ಪಂಚಾಂಗ
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರಮಾಸ,
ಶುಕ್ಲ ಪಕ್ಷ, ನವಮಿ ತಿಥಿ,
ಗುರುವಾರ, ಪುನರ್ವಸು ನಕ್ಷತ್ರ
Advertisement
ರಾಹುಕಾಲ: ಮಧ್ಯಾಹ್ನ 1:59 ರಿಂದ 3:31
ಗುಳಿಕಕಾಲ: ಬೆಳಗ್ಗೆ 9:23 ರಿಂದ 10:55
ಯಮಗಂಡಕಾಲ: ಬೆಳಗ್ಗೆ 6:19 ರಿಂದ 7:51
Advertisement
ಮೇಷ: ದೈಹಿಕ ವಿಷಯಾಸಕ್ತಿ ಹೆಚ್ಚು, ಪಾಲುದಾರಿಕೆಯಲ್ಲಿ ನಷ್ಟ, ಸಂಗಾತಿಯಿಂದ ಅಧಿಕ ಖರ್ಚು, ತಂದೆಯೊಂದಿಗೆ ಶತ್ರುತ್ವ, ಪಿತ್ರಾರ್ಜಿತ ಆಸ್ತಿಯಿಂದ ನಷ್ಟ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ.
Advertisement
ವೃಷಭ: ಶುಗರ್, ಹೃದಯ ಸಂಬಂಧಿತ ಸಮಸ್ಯೆ, ಸಾಲ, ಶತ್ರು, ಸೇವಕರ ಬಾಧೆ, ಬಂಧುಗಳಿಂದ ಲಾಭ, ಸ್ವಂತ ಉದ್ಯಮದಲ್ಲಿ ಅನುಕೂಲ, ವ್ಯಾಪಾರದಲ್ಲಿ ಉತ್ತಮ ಫಲ.
Advertisement
ಮಿಥುನ: ಸಂಗಾತಿಯಿಂದ ಧನ ಲಾಭ, ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಸ್ಥಿರಾಸ್ತಿ ವಿಚಾರದಲ್ಲಿ ಕಲಹ, ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ಭಾವನೆ ಆಸೆ ಆಕಾಂಕ್ಷೆಗಳು, ಮನೋರಂಜನೆಯಲ್ಲಿ ತೊಡಗುವಿರಿ, ಅಲಂಕಾರಿಕ ವಸ್ತುಗಳಿಗೆ ಖರ್ಚು.
ಕಟಕ: ಸ್ಥಿರಾಸ್ತಿ ಖರೀದಿ, ಮನೆ ನಿರ್ಮಾಣದ ಯೋಚನೆ, ಸ್ವಯಂಕೃತ ಅಪರಾಧಗಳಿಂದ ತೊಂದರೆ, ಶತ್ರುಗಳ ಬಾಧೆ, ರೋಗ ಬಾಧೆ, ನೆರೆಹೊರೆಯವರಿಂದ ಸಂಕಷ್ಟ.
ಸಿಂಹ: ಮಕ್ಕಳಿಗಾಗಿ ಸೌಂದರ್ಯ ವರ್ಧಕಗಳಿಗೆ ಖರ್ಚು, ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಸ್ಥಳ-ಉದ್ಯೋಗ ಬದಲಾವಣೆ ಆಲೋಚನೆ, ಅಪಘಾತ, ಸೋಲು ನಿರಾಸೆ ಕಾಡುವುದು,
ಕನ್ಯಾ: ಸ್ಥಿರಾಸ್ತಿ, ಗೃಹ, ವಾಹನ ಖರೀದಿಗೆ ಆಲೋಚನೆ, ಪಾಲುದಾರಿಕೆಯಲ್ಲಿ ಆರ್ಥಿಕ ಸಮಸ್ಯೆ, ವ್ಯವಹಾರದಲ್ಲಿ ಎಚ್ಚರಿಕೆ, ಮಾತೃವಿನಿಂದ ಅನುಕೂಲ, ಗೌರವ ಸನ್ಮಾನ ಪ್ರಾಪ್ತಿ.
ತುಲಾ: ಸ್ವಂತ ವ್ಯಾಪಾರ ಉದ್ಯಮದಲ್ಲಿ ನಷ್ಟ, ಅನಾರೋಗ್ಯ, ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ, ಉದ್ಯೋಗ ನಿಮಿತ್ತ ಪ್ರಯಾಣ, ಶತ್ರುಗಳಿಂದ ಸೋಲು ನಷ್ಟ.
ವೃಶ್ಚಿಕ: ಐಷಾರಾಮಿ ಜೀವನ, ಮೃಷ್ಟಾನ್ನ ಭೋಜನ, ಅಧಿಕವಾದ ಖರ್ಚು, ಮೋಜು ಮಸ್ತಿಯಲ್ಲಿ ವಿಹಾರ, ತಂದೆಯಿಂದ ಲಾಭ, ಪಿತ್ರಾರ್ಜಿತ ಕಲಹಗಳಿಂದ ಮುಕ್ತಿ.
ಧನಸ್ಸು: ಬೆವರು ದೋಷ, ಶೀತ ಕೆಮ್ಮು, ಸಂಧಿವಾತ ಬಾಧೆ, ಶತ್ರುಗಳೇ ಮಿತ್ರರಾಗುವ ಸಾಧ್ಯತೆ, ಕಾರ್ಮಿಕರಿಂದ ಉತ್ತಮ ಫಲ, ಮೋಜು ಮಸ್ತಿಯಿಂದ ತೊಂದರೆ.
ಮಕರ: ಸಂತಾನ ದೋಷ, ಗರ್ಭಿಣಿಯರು ಎಚ್ಚರ, ಉದ್ಯೋಗ-ಸ್ಥಳ ಬದಲಾವಣೆಗೆ ಅವಕಾಶ, ಐಷಾರಾಮಿ ಜೀವನ, ದುಶ್ಚಟಗಳಿಂದ ನಷ್ಟ ಸಾಧ್ಯತೆ.
ಕುಂಭ: ಆಕಸ್ಮಿಕ ಆರ್ಥಿಕ ಸಂಕಷ್ಟ, ಸ್ಥಿರಾಸ್ತಿ ವಿಚಾರದಲ್ಲಿ ತಗಾದೆ, ವಾಹನದಿಂದ ತೊಂದರೆ, ಮಾತೃವಿನಿಂದ ಬೈಗುಳ, ಮಿತ್ರರಿಂದ ಸಂಕಷ್ಟಕ್ಕೆ ಸಿಲುಕುವಿರಿ.
ಮೀನ: ಮಕ್ಕಳಿಂದ ಸಂಕಷ್ಟ, ದೂರ ಪ್ರದೇಶದಲ್ಲಿ ಉದ್ಯೋಗ, ದಾಂಪತ್ಯ ಕಲಹ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ, ಬಂಧುಗಳಿಂದ ಆತ್ಮೀಯತೆ.