ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಶುಕ್ಲ ಪಕ್ಷ, ಅಷ್ಟಮಿ ತಿಥಿ,
ಭಾನುವಾರ, ಮೂಲಾ ನಕ್ಷತ್ರ
ರಾಹುಕಾಲ: ಬೆಳಗ್ಗೆ 7:44 ರಿಂದ 9:15
ಗುಳಿಕಕಾಲ: ಮಧ್ಯಾಹ್ನ 1:49 ರಿಂದ 3:20
ಯಮಗಂಡಕಾಲ: ಬೆಳಗ್ಗೆ 10:46 ರಿಂದ 12:17
Advertisement
ಮೇಷ: ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ, ಸ್ನೇಹಿತರಿಂದ ಕಿರಿಕಿರಿ, ದೂರ ಪ್ರಯಾಣ ಮಾಡುವ ಸಾಧ್ಯತೆ, ವಿಪರೀತ ಹಣಕಾಸು ಸಮಸ್ಯೆ, ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ, ನಿರ್ಧಾರಗಳಲ್ಲಿ ಗೊಂದಲದ ವಾತಾವರಣ.
Advertisement
ವೃಷಭ: ವಿದ್ಯೆಯಲ್ಲಿ ಮುಂದುವರೆಯುವ ಆಲೋಚನೆ, ಬಂಧು-ಮಿತ್ರರೊಂದಿಗ ಮನಃಸ್ತಾಪ, ಸಾಲ ಪಡೆದವರೊಂದಿಗೆ ಕಲಹ, ಮಹಿಳೆಯರಲ್ಲಿ ಶತ್ರುತ್ವ ವೃದ್ಧಿ, ಉದ್ಯೋಗ ಸ್ಥಳದಲ್ಲಿ ಎಚ್ಚರಿಕೆ.
Advertisement
ಮಿಥುನ: ವಾಸ ಸ್ಥಳ ಬದಲಾಯಿಸುವ ಆಲೋಚನೆ, ಕೆಲಸದಲ್ಲಿ ಅಧಿಕವಾದ ಒತ್ತಡ, ಉದ್ಯೋಗ ಬದಲಾವಣೆ, ಸ್ತಿರಾಸ್ತಿ ವ್ಯವಹಾರದಲ್ಲಿ ಗೊಂದಲ, ವ್ಯಾಪಾರ-ಉದ್ಯಮದಲ್ಲಿ ನಷ್ಟ ಸಾಧ್ಯತೆ, ಹೊಸ ವ್ಯವಹಾರ ಆರಂಭಕ್ಕೆ ಚಿಂತನೆ.
Advertisement
ಕಟಕ: ಆರೋಗ್ಯದಲ್ಲಿ ಚೇತರಿಕೆ, ವಿದ್ಯಾಭ್ಯಾಸಕ್ಕೆ ಕಂಟಕವಾಗುವ ಸಾಧ್ಯತೆ, ಹಣಕಾಸು ಮೋಸವಾಗುವ ಪರಿಸ್ಥಿತಿ ನಿರ್ಮಾಣ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ವ್ಯಾಪಾರದಲ್ಲಿನ ನಷ್ಟದಿಂದ ಆತಂಕ.
ಸಿಂಹ: ಒತ್ತಡದ ಜೀವನದಿಂದ ವ್ಯಥೆ, ದುಷ್ಟರ ಸಹವಾಸದಿಂದ ದೂರವಿರಿ, ಯಾರನ್ನೂ ನಂಬಿ ಕೆಲಸ ಮಾಡಬೇಡಿ, ಮನಸ್ಸಿನಲ್ಲಿ ಆತಂಕ-ಗೊಂದಲಮಯ, ಮಿತ್ರರಿಂದ ಆಕಸ್ಮಿಕ ನಷ್ಟ ಸಾಧ್ಯತೆ.
