ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಶುಕ್ಲ ಪಕ್ಷ, ತ್ರಯೋದಶಿ ತಿಥಿ,
ಬುಧವಾರ, ಶ್ರವಣ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 12:19 ರಿಂದ 1:51
ಗುಳಿಕಕಾಲ: ಬೆಳಗ್ಗೆ 10:27 ರಿಂದ 12:19
ಯಮಗಂಡಕಾಲ: ಬೆಳಗ್ಗೆ 7:43 ರಿಂದ 9:15
Advertisement
ಮೇಷ: ಹಿತ ಶತ್ರುಗಳಿಂದ ತೊಂದರೆ, ಆರೋಗ್ಯದಲ್ಲಿ ಚೇತರಿಕೆ, ಅಧಿಕಾರಿಗಳಿಂದ ಪ್ರಶಂಸೆ, ಸುಖ ಭೋಜನ ಪ್ರಾಪ್ತಿ.
Advertisement
ವೃಷಭ: ನೆರೆಹೊರೆಯವರ ಜೊತೆ ಓಡಾಟ, ಹಣಕಾಸು ಖರ್ಚು, ಶತ್ರುಗಳ ನಾಶ, ಮಾನಸಿಕ ಒತ್ತಡ, ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ.
Advertisement
ಮಿಥುನ: ದೇವತಾ ಕಾರ್ಯಗಳಲ್ಲಿ ಭಾಗಿ, ಸಂಗಾತಿ ಸಲಹೆಯಿಂದ ಅನುಕೂಲ, ಸಾರ್ವಜನಿಕ ಕ್ಷೇತ್ರದಲ್ಲಿ ಭಾಗಿ, ದೂರ ಪ್ರಯಾಣ ಸಾಧ್ಯತೆ.
Advertisement
ಕಟಕ: ಪ್ರಿಯ ಜನರ ಭೇಟಿ, ಉತ್ತಮ ಬುದ್ಧಿಶಕ್ತಿ, ವಿದೇಶ ಪ್ರಯಾಣ, ಅನ್ಯ ಜನರಲ್ಲಿ ವೈಮನಸ್ಸು, ಕೀರ್ತಿ ಲಾಭ.
ಸಿಂಹ: ದ್ರವ್ಯ ಲಾಭ, ಸ್ಥಳ ಬದಲಾವಣೆ, ಕೆಟ್ಟ ಆಲೋಚನೆ, ದಾಂಪತ್ಯದಲ್ಲಿ ಪ್ರೀತಿ, ಶೀತ ಸಂಬಂಧಿತ ರೋಗ ಬಾಧೆ.
ಕನ್ಯಾ: ವ್ಯಾಪಾರ-ವ್ಯವಹಾರಗಳಲ್ಲಿ ಪ್ರಗತಿ, ಅಧಿಕವಾದ ಖರ್ಚು, ಪುಣ್ಯಕ್ಷೇತ್ರ ದರ್ಶನ, ದುಷ್ಟರಿಂದ ದೂರವಿರಿ, ಶತ್ರುಗಳ ಬಾಧೆ.
ತುಲಾ: ಕೆಲಸ ಕಾರ್ಯಗಳಲ್ಲಿ ವಿಳಂಬ, ಬಂಧುಗಳಿಂದ ತೊಂದರೆ, ಕುಟುಂಬದಲ್ಲಿ ಅಶಾಂತಿ, ವಾಹನ ಅಪಘಾತ ಸಾಧ್ಯತೆ.
ವೃಶ್ಚಿಕ: ವಿಪರೀತ ಖರ್ಚು, ಪಾಪ ಕಾರ್ಯದಲ್ಲಿ ಆಸಕ್ತಿ, ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗದಲ್ಲಿ ತೊಂದರೆ, ತಾಯಿ ಕಡೆಯವರಿಂದ ಕಿರಿಕಿರಿ, ಬಂಧುಗಳಿಂದ ತೊಂದರೆ.
ಧನಸ್ಸು: ಆಕಸ್ಮಿಕ ಪ್ರಯಾಣ, ಧನ ಲಾಭ, ದೃಷ್ಠಿ ದೋಷದಿಂದ ತೊಂದರೆ, ಕೃಷಿಕರಿಗೆ ಲಾಭ, ಗೆಳೆಯರಿಂದ ಸಹಾಯ.
ಮಕರ: ಇಲ್ಲ ಸಲ್ಲದ ಅಪವಾದ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮನಃಕ್ಲೇಷ, ಮನಸ್ಸಿಗೆ ಅಶಾಂತಿ, ಮಹಿಳೆಯರಿಗೆ ಉದ್ಯೋಗದಲ್ಲಿ ಬಡ್ತಿ.
ಕುಂಭ: ಯತ್ನ ಕಾರ್ಯದಲ್ಲಿ ವಿಳಂಬ, ವ್ಯಾಪಾರದಲ್ಲಿ ಪ್ರಗತಿ, ಚಂಚಲ ಮನಸ್ಸು, ಗಣ್ಯ ವ್ಯಕ್ತಿಗಳ ಭೇಟಿ, ಅಕಾಲ ಭೋಜನ ಪ್ರಾಪ್ತಿ.
ಮೀನ: ಅತಿಯಾದ ಭಯ, ಕುಟುಂಬದಲ್ಲಿ ನೆಮ್ಮದಿ, ಮಿತ್ರರಲ್ಲಿ ವಿರೋಧ, ಆತ್ಮೀಯರಲ್ಲಿ ಮನಃಸ್ತಾಪ, ಈ ದಿನ ಮಿಶ್ರ ಫಲ.