ಶ್ರೀ ಶುಭಕೃತ ನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು,
ಆಷಾಡ ಮಾಸ, ಕೃಷ್ಣ ಪಕ್ಷ,
ದ್ವಿತೀಯ, ಶುಕ್ರವಾರ,
ಶ್ರವಣ ನಕ್ಷತ್ರ.
ರಾಹುಕಾಲ: 10:52 ರಿಂದ 12:28
ಗುಳಿಕಕಾಲ: 07:40 ರಿಂದ 09:16
ಯಮಗಂಡಕಾಲ: 03:40 ರಿಂದ 05:16
Advertisement
ಮೇಷ: ಉದ್ಯೋಗದಲ್ಲಿ ನಿರಾಸಕ್ತಿ, ಕೃಷಿಕರಿಗೆ ಅನಾನುಕೂಲ, ತಾಯಿಯಿಂದ ಸಹಾಯ ಕೇಳುವಿರಿ, ಶುಭಕಾರ್ಯದ ಚಿಂತೆ, ವಿದ್ಯಾಭ್ಯಾಸದಲ್ಲಿ ಮರೆವು ಮಂದತ್ವ.
Advertisement
ವೃಷಭ: ದೂರ ಪ್ರಯಾಣ, ನೆರೆಹೊರೆಯವರಿಂದ ನೋವು, ಪತ್ರ ವ್ಯವಹಾರದಲ್ಲಿ ಯಶಸ್ಸು, ಒಪ್ಪಂದಗಳಲ್ಲಿ ಮನಸ್ತಾಪ, ಅನಾರೋಗ್ಯ.
Advertisement
ಮಿಥುನ: ಮಾತಿನಿಂದ ಕಲಹ, ಆರ್ಥಿಕ ಚೇತರಿಕೆ, ಹಿರಿಯರೊಂದಿಗೆ ಕಲಹ, ಪಿತ್ರಾರ್ಜಿತ ಆಸ್ತಿ ಚಿಂತೆ, ಕೋರ್ಟ್ ಕೇಸ್ಗಳ ಭಯ, ಅನಾರೋಗ್ಯ, ವಾಹನ ಚಾಲನೆಯಲ್ಲಿ ಜಾಗ್ರತೆ.
Advertisement
ಕಟಕ: ದಾಂಪತ್ಯದಲ್ಲಿ ಮೂರನೆಯವರ ಪ್ರವೇಶ, ಸ್ವಂತ ವ್ಯವಹಾರದಲ್ಲಿ ಎಳೆದಾಟ, ಸ್ವಾಭಿಮಾನಕ್ಕೆ ಧಕ್ಕೆ, ದೈಹಿಕ ಅಸಮರ್ಥತೆ, ಪಾಲುದಾರಿಕೆಯಲ್ಲಿ ಸಮಸ್ಯೆಗಳು, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ.
ಸಿಂಹ: ಸಾಲಗಾರರ ಚಿಂತೆ, ಮಾನಸಿಕ ಅಸಮತೋಲನ, ಅತಿನಿದ್ರೆ, ಅನಗತ್ಯ ಖರ್ಚುಗಳು, ಆಸ್ಪತ್ರೆ ಅಲೆದಾಟ, ಸೊಸೆಯಿಂದ ನೋವು, ದೀರ್ಘಕಾಲದ ಅನಾರೋಗ್ಯ, ಆರ್ಥಿಕ ಸಹಾಯ ದೊರೆಯುವುದು, ಹಿರಿಯರಿಂದ ಮನ್ನಣೆ.
ಕನ್ಯಾ: ಮಕ್ಕಳಿಂದ ಸಹಾಯ, ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಭಾವನಾತ್ಮಕ ಚಿಂತನೆಗಳು, ದುಶ್ಚಟಗಳಿಂದ ತೊಂದರೆ, ಅನಾರೋಗ್ಯದಿಂದ ಗುಣಮುಖ, ಮಿತ್ರರಿಂದ ಸಹಾಯ, ಗರ್ಭ ದೋಷಗಳು.
ತುಲಾ: ವೃತ್ತಿಯಲ್ಲಿ ಹಿನ್ನಡೆ, ಅಧಿಕಾರಿಗಳಿಂದ ಸಮಸ್ಯೆ, ಗೌರವಕ್ಕೆ ಧಕ್ಕೆ, ಮಾನಸಿಕ ನೋವು, ಭವಿಷ್ಯದ ಚಿಂತೆಯಿಂದ ಬಳಲಿಕೆ.
ವೃಶ್ಚಿಕ: ತಂದೆಯಿಂದ ಸಹಾಯ, ಸಾಧಿಸುವ ಛಲ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ಪೂರ್ವಿಕರ ನೆನಪು, ಶುಭಕಾರ್ಯಕ್ಕೆ ಆಹ್ವಾನ.
ಧನಸ್ಸು: ಆರ್ಥಿಕ ಚಿಂತೆಗಳು, ಕೋರ್ಟ್ ಕೇಸುಗಳ ಯೋಚನೆ, ಪತ್ರವ್ಯವಹಾರದಲ್ಲಿ ಹಿನ್ನಡೆ, ಅಪಘಾತಗಳು, ಕುಟುಂಬದ ಸ್ಥಿತಿಗತಿಗಳಿಂದ ನಷ್ಟ, ಸಂಪತ್ತಿನ ಆಸೆ, ಗುಪ್ತ ವ್ಯಾಧಿಗಳು.
ಮಕರ: ಮಾನಸಿಕ ಚಂಚಲತೆ, ದೈಹಿಕ ಅಸಮರ್ಥತೆ, ವ್ಯಾಪಾರ-ವ್ಯವಹಾರದಲ್ಲಿ ನಷ್ಟ, ಅನಗತ್ಯ ಅಭಿಲಾಷೆಗಳು, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಅನಾರೋಗ್ಯದ ಚಿಂತೆ.
ಕುಂಭ: ಧೀರ್ಘಕಾಲದ ವ್ಯಾಧಿಗಳು, ದೂರ ಪ್ರದೇಶಕ್ಕೆ ತೆರಳುವಿರಿ, ಊಟ-ಉಪಚಾರ ಗಳಲ್ಲಿ ವ್ಯತ್ಯಾಸ, ರಾಜಕೀಯ ವ್ಯಕ್ತಿಗಳಿಂದ ತೊಂದರೆ.
ಮೀನ: ಮಕ್ಕಳಿಂದ ಅನುಕೂಲ, ರಹಸ್ಯ ಸ್ಥಳ ಭೇಟಿ, ಅಸಭ್ಯ ವರ್ತನೆಯಿಂದ ಮನಸ್ಸಿಗೆ ಬೇಸರ, ಹಿರಿಯರಿಂದ ಸಹಾಯ, ಏಕಾಗ್ರತೆಯ ಕೊರತೆ, ಗುರಿಯನ್ನು ಮುಟ್ಟುವ ಛಲ, ಪ್ರೀತಿ-ಪ್ರೇಮದಲ್ಲಿ ಆಸಕ್ತಿ.