ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಶುಕ್ಲ ಪಕ್ಷ, ಆಶ್ಲೇಷ ನಕ್ಷತ್ರ
ಭಾನುವಾರ, ಪೌರ್ಣಮಿ
ರಾಹುಕಾಲ: ಸಂಜೆ 5:01 ರಿಂದ 6:28
ಗುಳಿಕಕಾಲ: ಮಧ್ಯಾಹ್ನ 3:33 ರಿಂದ 5:01
ಯಮಗಂಡಕಾಲ: ಮಧ್ಯಾಹ್ನ 12:37 ರಿಂದ 2:05
Advertisement
ಮೇಷ: ಮಕ್ಕಳ ಅಗತ್ಯಕ್ಕೆ ಖರ್ಚು ಹೆಚ್ಚು, ಪ್ರಭಾವಿ ವ್ಯಕ್ತಿಗಳ ಭೇಟಿ, ವಿರೋಧಿಗಳ ಬಗ್ಗೆ ಎಚ್ಚರ, ಕೆಲಸಲದಲ್ಲಿ ಅಧಿಕ ಒತ್ತಡ, ಅಕಾಲ ಭೋಜನ, ಈ ವಾರ ಎಚ್ಚರಿಕೆಯಲ್ಲಿರುವುದು ಉತ್ತಮ.
Advertisement
ವೃಷಭ: ಪರಸ್ತ್ರೀಯಿಂದ ತೊಂದರೆ, ಅಧಿಕವಾದ ತಿರುಗಾಟ, ಆತ್ಮೀಯರನ್ನು ದ್ವೇಷಿಸುವಿರಿ, ಪುಣ್ಯಕ್ಷೇತ್ರ ದರ್ಶನ, ವಿವಾಹಕ್ಕೆ ಅಡಚಣೆ, ನೆಮ್ಮದಿ ಇಲ್ಲದ ಜೀವನ, ಪಾಪ ಬುದ್ಧಿ.
Advertisement
ಮಿಥುನ: ಹಣಕಾಸು ಮುಗ್ಗಟ್ಟು, ದಾಂಪತ್ಯದಲ್ಲಿ ಕಲಹ, ಸ್ತ್ರೀಯರು ತಾಳ್ಮೆಯಲ್ಲಿರುವುದು ಉತ್ತಮ, ವಿದ್ಯಾಭ್ಯಾಸದಲ್ಲಿ ಮುನ್ನಡೆ, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ, ವಿಪರೀತ ವ್ಯಸನ.
Advertisement
ಕಟಕ: ಪರಿಶ್ರಮಕ್ಕೆ ತಕ್ಕ ಫಲ, ಮುಖ್ಯ ಕೆಲಸಗಳಲ್ಲಿ ಮುನ್ನಡೆ, ಮನಸ್ಸಿಗೆ ಸಂತಸ, ವೃತ್ತಿ ಕ್ಷೇತ್ರದಲ್ಲಿ ಉತ್ತಮ ಸ್ಥಾನಮಾನ, ಗೌರವ ಲಭಿಸುವುದು, ಇತರರ ಮಾತಿಗೆ ಮರುಳಾಗಬೇಡಿ.
ಸಿಂಹ: ವಿಧೇಯತೆಯಿಂದ ಯಶಸ್ಸು, ಹಿರಿಯರ ಮಾತಿಗೆ ಗೌರವ ನೀಡಿ, ಸರಿ ತಪ್ಪುಗಳ ಬಗ್ಗೆ ಯೋಚಿಸಿ, ನಿರ್ಧಾರ ತೆಗೆದುಕೊಳ್ಳುವಾಗ ಎಚ್ಚರ, ಆರೋಗ್ಯ ಸಮಸ್ಯೆ, ವಾಹನ ಖರೀದಿ ಯೋಗ.
