ಪಂಚಾಂಗ
ಶ್ರೀವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಶುಕ್ಲ ಪಕ್ಷ, ಏಕಾದಶಿ ತಿಥಿ,
ಶುಕ್ರವಾರ, ವಿಶಾಖ ನಕ್ಷತ್ರ
Advertisement
ರಾಹುಕಾಲ: ಬೆಳಗ್ಗೆ 10:52 ರಿಂದ 12:28
ಗುಳಿಕಕಾಲ: ಬೆಳಗ್ಗೆ 9:16 ರಿಂದ 10:52
ಯಮಗಂಡಕಾಲ: ಬೆಳಗ್ಗೆ 6:04 ರಿಂದ 7:40
Advertisement
ದಿನ ವಿಶೇಷ: ಆಷಾಢ ಶುಕ್ರವಾರ, ಲಕ್ಷ್ಮೀ ಪೂಜೆ
Advertisement
ಮೇಷ: ಸ್ತ್ರೀಯರಿಂದ ಅನುಕೂಲ, ಪಿತ್ರಾರ್ಜಿತ ಆಸ್ತಿ ಪ್ರಾಪ್ತ, ತಂದೆಯೊಂದಿಗೆ ಉತ್ತಮ ಬಾಂಧವ್ಯ, ದಾಯಾದಿಗಳಿಂದ ಕಿರಿಕಿರಿ, ಪುಣ್ಯಕ್ಷೇತ್ರಗಳ ದರ್ಶನ, ದೇವತಾ ಕಾರ್ಯಗಳಿಗೆ ಅಧಿಕ ಖರ್ಚು.
Advertisement
ವೃಷಭ: ಬಂಧುಗಳಿಂದ ಕಿರಿಕಿರಿ, ನೆರೆಹೊರೆಯವರು ಶತ್ರುಗಳಾಗುವರು, ಪ್ರಯಾಣದಲ್ಲಿ ಸಂಕಷ್ಟ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಸಹೋದರರಿಂದ ಕಲಹ.
ಮಿಥುನ: ಮಕ್ಕಳಿಂದ ಸಹಾಯ, ದುಶ್ಚಟಗಳಿಂದ ತೊಂದರೆ, ಋಣ ರೋಗ ಬಾಧೆ, ಧನ ನಷ್ಟ, ಸಂಗಾತಿಯಿಂದ ಅನುಕೂಲ, ಉದ್ಯೋಗದಲ್ಲಿ ಪ್ರಗತಿ.
ಕಟಕ: ಸ್ಥಿರಾಸ್ತಿ ವಿಚಾರದಲ್ಲಿ ನಿರಾಸೆ, ಅಜೀರ್ಣ ಸಮಸ್ಯೆ, ಉದರ ಬಾಧೆ, ಹಾರ್ಮೋನ್ ವ್ಯತ್ಯಾಸದಿಂದ ಅನಾರೋಗ್ಯ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ದಾನ-ಧರ್ಮದಲ್ಲಿ ಆಸಕ್ತಿ, ಗುರುಗಳ ದರ್ಶನಕ್ಕೆ ಮನಸ್ಸು.
ಸಿಂಹ: ಪ್ರಯಾಣದಲ್ಲಿ ತೊಂದರೆ, ಅಧಿಕ ನಷ್ಟ, ಸಹೋದರಿಯೊಂದಿಗೆ ಕಿರಿಕಿರಿ, ನೆರೆಹೊರೆಯವರೊಂದಿಗೆ ಮನಃಸ್ತಾಪ, ಗೃಹ-ಸ್ಥಳ ಬದಲಾವಣೆ, ಆಕಸ್ಮಿಕ ಸೋಲು-ನಷ್ಟ, ಮನಸ್ಸಿನಲ್ಲಿ ಆತಂಕ.
