ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಕೃಷ್ಣ ಪಕ್ಷ, ಅಮಾವಾಸ್ಯೆ,
ಗುರುವಾರ, ಶ್ರವಣ ನಕ್ಷತ್ರ
ಬೆಳಗ್ಗೆ 7:31 ನಂತರ ಧನಿಷ್ಠ ನಕ್ಷತ್ರ
Advertisement
ರಾಹುಕಾಲ: ಮಧ್ಯಾಹ್ನ 2:06 ರಿಂದ 3:34
ಗುಳಿಕಕಾಲ: ಬೆಳಗ್ಗೆ 9:42 ರಿಂದ 11:10
ಯಮಗಂಡಕಾಲ: ಬೆಳಗ್ಗೆ 6:46 ರಿಂದ 8:14
Advertisement
ಮೇಷ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಮನಸ್ಸಿಗೆ ಬೇಸರ, ಸ್ಥಿರಾಸ್ತಿ-ವಾಹನ ಪ್ರಾಪ್ತಿ, ಸಹೋದರನಿಂದ ನಷ್ಟ, ಮಿತ್ರರಿಂದ ಆಕಸ್ಮಿಕ ತೊಂದರೆ.
Advertisement
ವೃಷಭ: ಉದ್ಯೋಗಸ್ಥರಿಗೆ ಅನುಕೂಲ, ಪಾಲುದಾರಿಕೆ ವ್ಯವಹಾರದಲ್ಲಿ ತೊಂದರೆ, ಗಂಟಲು ಕಿರಿಕಿರಿ, ಗ್ಯಾಸ್ಟ್ರಿಕ್ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು.
Advertisement
ಮಿಥುನ: ಆಕಸ್ಮಿಕ ಧನ ಯೋಗ, ಕೋರ್ಟ್ ಕೇಸ್‍ಗಳಲ್ಲಿ ಜಯ, ವಾಗ್ವಾದಗಳಲ್ಲಿ ಯಶಸ್ಸು, ತಂದೆಯಿಂದ ಅನಗತ್ಯ ಬೈಗುಳ ಕೇಳುವಿರಿ.
ಕಟಕ: ಶುಭ ಕಾರ್ಯಗಳಿಗೆ ಮನಸ್ಸು, ಕೆಲಸ ಕಾರ್ಯಗಳಿಗೆ ಸುಸಮಯ, ಸ್ನೇಹಿತರಿಂದ ಅಗೌರವ, ಸಂಗಾತಿಯಿಂದ ಅವಮಾನ, ದುಶ್ಚಟಗಳಿಗೆ ಮನಸ್ಸು.
ಸಿಂಹ: ಸೇವಕರಿಂದ ತೊಂದರೆ, ಕಾರ್ಮಿಕರಿಂದ ನಷ್ಟ, ಋಣ ರೋಗ ಬಾಧೆ, ವಿಪರೀತ ಖರ್ಚು, ಮಾನಸಿಕ ಕಿರಿಕಿರಿ, ಕಾರ್ಯಗಳಲ್ಲಿ ಅಡೆತಡೆ, ದೀರ್ಘಕಾಲ ಮಲಗುವ ಯೋಚನೆ.
ಕನ್ಯಾ: ಹೆಣ್ಣು ಮಕ್ಕಳಿಂದ ಅನುಕೂಲ, ಸ್ನೇಹಿತರಿಂದ ಲಾಭ, ಗೃಹ-ಸ್ಥಳ ಬದಲಾವಣೆ, ಉದ್ಯೋಗ ಬದಲಾವಣೆಗೆ ಅಡೆತಡೆ, ದಾಯಾದಿಗಳ ಕಲಹ, ನೆರೆಹೊರೆಯವರಿಂದ ಕಿರಿಕಿರಿ, ಗೌರವಕ್ಕೆ ಧಕ್ಕೆ ಸಾಧ್ಯತೆ.
ತುಲಾ: ಉದ್ಯೋಗ ಪ್ರಾಪ್ತಿ, ಅನಗತ್ಯ ಮಾತುಗಳು, ಆತ್ಮ ಗೌರವಕ್ಕೆ ಚ್ಯುತಿ, ತಾಯಿ ಕಡೆಯಿಂದ ಅನುಕೂಲ.
ವೃಶ್ಚಿಕ: ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಉನ್ನತ ವಿದ್ಯಾಭ್ಯಾಸಕ್ಕೆ ಪ್ರಯಾಣ, ಉಸಿರಾಟದ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು, ಹಣಕಾಸು ಪ್ರಾಪ್ತಿ.
ಧನಸ್ಸು: ಆಕಸ್ಮಿಕ ಧನಾಗಮನ, ಹಿತ ಶತ್ರುಗಳ ಕಾಟ, ಗೌರವಕ್ಕೆ ಧಕ್ಕೆ, ಆಕಸ್ಮಿಕ ಅಪಘಾತ, ಕುಟುಂಬದಲ್ಲಿ ಸಂಕಷ್ಟ.
ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಮನೆಗೆ ಬಂಧುಗಳು ಆಗಮನ, ಸ್ವಯಂಕೃತ್ಯಗಳಿಂದ ಸಂಕಷ್ಟಕ್ಕೆ ಸಿಲುಕುವಿರಿ, ಆತ್ಮೀಯರನ್ನು ದೂರ ಮಾಡುವ ಆಲೋಚನೆ, ಅದೃಷ್ಟವನ್ನು ದೂರ ಮಾಡುವಿರಿ.
ಕುಂಭ: ಗರ್ಭದೋಷ, ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗದಲ್ಲಿ ಒತ್ತಡ, ಮಾನಸಿಕ ಕಿರಿಕಿರಿ, ಮಕ್ಕಳಿಂದ ಸ್ಥಿರಾಸ್ತಿ ನಷ್ಟ.
ಮೀನ: ಮಿತ್ರರಿಂದ ಉಲ್ಲಾಸ ಮನೋರಂಜನೆ, ಗೌರವ ಸನ್ಮಾನ ಪ್ರಾಪ್ತಿ, ಉನ್ನತ ವಿದ್ಯಾಭ್ಯಾಸಕ್ಕೆ ಶುಭ, ಪ್ರಯಾಣದಿಂದ ತೊಂದರೆ, ವಾಹನ ಖರೀದಿಗೆ ಚಿಂತನೆ, ತಂದೆಯಿಂದ ನಷ್ಟ.