ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜ್ಯೇಷ್ಠ ಮಾಸ,
ಶುಕ್ಲ ಪಕ್ಷ, ಅಷ್ಟಮಿ ತಿಥಿ,
ಸೋಮವಾರ, ಪುಬ್ಬ ನಕ್ಷತ್ರ
ರಾಹುಕಾಲ: ಬೆಳಗ್ಗೆ 7:35 ರಿಂದ 9:11
ಗುಳಿಕಕಾಲ: ಮಧ್ಯಾಹ್ನ 1:59 ರಿಂದ 3:35
ಯಮಗಂಡಕಾಲ: ಬೆಳಗ್ಗೆ 10:47 ರಿಂದ 12:23
Advertisement
ಮೇಷ: ಕುಟುಂಬದಲ್ಲಿ ಅಹಿತಕರ ವಾತಾವರಣ, ವೃಥಾ ತಿರುಗಾಟ, ಆಕಸ್ಮಿಕ ಧನ ಲಾಭ, ನಂಬಿದ ಜನರಿಂದ ಮೋಸ, ಮನಃಕ್ಲೇಷ.
Advertisement
ವೃಷಭ: ಸ್ತ್ರೀಯರಿಗೆ ಅನುಕೂಲ, ವ್ಯಾಪಾರ-ವ್ಯವಹಾರದಲ್ಲಿ ಲಾಭ, ಶತ್ರುಗಳಿಂದ ತೊಂದರೆ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಈ ದಿನ ಎಚ್ಚರಿಕೆಯ ನಡೆ ಅಗತ್ಯ.
Advertisement
ಮಿಥುನ: ಗುರು ಹಿರಿಯರಲ್ಲಿ ಭಕ್ತಿ, ಕುಟುಂಬ ಸೌಖ್ಯ, ಸ್ನೇಹಿತರಿಂದ ಸಹಾಯ, ಮನಸ್ಸಿನಲ್ಲಿ ಭಯ ಭೀತಿ ನಿವಾರಣೆ.
Advertisement
ಕಟಕ: ಉದ್ಯೋಗದಲ್ಲಿ ಬಡ್ತಿ, ಯತ್ನ ಕಾರ್ಯದಲ್ಲಿ ಜಯ, ಆದಾಯಕ್ಕಿಂತ ಖರ್ಚು ಹೆಚ್ಚು, ಶೀತ ಸಂಬಂಧಿತ ರೋಗ, ವಿದ್ಯಾರ್ಥಿಗಳಿಗೆ ಗೊಂದಲ.
ಸಿಂಹ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಅಧಿಕಾರಿಗಳಿಂದ ಪ್ರಶಂಸೆ, ದುಷ್ಟರಿಂದ ದೂರವಿರಿ, ಕೆಲಸ ಕಾರ್ಯಗಳಲ್ಲಿ ಜಯ, ರಾಜ ಸನ್ಮಾನ.
ಕನ್ಯಾ: ಐಶ್ವರ್ಯ ವೃದ್ಧಿ, ಹಿರಿಯರ ಆಗಮನದಿಂದ ನೆಮ್ಮದಿ, ಮನೆಯಲ್ಲಿ ಸಂತಸದ ವಾತಾವರಣ, ಸುಖ ಭೋಜನ, ಸ್ಥಿರಾಸ್ತಿ ಖರೀದಿಸುವ ಸಾಧ್ಯತೆ.
ತುಲಾ: ಎಲ್ಲಿ ಹೋದರೂ ಅಶಾಂತಿ, ಇಲ್ಲ ಸಲ್ಲದ ಅಪವಾದ, ದಾಯಾದಿಗಳ ಕಲಹ, ಆತ್ಮೀಯರಲ್ಲಿ ಮನಃಸ್ತಾಪ, ವೃಥಾ ತಿರುಗಾಟ, ಸ್ವಜನರ ವಿರೋಧ.
ವೃಶ್ಚಿಕ: ಹಣಕಾಸು ಸಂಕಷ್ಟ, ಸಾಲ ಬಾಧೆ, ವಿಪರೀತ ಹಣ ಖರ್ಚು, ಶೀತ ಸಂಬಂಧಿತ ರೋಗ, ಅನಾವಶ್ಯಕ ವಾಗ್ವಾದಗಳಿಂದ ದೂರ ಉಳಿಯುವುದು ಉತ್ತಮ.
ಧನಸ್ಸು: ಆರೋಗ್ಯದಲ್ಲಿ ಏರುಪೇರು, ಸಂಶೋಧನೆಗಳಲ್ಲಿ ಪ್ರಗತಿ ಪ್ರಾಪ್ತಿ, ಗುತ್ತಿಗೆ ವ್ಯವಹಾರಗಳಲ್ಲಿ ಲಾಭ, ಈ ದಿನ ಮಿಶ್ರ ಫಲ.
ಮಕರ: ಮಾತಿನಲ್ಲಿ ಹಿಡಿತವಿರಲಿ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಉತ್ತಮ ಬುದ್ಧಿಶಕ್ತಿ, ಸರ್ಕಾರಿ ಕೆಲಸಗಳಲ್ಲಿ ಮುನ್ನಡೆ, ಪರರ ಧನ ಪ್ರಾಪ್ತಿ.
ಕುಂಭ: ಋಣ ಬಾಧೆ, ಮನಃಸ್ತಾಪ, ಅಧಿಕ ಧನವ್ಯಯ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ನೂತನ ವಸ್ತ್ರಾಭರಣ ಪ್ರಾಪ್ತಿ.
ಮೀನ: ಶತ್ರುಗಳ ನಾಶ, ಭಾಗ್ಯ ವೃದ್ಧಿ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಅವಿವಾಹಿತರಿಗೆ ವಿವಾಹ ಯೋಗ, ದಾನ-ಧರ್ಮದಲ್ಲಿ ಆಸಕ್ತಿ.