮನಸ್ಸಿನ ಭಾವನೆಗಳಿಗೆ ಮನ್ನಣೆ, ಇಷ್ಟಾರ್ಥ ಸಿದ್ಧಿಸುವುದು, ಸ್ನೇಹಿತರೇ ಶತ್ರುಗಳಾಗುವರು.
ಕುಂಭ: ಸಾಲ ತೀರಿಸಲು ದುಡಿದ ಹಣ ನೀಡುವಿರಿ, ಹಣಕಾಸು ಸಮಸ್ಯೆ, ಸ್ಥಿರಾಸ್ತಿ-ವಾಹನ ವ್ಯವಹಾರದಲ್ಲಿ ನಷ್ಟ, ಮಕ್ಕಳಿಂದ ಆರ್ಥಿಕ ಸಂಕಷ್ಟ, ವಿದೇಶ ಪ್ರಯಾಣ ಯೋಗ.
ಮೀನ: ನೆರೆಹೊರೆಯವರ ಜೊತೆ ಉತ್ತಮ ಬಾಂಧವ್ಯ, ಆಕಸ್ಮಿಕ ಭೂಮಿ-ವಾಹನ ಯೋಗ, ಆಸೆ ಆಕಾಂಕ್ಷೆಗಳಿಗಾಗಿ ದಾರಿ ತಪ್ಪುವ ಆಲೋಚನೆ, ಪ್ರಯಾಣದಿಂದ ತೊಂದರೆ.