ಕನ್ಯಾ: ಯತ್ನ ಕಾರ್ಯದಲ್ಲಿ ಅಡೆತಡೆ, ಭೋಗ ವಸ್ತು ಪ್ರಾಪ್ತಿ, ಮಿತ್ರರಿಂದ ಸಹಾಯ, ಅನಗತ್ಯ ಖರ್ಚು, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ದುಷ್ಟ ಚಿಂತನೆ, ಸಂತಾನ ಪ್ರಾಪ್ತಿ, ಮಾನಸಿಕ ನೆಮ್ಮದಿ.
ತುಲಾ: ಮಾತಿನ ಚಕಮಕಿ, ಕೆಲಸ ಕಾರ್ಯಗಳಲ್ಲಿ ಮುನ್ನಡೆ, ಅತಿಯಾದ ಕೋಪ, ಚಂಚಲ ಬುದ್ಧಿ, ಯಾರಿಗೂ ಹೆದರದೇ ಮುನ್ನಗ್ಗುವಿರಿ, ಮೋಸ-ವಂಚನೆಗಳಲ್ಲಿ ಎಚ್ಚರಿಕೆ.
ವೃಶ್ಚಿಕ: ಸಂದಭಕ್ಕೆ ತಕ್ಕಂತೆ ಮಾತನಾಡುವಿರಿ, ಇತರರನ್ನು ನಿಂದಿಸುವ ಸಾಧ್ಯತೆ, ದಾಂಪತ್ಯದಲ್ಲಿ ಪ್ರೀತಿ, ಉದ್ಯೋಗದಲ್ಲಿ ಬದಲಾವಣೆ, ಪರರಿಗೆ ಸಹಾನುಭೂತಿ ತೋರುವಿರಿ, ಈ ವಾರ ಮಿಶ್ರ ಫಲ.
ಧನಸ್ಸು: ನಿಮ್ಮ ಒಳ್ಳೆಯ ಗುಣದಿಂದ ಒಳಿತು, ವಿಪರೀತ ಖರ್ಚು, ಸುಖ ಭೋಜನ, ವಿದ್ಯಾಭ್ಯಾಸಕ್ಕಾಗಿ ದೂರ ಪ್ರಯಾಣ, ಆರೋಗ್ಯದಲ್ಲಿ ಚೇತರಿಕೆ, ಮಾನಸಿಕ ನೆಮ್ಮದಿ.
ಮಕರ: ವಿರೋಧಿಗಳಿಂದ ತೊಂದರೆ, ಪರಸ್ಥಳ ವಾಸ, ನೀಚ ಜನರ ಸಹವಾಸ, ಅನ್ಯ ಜನರಲ್ಲಿ ದ್ವೇಷ, ತೀರ್ಥಯಾತ್ರೆ ದರ್ಶನ, ಸ್ತ್ರೀಯರಿಗೆ ಲಾಭ, ಚಂಚಲ ಮನಸ್ಸು.
ಕುಂಭ: ಕುಟುಂಬ ಸೌಖ್ಯ, ವಾದ-ವಿವಾದಗಳಿಂದ ದೂರವಿರಿ, ಅಲ್ಪ ಆದಾಯ, ಅಧಿಕವಾದ ಖರ್ಚು, ಕೆಲಸ ಕಾರ್ಯಗಳಲ್ಲಿ ಜಯ, ವಿದ್ಯಾರ್ಥಿಗಳಲ್ಲಿ ಗೊಂದಲ, ದೇವತಾ ಕಾರ್ಯಗಳಲ್ಲಿ ಭಾಗಿ.
ಮೀನ: ಪ್ರಭಾವಿ ವ್ಯಕ್ತಿಗಳ ಭೇಟಿ, ಸಹೋದರರಿಂದ ಸಹಾಯ, ದ್ರವ್ಯ ನಷ್ಟ, ಹಣ ಕಳ್ಳರ ಪಾಲಾಗುವ ಸಾಧ್ಯತೆ ಎಚ್ಚರ, ಇತರರ ಮಾತಿಗೆ ಮರುಳಾಗಬೇಡಿ, ಈ ವಾರ ಮಿಶ್ರ ಫಲ ಯೋಗ.