ಪಂಚಾಂಗ:
ಶ್ರೀವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಕೃಷ್ಣ ಪಕ್ಷ, ತೃತೀಯಾ ತಿಥಿ,
ಭಾನುವಾರ, ಪೂರ್ವಭಾದ್ರ ನಕ್ಷತ್ರ
ರಾಹುಕಾಲ: ಸಂಜೆ 5:09 ರಿಂದ 6:42
ಗುಳಿಕಕಾಲ: ಮಧ್ಯಾಹ್ನ 3:35 ರಿಂದ 5:09
ಯಮಗಂಡಕಾಲ: ಮಧ್ಯಾಹ್ನ 12:27 ರಿಂದ 2:01
Advertisement
ಮೇಷ: ಮಕ್ಕಳಿಂದ ನಿಂದನೆ, ಅಕಾಲ ಭೋಜನ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ವಾಹನ ಯೋಗ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ರಾಜ ಸನ್ಮಾನ, ಹಿತ ಶತೃಗಳಿಂದ ತೊಂದರೆ, ಮಾತಿನ ಚಕಮಕಿ, ಮಾಡಿದ ಕೆಲಸಗಳಲ್ಲಿ ಪ್ರಗತಿ.
Advertisement
ವೃಷಭ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಆಕಸ್ಮಿಕ ಬಂಧುಗಳ ಭೇಟಿ, ಕಾರ್ಯ ಕ್ಷೇತ್ರದಲ್ಲಿ ಒತ್ತಡ, ಮನಃಕ್ಲೇಷ, ಉತ್ತಮ ಪ್ರಗತಿ, ವಿದ್ಯಾಭ್ಯಾಸದಲ್ಲಿ ಶ್ರಮ ಅಗತ್ಯ, ತಾಳ್ಮೆ ಅತ್ಯಗತ್ಯ, ಶತ್ರು ಬಾಧೆ, ದೂರ ಪ್ರಯಾಣ.
Advertisement
ಮಿಥುನ: ಪ್ರೀತಿ ಪಾತ್ರರ ಆಗಮನ, ಹಿರಿಯರ ಆಶೀರ್ವಾದದಿಂದ ಅನುಕೂಲ, ಕೆಟ್ಟ ಶಬ್ಧಗಳಿಂದ ನಿಂದನೆ, ಪರಿಶ್ರಮಕ್ಕೆ ತಕ್ಕ ವರಮಾನ, ದಂಡ ಕಟ್ಟುವ ಸಾಧ್ಯತೆ, ದೂರ ಪ್ರಯಾಣ.
Advertisement
ಕಟಕ: ಮಾನಸಿಕ ನೆಮ್ಮದಿ, ಭೂ ಲಾಭ, ಆದಾಯಕ್ಕಿಂತ ಖರ್ಚು ಹೆಚ್ಚು, ಆರ್ಥಿಕ ಪರಿಸ್ಥಿತಿ ಉತ್ತಮ, ವ್ಯಾಪಾರ ವ್ಯವಹಾರದಲ್ಲಿ ಅಲ್ಪ ಲಾಭ, ಉದ್ಯಮಿಗಳಿಗೆ ಅನುಕೂಲ, ಸ್ತ್ರೀಯರಿಗೆ ಸಮಸ್ಯೆ, ಪ್ರತಿ ವಿಚಾರದಲ್ಲಿ ಅಡೆತಡೆ.
ಸಿಂಹ: ವಿದ್ಯಾರ್ಥಿಗಳಿಗೆ ಉತ್ತಮ, ದಾಯಾದಿಗಳ ಕಲಹ, ಅತಿಯಾದ ಕೋಪ, ಶೀತ ಸಂಬಂಧಿತ ರೋಗ, ಕಾರ್ಯದಲ್ಲಿ ವಿಕಲ್ಪ, ಆಲಸ್ಯ ಮನೋಭಾವ, ಸ್ತ್ರೀಯರಿಗೆ ಲಾಭ, ಮಹಿಳೆಯರಿಗೆ ಚಿನ್ನಾಭರಣ ಪ್ರಾಪ್ತಿ.
