ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಅಧಿಕ ಜ್ಯೇಷ್ಠ ಮಾಸ,
ಕೃಷ್ಣ ಪಕ್ಷ, ನವಮಿ ತಿಥಿ,
ಶುಕ್ರವಾರ, ಉತ್ತರಭಾದ್ರಪದ ನಕ್ಷತ್ರ
Advertisement
ರಾಹುಕಾಲ: ಬೆಳಗ್ಗೆ 10:47 ರಿಂದ 12:23
ಗುಳಿಕಕಾಲ: ಬೆಳಗ್ಗೆ 7:35 ರಿಂದ 9:11
ಯಮಗಂಡಕಾಲ: ಮಧ್ಯಾಹ್ನ 3:35 ರಿಂದ 5:11
Advertisement
ಮೇಷ: ಧಾರ್ಮಿಕ ಕಾರ್ಯಗಳಿಗೆ ಖರ್ಚು, ಕುಟುಂಬದಲ್ಲಿ ಅನಗತ್ಯ ವಾಗ್ವಾದ, ಮಾನಸಿಕ ಕಿರಿಕಿರಿ ನಿದ್ರಾಭಂಗ, ಸಾಲ ಬಾಧೆ.
Advertisement
ವೃಷಭ: ಅನಗತ್ಯ ಮಾತುಗಳನ್ನಾಡುವಿರಿ, ಆರ್ಥಿಕ ಪರಿಸ್ಥಿತಿ ಸುಧಾರಣೆ, ಬಂಧುಗಳಿಂದ ಕಿರಿಕಿರಿ, ದಾಂಪತ್ಯದಲ್ಲಿ ಕಲಹ.
Advertisement
ಮಿಥುನ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಕೆಲಸದಲ್ಲಿ ಒತ್ತಡ, ಹೆಣ್ಣು ಮಕ್ಕಳಿಂದ ಆರ್ಥಿಕ ಸಮಸ್ಯೆ, ವ್ಯಾಪಾರ-ವ್ಯವಹಾರದಲ್ಲಿ ನಷ್ಟ.
ಕಟಕ: ದೂರ ಪ್ರಯಾಣ, ಮಿತ್ರರೊಂದಿಗೆ ಮನಃಸ್ತಾಪ, ಅನಗತ್ಯ ಕಲಹ, ತಂದೆ-ಮಕ್ಕಳಲ್ಲಿ ವೈಮನಸ್ಸು.
ಸಿಂಹ: ಸಹೋದ್ಯೋಗಿಗಳಿಂದ ಕಿರಿಕಿರಿ, ಅಧಿಕಾರಿಗಳಿಂದ ಮಾನಸಿಕ ಹಿಂಸೆ, ಉದ್ಯೋಗದಲ್ಲಿ ಒತ್ತಡ, ಸ್ತ್ರೀಯರಿಂದ ಆಕಸ್ಮಿಕ ನಷ್ಟ, ಮಿತ್ರರಿಂದ ಆರ್ಥಿಕ ಸಹಾಯ, ಉದ್ಯೋಗದ ಭರವಸೆ ಲಭಿಸುವುದು.
ಕನ್ಯಾ: ಮಂಗಳ ಕಾರ್ಯಗಳಿಗೆ ಸುಸಮಯ, ಸ್ನೇಹಿತರ ಭೇಟಿ, ದಾಯಾದಿಗಳ ಕಲಹ, ತಂದೆಗೆ ನೋವು.
ತುಲಾ: ಉದ್ಯೋಗ ಸ್ಥಳದಲ್ಲಿ ಶತ್ರುಕಾಟ, ಉದ್ಯೋಗ ಕಳೆದುಕೊಳ್ಳುವ ಪರಿಸ್ಥಿತಿ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಆರ್ಥಿಕ ಸಂಕಷ್ಟ, ಗ್ಯಾಸ್ಟ್ರಿಕ್ ಸಮಸ್ಯೆ.
ವೃಶ್ಚಿಕ: ದಾಂಪತ್ಯದಲ್ಲಿ ಕಲಹ, ವಿಚ್ಛೇದನ ಪಡೆಯಲು ಚಿಂತೆ, ಮಕ್ಕಳಿಂದ ಕಿರಿಕಿರಿ, ಸಂಗಾತಿಯ ತಂದೆಯಿಂದ ಅವಮಾನ, ಹಣಕಾಸು ವಿಚಾರವಾಗಿ ಸಹಕಾರ.
ಧನಸ್ಸು: ಸ್ಥಿರಾಸ್ತಿಯಿಂದ ಸಂಕಷ್ಟ, ಪಾಲುದಾರಿಕೆ ವ್ಯವಹಾರದಲ್ಲಿ ಜಯ, ಆರೋಗ್ಯದಲ್ಲಿ ಸಮಸ್ಯೆ, ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ.
ಮಕರ: ಕಂಕಣ ಭಾಗ್ಯ ಒಲಿಯುವುದು, ಆಸೆ-ಆಕಾಂಕ್ಷೆಗಳಿಂದ ಹಿನ್ನಡೆ, ಸ್ವಯಂಕೃತ್ಯಗಳಿಂದ ಸಾಲ ಬಾಧೆ, ಮಕ್ಕಳು ದಾರಿ ತಪ್ಪುವ ಸಾಧ್ಯತೆ.
ಕುಂಭ: ಸಾಲಗಾರರೊಂದಿಗೆ ವಾಗ್ವಾದ, ಶತ್ರುಗಳೊಂದಿಗೆ ಕಲಹ, ಪ್ರೇಮ ವಿಚಾರದಲ್ಲಿ ಸಂಕಷ್ಟ, ಮಾನಸಿಕ ಉದ್ವೇಗ, ಆತುರ ನಿರ್ಧಾರಗಳಿಂದ ತೊಂದರೆ.
ಮೀನ: ನೆರೆಹೊರೆಯವರೊಂದಿಗೆ ಕಿರಿಕಿರಿ, ಆಧ್ಯಾತ್ಮಿಕ ಕ್ಷೇತ್ರದಲ್ಲಿ ಉತ್ತಮ, ಗುರುಗಳಿಂದ ಪ್ರಶಂಸೆ, ದಾಯಾದಿಗಳಿಂದ ಸ್ಥಿರಾಸ್ತಿ ಕಲಹ.