ಪಂಚಾಂಗ
ಸಂವತ್ಸರ: ಪರಾಭವನಾಮ
ಅಯನ: ದಕ್ಷಿಣಾಯಣ
ಋತು: ವರ್ಷ, ಮಾಸ: ಶ್ರಾವಣ
ಪಕ್ಷ: ಕೃಷ್ಣ, ತಿಥಿ: ಚತುರ್ದಶಿ
ನಕ್ಷತ್ರ: ಮಖ
ರಾಹುಕಾಲ: 1:52 – 3:24
ಗುಳಿಕಕಾಲ: 9:16 – 10:48
ಯಮಗಂಡಕಾಲ: 6:12 – 7:44
ಮೇಷ: ಆದಾಯ ಸಮಾನ್ಯವಾಗಿರುತ್ತದೆ, ಬಂಧುಗಳೊಡನೆ ವಿರೋಧ, ಸ್ಥಿರಾಸ್ತಿ ವ್ಯವಹಾರದಲ್ಲಿ ಅಭಿವೃದ್ಧಿ.
ವೃಷಭ: ಕೆಲಸದಲ್ಲಿನ ಉತ್ಸಾಹ ಕಡಿಮೆಯಾಗಬಹುದು, ಹಿರಿಯರಿಂದ ಸಹಕಾರ, ಸರ್ಕಾರಿ ಸಂಸ್ಥೆಗಳ ಮಧ್ಯವರ್ತಿಗಳಿಗೆ ಲಾಭ.
ಮಿಥುನ: ಕೋಪ ಹೆಚ್ಚಾಗಿರುತ್ತದೆ, ನಿರೀಕ್ಷೆಗೂ ಮೀರಿದ ಆದಾಯ, ವಿಮೆ ಏಜೆಂಟ್‌ಗಳಿಗೆ ಲಾಭ.
ಕಟಕ: ಗೌರವ ನಷ್ಟ, ಸರ್ಕಾರದಿಂದ ಬರಬೇಕಿದ್ದ ಹಣ ಸರಾಗ, ಆಸ್ತಿ ವ್ಯವಹಾರಸ್ತರಿಗೆ ಶುಭಯೋಗ.
ಸಿಂಹ: ಹಿರಿಯರಿಗೆ ಸರ್ಕಾರಿ ಗೌರವಗಳು ಲಭ್ಯ, ವಾಕ್ ಚಾತುರ್ಯ ವೃದ್ಧಿ, ಸೇವಕರಿಂದ ತೊಡಕು.
ಕನ್ಯಾ: ಆದಾಯದಲ್ಲಿ ಚೇತರಿಕೆ, ಹೂಡಿಕೆಯಲ್ಲಿ ಎಚ್ಚರ, ಬಂಧುಗಳಿಂದ ಸಹಾಯ.
ತುಲಾ: ಹೇರ್ ಸಲೂನ್ ನಡೆಸುವವರಿಗೆ ಲಾಭ, ಆಸ್ತಿ ಖರೀದಿಯಲ್ಲಿ ಎಚ್ಚರ, ವಿದೇಶ ವಾಸ, ಮಕ್ಕಳೊಂದಿಗೆ ಆಪ್ತಸಮಾಲೋಚನೆ.
ವೃಶ್ಚಿಕ: ಶ್ರಮಕ್ಕೆ ಫಲ ಸಿಗುತ್ತದೆ, ರಿಯಲ್ ಎಸ್ಟೇಟ್ ಕಂಪನಿ ನೌಕರರಿಗೆ ಅಭಿವೃದ್ಧಿ, ಸ್ನಾಯುಸೆಳೆತದ ತೊಂದರೆ.
ಧನಸ್ಸು: ಅಧಿಕ ಖರ್ಚು, ಬಂಧುಗಳು ಹೊಟ್ಟೆಕಿಚ್ಚು ಪಡುವರು, ಕೃಷಿವಿಜ್ಞಾನ ವಿದ್ಯಾರ್ಥಿಗಳಿಗೆ ಅಭಿವೃದ್ಧಿ.
ಮಕರ: ಶ್ರಮಕ್ಕೆ ಬೆಲೆ ಸಿಗುವ ಕಾಲ, ವಿದೇಶಿ ವ್ಯಾಪಾರಸ್ತರಿಗೆ ಧನಾದಾಯ, ಆಕಸ್ಮಿಕ ಖರ್ಚು.
ಕುಂಭ: ವಿದೇಶಿ ಭಾಷಾ ಶಿಕ್ಷಕರಿಗೆ ಶುಭ, ಯುವಕರಿಗೆ ಹಿನ್ನಡೆ, ಸರ್ಕಾರಿ ಗುತ್ತಿಗೆಗಳಲ್ಲಿ ಅಡೆತಡೆ.
ಮೀನ: ಕೃಷಿಯಿಂದ ಅನುಕೂಲ, ತಲೆನೋವಿನ ಸಮಸ್ಯೆ, ವಿದ್ಯಾರ್ಥಿಗಳಿಗೆ ಫಲಿತಾಂಶಗಳಲ್ಲಿ ಶುಭಫಲ.