ಕನ್ಯಾ: ಅನ್ಯರ ಸಂಕಷ್ಟಗಳಿಗೆ ಸ್ಪಂದನೆ, ಅನ್ಯಾಯ ದಬ್ಬಾಳಿಕೆಗೆ ವಿರೋಧ, ಮಾನಸಿಕ ಒತ್ತಡ, ಸಮಸ್ಯೆಗಳನ್ನು ತಾಳ್ಮೆಯಿಂದ ಬಗೆಹರಿಸಿಕೊಳ್ಳುವಿರಿ, ತಾಳ್ಮೆಯಿಂದ ಕಾರ್ಯ ಸಿದ್ಧಿ, ನೆಮ್ಮದಿ ಇಲ್ಲದ ಜೀವನ, ಕಾರ್ಯಗಳಲ್ಲಿ ಹೆಚ್ಚಿನ ಪರಿಶ್ರಮ.
ತುಲಾ: ಶ್ರಮಕ್ಕೆ ತಕ್ಕ ಫಲ, ಸಾಲ ಬಾಧೆ, ಕೌಟುಂಬಿಕ ಸಮಸ್ಯೆಗಳಿಂದ ಆತಂಕ, ಆತ್ಮೀಯರಿಂದ ಸಲಹೆ, ರಾಜಕೀಯ ಕ್ಷೇತ್ರದಲ್ಲಿ ಆಸಕ್ತಿ, ಆರೋಗ್ಯದಲ್ಲಿ ಏರುಪೇರು.
ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ಮಂದಗತಿ, ಶತ್ರುಗಳ ಬಾಧೆ, ಅನಾರೋಗ್ಯದಿಂದ ವೈದ್ಯರ ಭೇಟಿ, ಪ್ರೀತಿ ವಿಶ್ವಾಸ ಗಳಿಸುವಿರಿ, ಗುರು ಹಿರಿಯರ ಆಶೀರ್ವಾದ, ಮಾನಸಿಕ ಒತ್ತಡ, ವಿವಿಧ ಮೂಲಗಳಿಂದ ಹಣ ಪ್ರಾಪ್ತಿ.
ಧನಸ್ಸು: ನೂತನ ಕಟ್ಟಡ ಪ್ರಾರಂಭ, ಸಮಾಜದಲ್ಲಿ ಉತ್ತಮ ಗೌರವ, ಉತ್ತಮ ಬುದ್ಧಿಶಕ್ತಿ, ನೀಚ ಜನರಿಂದ ತೊಂದರೆ, ಶುಭ ಕಾರ್ಯಗಳಲ್ಲಿ ಭಾಗಿ, ಸಂತಸದ ಸಮಾಚಾರ ಕೇಳುವಿರಿ, ತೀರ್ಥಕ್ಷೇತ್ರ ದರ್ಶನ.
ಮಕರ: ಪ್ರತಿ ವಿಚಾರದಲ್ಲೂ ಎಚ್ಚರಿಕೆ ಅಗತ್ಯ, ವಾಹನದಿಂದ ತೊಂದರೆ, ವಿವಾದಗಳಿಂದ ದೂರವಿರಿ, ಸ್ತ್ರೀಯರಿಗೆ ಶುಭ, ಷೇರು ವ್ಯವಹಾರಗಳಲ್ಲಿ ಎಚ್ಚರ.
ಕುಂಭ: ಮಕ್ಕಳಿಂದ ಶುಭವಾರ್ತೆ, ಪತಿ ಪತ್ನಿಯರಲ್ಲಿ ಪ್ರೀತಿ ಸಮಾಗಮ, ಆತ್ಮೀಯರಿಂದ ಸಹಾಯ, ಕ್ರಯ ವಿಕ್ರಯಗಳಲ್ಲಿ ಅಲ್ಪ ಲಾಭ, ಸ್ತ್ರೀಯರಿಗೆ ಲಾಭ, ವೈಯುಕ್ತಿಕ ಕೆಲಸಗಳಲ್ಲಿ ಗಮನಹರಿಸಿ.
ಮೀನ: ನಿರೀಕ್ಷಿತ ಆದಾಯ, ಖರ್ಚು ಹಿಡಿತದಲ್ಲಿಟ್ಟುಕೊಳ್ಳಿ, ಮಾನಸಿಕ ನೆಮ್ಮದಿ, ವ್ಯವಹಾರದಲ್ಲಿ ಸಮಸ್ಯೆ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಕೆಲಸಗಳಲ್ಲಿ ತಾಳ್ಮೆ ಅತ್ಯಗತ್ಯ, ರಿಯಲ್ ಎಸ್ಟೇಟ್ನವರಿಗೆ ನಷ್ಟ.