ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಮಾರ್ಗಶಿರ ಮಾಸ,
ಕೃಷ್ಣಪಕ್ಷ, ಚತುರ್ಥಿ ಉಪರಿ ಪಂಚಮಿ ತಿಥಿ,
ಗುರುವಾರ, ಪುಷ್ಯ ನಕ್ಷತ್ರ
ಶುಭ ಘಳಿಗೆ: ಮಧ್ಯಾಹ್ನ 12:00 ರಿಂದ 12:05
ಅಶುಭ ಘಳಿಗೆ: ಬೆಳಗ್ಗೆ 10:18 ರಿಂದ 11:06
Advertisement
ರಾಹುಕಾಲ: ಮಧ್ಯಾಹ್ನ 1:40 ರಿಂದ 3:06
ಗುಳಿಕಕಾಲ: ಬೆಳಗ್ಗೆ 9:22 ರಿಂದ 10:42
ಯಮಗಂಡಕಾಲ: ಬೆಳಗ್ಗೆ 6:31 ರಿಂದ 7:56
Advertisement
ಮೇಷ: ಆಧ್ಯಾತ್ಮಿಕ ಚಿಂತನೆ, ವಾಹನ ಅಪಘಾತ, ಉದ್ಯೋಗದಲ್ಲಿ ಕಿರಿಕಿರಿ, ಆಕಸ್ಮಿಕ ದುರ್ಘಟನೆ.
Advertisement
ವೃಷಭ: ಸ್ವಯಂಕೃತ್ಯಗಳಿಂದ ತೊಂದರೆ, ಸ್ನೇಹಿತರೊಂದಿಗೆ ಮನಃಸ್ತಾಪ, ದಾಂಪತ್ಯದಲ್ಲಿ ವಿರಸ, ಭೂ ವ್ಯವಹಾರದಲ್ಲಿ ಗೊಂದಲ.
Advertisement
ಮಿಥುನ: ಹಣಕಾಸು ತೊಂದರೆ, ಸೇವಕರಿಂದ ಕಿರಿಕಿರಿ, ಕಾರ್ಮಿಕರಿಂದ ಧನ ನಷ್ಟ, ಕೌಟುಂಬಿಕ ಕಲಹ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ.
ಕಟಕ: ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ, ಸಂಗಾತಿಯಿಂದ ಅಗೌರವ, ಸ್ನೇಹಿತರಿಂದ ಅವಮಾನ, ಆತಂಕದ ವಾತಾವರಣ, ತಂದೆಯಿಂದ ಹಿತನುಡಿ.
ಸಿಂಹ: ವಿಕೃತ ಮನಃಸ್ಥಿತಿ, ಧನ ನಷ್ಟ, ಮನಸ್ಸಿಗೆ ಬೇಸರ, ಗ್ಯಾಸ್ಟ್ರಿಕ್ ಸಮಸ್ಯೆ, ಉಸಿರಾಟ ತೊಂದರೆ, ಸ್ನೇಹಿತರಿಂದ ಮಾನಸಿಕ ನೆಮ್ಮದಿ.
ಕನ್ಯಾ: ಬಂಧುಗಳಿಂದ ಕಿರಿಕಿರಿ, ಗೌರವಕ್ಕೆ ಧಕ್ಕೆ, ದುಶ್ಚಟಗಳಿಂದ ತೊಂದರೆ, ಸ್ಥಿರಾಸ್ತಿಯಿಂದ ಲಾಭ, ಹಿರಿಯ ಸಹೋದರನಿಂದ ಅನುಕೂಲ.
ತುಲಾ: ಉದ್ಯೋಗ ಪ್ರಾಪ್ತಿ, ಆರ್ಥಿಕ ಸಂಕಷ್ಟಗಳು, ಸ್ಥಿರಾಸ್ತಿ ತಗಾದೆ, ವಾಹನದಿಂದ ಕಿರಿಕಿರಿ, ಅನಗತ್ಯ ವಾದ-ವಿವಾದ.
ವೃಶ್ಚಿಕ: ಸ್ವಯಂಕೃತ್ಯಗಳಿಂದ ಅವಕಾಶ ಕೈ ತಪ್ಪುವುದು, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಮಾನಸಿಕ ವೇದನೆ, ಸ್ಥಿರಾಸ್ತಿ ವಿಚಾರದಲ್ಲಿ ಗೊಂದಲ.
ಧನಸ್ಸು: ಹಣಕಾಸು ವಿಚಾರವಾಗಿ ತೊಂದರೆ, ಆಕಸ್ಮಿಕ ದುರ್ಘಟನೆ, ವಾಹನ ಅಪಘಾತ ಸಾಧ್ಯತೆ, ಬಂಧುಗಳು ದೂರವಾಗುವರು.
ಮಕರ: ಸ್ನೇಹಿತರಿಂದ ಮೋಸ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ದಾನ ಧರ್ಮಕ್ಕಾಗಿ ಖರ್ಚು, ಸಲ್ಲದ ಅಪವಾದದಿಂದ ವಿವಾಹಕ್ಕೆ ಕಂಟಕ.
ಕುಂಭ: ಉದ್ಯೋಗ ಸ್ಥಳದಲ್ಲಿ ಶತ್ರುಕಾಟ, ಸಾಲ ಬಾಧೆ, ರೋಗ ಬಾಧೆ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ.
ಮೀನ: ತಂದೆಯಿಂದ ಅಗೌರವ, ಉದ್ಯೋಗದಲ್ಲಿ ಬಡ್ತಿ, ಗೌರವ ಸನ್ಮಾನ ಪ್ರಾಪ್ತಿ, ಮಕ್ಕಳು ಮಾಡಿದ ತಪ್ಪಿನಿಂದ ತೊಂದರೆ, ಅನಗತ್ಯ ವಿಪರೀತ ಖರ್ಚು.