LatestAstrologyDina BhavishyaMain Post

ದಿನ ಭವಿಷ್ಯ: 13-10-2021

ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,
ದಕ್ಷಿಣಾಯಣ, ಶರದ್ ಋತು,
ಆಶ್ವಯುಜ ಮಾಸ, ಶುಕ್ಲಪಕ್ಷ,
ವಾರ: ಬುಧವಾರ,
ತಿಥಿ: ದುರ್ಗಾಷ್ಟಮಿ,
ನಕ್ಷತ್ರ: ಪೂರ್ವಾಷಾಢ,
ರಾಹುಕಾಲ: 12.09 ರಿಂದ 1.38
ಗುಳಿಕಕಾಲ: 10.40 ರಿಂದ 12.09
ಯಮಗಂಡಕಾಲ: 7.41 ರಿಂದ 9.11

ಮೇಷ: ಪರಿಶ್ರಮಕ್ಕೆ ತಕ್ಕ ಫಲ ಲಭಿಸುತ್ತೆ, ಕಾರ್ಯಸಾಧನೆಗಾಗಿ ತಿರುಗಾಟ, ದೇವತಾ ಕಾರ್ಯಗಳಲ್ಲಿ ಭಾಗಿ, ಮನಸ್ಸಿನಲ್ಲಿ ಗೊಂದಲ.

ವೃಷಭ: ಅಧಿಕಾರಿಗಳಿಂದ ಪ್ರಶಂಸೆ, ಕೋರ್ಟು ವ್ಯವಹಾರಗಳಲ್ಲಿ ಜಯ, ಮಿತ್ರರಿಂದ ವಂಚನೆ ಎಚ್ಚರ.

ಮಿಥುನ: ಸ್ತ್ರೀಯರು ತಾಳ್ಮೆಯಿಂದ ಇರಿ, ಮಗನಿಂದ ಶುಭ ವಾರ್ತೆ ಕೇಳುವಿರಿ, ಪರಾಕ್ರಮ ಕೆಲಸಗಳಲ್ಲಿ ಯಶಸ್ಸು.

ಕಟಕ: ಅಪರಿಚಿತರ ವಿಷಯದಲ್ಲಿ ಜಾಗ್ರತೆ, ವಿದ್ಯಾರ್ಥಿಗಳಲ್ಲಿ ಗೊಂದಲ, ಕ್ರಯ ವಿಕ್ರಯಗಳಲ್ಲಿ ಲಾಭ.

ಸಿಂಹ: ವಿವಿಧ ಮೂಲಗಳಿಂದ ಧನ ಲಾಭ, ವೈರಿಗಳಿಂದ ದೂರವಿರಿ, ಮನಶಾಂತಿ, ಉದಾಸೀನದಿಂದ ವಸ್ತುಗಳನ್ನು ಕಳೆದುಕೊಳ್ಳುವಿರಿ.

ಕನ್ಯಾ: ಮಾತಾಪಿತರಲ್ಲಿ ಪ್ರೀತಿ ವಾತ್ಸಲ್ಯ, ಕುಟುಂಬ ಸೌಖ್ಯ, ಕೃಷಿಯಲ್ಲಿ ಲಾಭ, ವಿಪರೀತ ಕೋಪ, ನಾನಾ ರೀತಿಯ ಸಂಕಷ್ಟ.

ತುಲಾ: ಅಧಿಕ ಕೆಲಸದಿಂದ ವಿಶ್ರಾಂತಿ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಬಡರೋಗಿಗಳಿಗೆ ಸಹಾಯ ಮಾಡಿ.

ವೃಶ್ಚಿಕ: ಹಿತೈಷಿಗಳ ಸಲಹೆ ಪಡೆಯಿರಿ, ಹಣಕಾಸಿನ ಸಮಸ್ಯೆ, ಸಲ್ಲದ ಅಪವಾದ, ಗೆಳೆಯರೊಂದಿಗೆ ಮೈಮನಸ್ಸು.

ಧನಸ್ಸು: ಯಂತ್ರೋಪಕರಣಗಳಿಂದ ಲಾಭ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಕಾರ್ಯಸಿದ್ಧಿ, ನಾನಾ ವಿಚಾರಗಳಲ್ಲಿ ಆಸಕ್ತಿ.

ಮಕರ: ಅತಿಯಾದ ದೇಹಾಲಸ್ಯ, ಬಾಕಿ ಹಣ ಕೈಸೇರುವುದು, ಸುಖ ಭೋಜನ, ಷೇರು ವ್ಯವಹಾರಗಳಲ್ಲಿ ಎಚ್ಚರ, ಪರರಿಂದ ತೊಂದರೆ.

ಕುಂಭ: ಹಣ ಬಂದರೂ ಉಳಿಯುವುದಿಲ್ಲ, ಸ್ತ್ರೀ ಸೌಖ್ಯ, ಚೋರಭಯ ಎಚ್ಚರ, ಚಂಚಲ ಸ್ವಭಾವ.

ಮೀನ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಕೆಲಸ ಕಾರ್ಯಗಳಲ್ಲಿ ನಿಧಾನಗತಿ, ಕೃಷಿಯಲ್ಲಿ ಲಾಭ, ವಿದೇಶ ಪ್ರಯಾಣ, ಶತ್ರು ಧ್ವಂಸ.

 

 

Related Articles

Leave a Reply

Your email address will not be published. Required fields are marked *