ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಶುಕ್ಲ ಪಕ್ಷ, ದಶಮಿ ತಿಥಿ,
ಗುರುವಾರ, ಸ್ವಾತಿ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 2:04 ರಿಂದ 3:40
ಗುಳಿಕಕಾಲ: ಬೆಳಗ್ಗೆ 9:16 ರಿಂದ 10:52
ಯಮಗಂಡಕಾಲ: ಬೆಳಗ್ಗೆ 6:04 ರಿಂದ 7:40
Advertisement
ಮೇಷ: ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಸ್ತ್ರೀಯರಿಂದ ಅವಮಾನ, ಸಲ್ಲದ ಅಪವಾದ ನಿಂದನೆ, ಗೌರವಕ್ಕೆ ಧಕ್ಕೆ, ಮಕ್ಕಳು ದುಶ್ಚಟಕ್ಕೆ ಬಲಿಯಾಗುವರು, ಹಠ-ಮೊಂಡುತನ.
Advertisement
ವೃಷಭ: ಸ್ಥಿರಾಸ್ತಿ ವಿಚಾರದಲ್ಲಿ ಕುಟುಂಬದಲ್ಲಿ ಮನಃಸ್ತಾಪ, ಶತ್ರುತ್ವ ಹೆಚ್ಚಾಗುವುದು, ಮಕ್ಕಳ ಭವಿಷ್ಯದ ಚಿಂತೆ, ಸ್ವಯಂಕೃತ್ಯಗಳಿಂದ ನಷ್ಟ, ಸಾಲದ ಸುಳಿಗೆ ಸಿಲುಕುವಿರಿ.
Advertisement
ಮಿಥುನ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಮನಸ್ಸಿನಲ್ಲಿ ಆತಂಕ, ಉದ್ಯೋಗ ಬದಲಾವಣೆ, ಗೃಹ ಬದಲಾವಣೆಯಿಂದ ಸಮಸ್ಯೆ, ದುಶ್ಚಟಗಳಲ್ಲಿ ತೊಡಗುವಿರಿ.
Advertisement
ಕಟಕ: ಶತ್ರುಗಳನ್ನು ನಿಂದಿಸುವಿರಿ, ಧಾರ್ಮಿಕ ಚಿಂತಕರಲ್ಲಿ ಮನಃಸ್ತಾಪ, ಹಣಕಾಸು ಮೋಸ, ಕೆಲಸಗಳಲ್ಲಿ ಆತುರ, ಧೈರ್ಯ ಪ್ರದರ್ಶನ ಮಾಡುವಿರಿ.
ಸಿಂಹ: ಆರೋಗ್ಯದಲ್ಲಿ ವತ್ಯಾಸ, ದಾಂಪತ್ಯದಲ್ಲಿ ಸಂಶಯ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಹಣಕಾಸು ಸಮಸ್ಯೆ.
ಕನ್ಯಾ: ರಾಜಕೀಯ ವ್ಯಕ್ತಿಗಳಿಂದ ಸಹಕಾರ, ಅಧಿಕಾರಿಗಳಿಂದ ಅನುಕೂಲ, ಹಣಕಾಸು ನಷ್ಟ, ಭವಿಷ್ಯದ ಬಗ್ಗೆ ಚಿಂತೆ, ದುಸ್ವಪ್ನಗಳಿಂದ ನಿದ್ರಾಭಂಗ, ಅನಗತ್ಯ ಮಾತಿನಿಂದ ಕಲಹ,ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ.
ತುಲಾ: ಮಿತ್ರರು ಶತ್ರುಗಳಾಗಿ ಪರಿವರ್ತನೆ, ಮಹಿಳಾ ಮಿತ್ರರಿಂದ ಅದೃಷ್ಟ ವಂಚನೆ, ಆತ್ಮ ಸಂಕಟಗಳು, ವ್ಯಾಪಾರ ವ್ಯವಹಾರದಲ್ಲಿ ನಷ್ಟ, ವಿಪರೀತ ಹಣಕಾಸು ಸಮಸ್ಯೆ.
ವೃಶ್ಚಿಕ: ಪ್ರೇಮ ವಿಚಾರದಲ್ಲಿ ಸಮಸ್ಯೆ, ಸರ್ಕಾರಿ ಉದ್ಯೋಗಸ್ಥರಿಗೆ ಅನುಕೂಲ, ಸಾಲ ತೀರಿಸುವ ಮನಸ್ಸು, ಬಡ್ಡಿ ಕಟ್ಟುವ ಸಾಧ್ಯತೆ.
ಧನಸ್ಸು: ಶತ್ರುಕಾಟದಿಂದ ಮಾನಸಿಕ ವೇದನೆ, ದೇವತಾ ಕಾರ್ಯಗಳಲ್ಲಿ ಆಸಕ್ತಿ, ಮಕ್ಕಳು ಬಿದ್ದು ಪೆಟ್ಟು ಮಾಡಿಕೊಳ್ಳುವರು, ಆಕಸ್ಮಿಕ ಅದೃಷ್ಟ, ಗೌರವ ಸನ್ಮಾನ ಪ್ರಾಪ್ತಿ.
ಮಕರ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಆಸ್ಪತ್ರೆಗೆ ಅಲೆದಾಟ, ಆತ್ಮೀಯರೊಂದಿಗೆ ಕಲಹ, ಮೇಲಾಧಿಕಾರಿಗಳಿಂದ ಕಿರಿಕಿರಿ, ಉದ್ಯೋಗ ಬಡ್ತಿಗೆ ತೊಂದರೆ.
ಕುಂಭ: ಪಾಲುದಾರಿಕೆ ವ್ಯವಹಾರದಲ್ಲಿ ತೊಂದರೆ, ವಾಹನ ಅಪಘಾತ ಸಾಧ್ಯತೆ, ಪ್ರಯಾಣ ರದ್ದಾಗುವುದು, ಸ್ಥಿರಾಸ್ತಿ ನಷ್ಟ ಸಾಧ್ಯತೆ, ವಸ್ತ್ರಾಭರಣ ಕಳೆದುಕೊಳ್ಳುವ ಸಾಧ್ಯತೆ.
ಮೀನ: ಆಕಸ್ಮಿಕ ದುರ್ಘಟನೆ, ಮಕ್ಕಳ ಜೀವನದ ಮೇಲೆ ದುಷ್ಪರಿಣಾಮ, ದೇವತಾ ಕಾರ್ಯಗಳಲ್ಲಿ ಅಸಮಾಧಾನ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ, ಸ್ನೇಹಿತರಿಂದ ಎಚ್ಚರಿಕೆ, ಹಿರಿಯ ವ್ಯಕ್ತಿಯೊಂದಿಗೆ ಸಂಧಾನ.