ಕನ್ಯಾ: ಹಿರಿಯ ಸಹೋದರಿಯಿಂದ ಲಾಭ, ಮಿತ್ರರಿಂದ ಸಹಾಯ, ಸಂಗಾತಿಯ ಮಾತುಗಳಿಂದ ನೋವು, ಸ್ಥಿರಾಸ್ತಿ-ವಾಹನದಿಂದ ಅನುಕೂಲ, ಆಸೆ ಆಕಾಂಕ್ಷೆಗಳಲ್ಲಿ ಧಕ್ಕೆ, ಆತ್ಮೀಯರು-ದಾಯಾದಿಗಳಿಂದ ತೊಂದರೆ.
ತುಲಾ: ಗ್ಯಾಸ್ಟ್ರಿಕ್-ಅಜೀರ್ಣ ಸಮಸ್ಯೆ, ಉದ್ಯೋಗ ಸ್ಥಳದಲ್ಲಿ ಶತ್ರುಕಾಟ, ಸ್ವಂತ ಕೆಲಸಗಳಲ್ಲಿ ವಿಳಂಬ, ಉದ್ಯೋಗ ನಿಮಿತ್ತ ಪ್ರಯಾಣ, ಕಾರ್ಮಿಕರು-ಸೇವಕರಿಂದ ತೊಂದರೆ, ಹಣಕಾಸು ಸಮಸ್ಯೆ, ಸಾಲ ಬಾಧೆ.
ವೃಶ್ಚಿಕ: ದೂರ ಪ್ರಯಾಣ, ಅಧಿಕ ಖರ್ಚು, ಮಕ್ಕಳಿಂದ ನಷ್ಟ, ಸಂತಾನ ಸಮಸ್ಯೆ, ಭವಿಷ್ಯದ ಬಗ್ಗೆ ಚಿಂತೆ, ಅಧಿಕ ಉಷ್ಣ ಬಾಧೆ, ಶೀತ ಸಂಬಂಧಿತ ರೋಗ, ತಂದೆಯಿಂದ ನಷ್ಟ.
ಧನಸ್ಸು: ಸ್ವಂತ ವ್ಯಾಪಾರ-ವ್ಯವಹಾರದಲ್ಲಿ ಲಾಭ, ಉದ್ಯೋಗದಲ್ಲಿ ಬಡ್ತಿ, ಗೌರವ ಪ್ರಶಂಸೆ ಪ್ರಾಪ್ತಿ, ಮಕ್ಕಳಿಂದ ಅನುಕೂಲ, ಸ್ಥಿರಾಸ್ತಿ-ವಾಹನದಿಂದ ಲಾಭ.
ಮಕರ: ಕುಟುಂಬದಲ್ಲಿ ಮನಃಸ್ತಾಪ, ಸಂಗಾತಿ, ಮಕ್ಕಳಿಂದ ನಷ್ಟ, ವೈವಾಹಿಕ ಜೀವನದಲ್ಲಿ ವಿರಸ, ನಾನಾ ಕ್ಷೇತ್ರದಲ್ಲಿ ಉದ್ಯೋಗ ಪ್ರಾಪ್ತಿ, ದೂರ ಪ್ರದೇಶಕ್ಕೆ ಪ್ರಯಾಣ ಸಾಧ್ಯತೆ.
ಕುಂಭ: ಪ್ರಯಾಣ ರದ್ದಾಗುವುದು, ಶರೀರದಲ್ಲಿ ನೋವು, ಸಂತಾನ ದೋಷ, ಬಾಲ ಗ್ರಹದೋಷ ಕಾಡಲಿದೆ. ಸಹೋದರನಿಂದ ಅನುಕೂಲ, ಪತ್ರವ್ಯವಹಾರಗಳಿಂದ ಧನಾಗಮನ.
ಮೀನ: ಆಕಸ್ಮಿಕ ಲಾಭ, ಗೌರವ ಸನ್ಮಾನಗಳು ಪ್ರಾಪ್ತಿ, ಆಕಸ್ಮಿಕ ಉದ್ಯೊಗ ಪ್ರಾಪ್ತಿ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ದೇವರಲ್ಲಿ ಅಪನಂಬಿಕೆ, ಇಲ್ಲ ಸಲ್ಲದ ಅಪವಾದ ನಿಂದನೆ.