ಕನ್ಯಾ: ಪಾಲುದಾರಿಕೆ ವ್ಯವಹಾರದಲ್ಲಿ ಮೋಸ, ಕೆಲಸಗಾರರ ಮೇಲೆ ಅನುಮಾನ ಮೂಡುವುದು, ಶೀತ ಬಾಧೆ-ಅಜೀರ್ಣ ಸಮಸ್ಯೆ, ವ್ಯಾಪಾರ-ಉದ್ಯೋಗದಲ್ಲಿ ಅನುಕೂಲ,ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಆರೋಗ್ಯದ ಬಗ್ಗೆ ಎಚ್ಚರಿಕೆವಹಿಸಿ.
ತುಲಾ: ವಿದ್ಯಾಭ್ಯಾಸದಲ್ಲಿ ಮುನ್ನಡೆ, ಸ್ವಯಂಕೃತ ಅಪರಾಧಗಳಿಂದ ತೊಂದರೆ, ನಾನಾ ರೀತಿಯ ತೊಂದರೆ ಅನುಭವಿಸುವಿರಿ, ಮಿತ್ರರು ಶತ್ರುವಾಗಿ ಪರಿವರ್ತನೆಯಾಗುವರು, ಆತುರ ನಿರ್ಧಾರಗಳಿಂದ ಸಂಕಷ್ಟ ಸಾಧ್ಯತೆ.
ವೃಶ್ಚಿಕ: ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಮಕ್ಕಳೊಂದಿಗೆ ಮನಃಸ್ತಾಪ, ಪ್ರಯಾಣದಲ್ಲಿ ಆಕಸ್ಮಿಕ ಸಂಕಟ, ಮಾಡುವ ಕೆಲಸದಲ್ಲಿ ಅಪಜಯ, ಕೋರ್ಟ್ ಕೇಸ್ ಗಳಲ್ಲಿ ಹಿನ್ನಡೆ.
ಧನಸ್ಸು: ಮಕ್ಕಳಲ್ಲಿ ಚುರುಕುತನ, ಬೇಜವಾಬ್ದಾರಿತನದ ನಡವಳಿಕೆಯಿಂದ ನಷ್ಟ, ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುವುದು, ದೀರ್ಘಕಾಲದ ರೋಗ ಬಾಧೆ, ನೆಮ್ಮದಿ ಇಲ್ಲದ ಜೀವನ, ಮನಸ್ಸಿನಲ್ಲಿ ನಾನಾ ರೀತಿ ಆಲೋಚನೆ.
ಮಕರ: ಶರೀರದಲ್ಲಿ ನೋವುಗಳ ಬಾಧೆ, ಹೊಟ್ಟೆ ನೋವು-ಅಜೀರ್ಣ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು, ನಾನಾ ಮೂಲಗಳಿಂದ ಧನಾಗಮನ, ತಾಂತ್ರಿಕ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ.
ಕುಂಭ: ಕುಟುಂಬದಲ್ಲಿ ವೈಮನಸ್ಸು, ಮಕ್ಕಳೇ ಶತ್ರುವಾಗಿ ಪರಿವರ್ತನೆಯಾಗುವರು, ಅನಗತ್ಯ ಮಾತಿನಿಂದ ಸಂಕಷ್ಟ, ಮಕ್ಕಳಿಗಾಗಿ ಮಾಡಿದ್ದ ಸಾಲ ಬಾಧೆ, ಹಣ ಇಲ್ಲದೇ ಪರದಾಡುವಿರಿ.
ಮೀನ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಆಕಸ್ಮಿಕ ಅವಘಢ, ಬಂಧುಗಳೊಂದಿಗೆ ಕಿರಿಕಿರಿ, ನಾನಾ ಆಲೋಚನೆಗಳಿಂದ ನಿದ್ರಾಭಂಗ, ನಿದ್ರೆಯಲ್ಲಿ ಕೆಟ್ಟ ಕನಸು ಬರುವ ಸಾಧ್ಯತೆ, ಉದ್ಯೋಗ ಸ್ಥಳದಲ್ಲಿ ಉತ್ತಮ ಗೌರವ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv