ಪಂಚಾಂಗ
ಶ್ರೀ ವಿಕಾರಿನಾಮ ಸಂವತ್ಸರ
ಉತ್ತರಾಯಣ, ಶಿಶಿರಋತು
ಫಾಲ್ಗುಣ ಮಾಸ, ಶುಕ್ಲಪಕ್ಷ
ದಶಮಿ ಗುರುವಾರ ಆರಿದ್ರ ನಕ್ಷತ್ರ
11.26 ನಂತರ ಪುನರ್ವಸು ನಕ್ಷತ್ರ
Advertisement
ರಾಹುಕಾಲ: 2.05 ರಿಂದ 3.35
ಗುಳಿಕಕಾಲ: 9.36 ರಿಂದ 11.06
ಯಮಗಂಡಕಾಲ: 6.37 ರಿಂದ 8.06
Advertisement
ಮೇಷ: ದೈಹಿಕ ವಿಷಯಾಸಕ್ತಿಗಳು ಕಾಡುವುದು, ಕಲ್ಪನೆಗಳಲ್ಲಿ ವಿಹರಿಸುವಿರಿ, ಪಾಲುದಾರಿಕೆಯಲ್ಲಿ ನಷ್ಟ, ಸಂಗಾತಿಯಿಂದ ಅಧಿಕ ಖರ್ಚು, ತಂದೆ ಶತ್ರುವಾಗುವರು, ಪಿತ್ರಾರ್ಜಿತ ಆಸ್ತಿ ನಷ್ಟ, ಆಹಾರ ವ್ಯತ್ಯಾಸದಿಂದ ತೊಂದರೆ.
Advertisement
ವೃಷಭ: ಶುಗರ್, ಹೃದಯ ಸಂಬಂಧಿತ ತೊಂದರೆ, ಸಾಲಗಾಲರೊಂದಿಗೆ, ನೀಚರೊಂದಿಗೆ ಕಲಹ, ನೆರೆಹೊರೆ, ಬಂಧುಗಳು, ಸಹೋದರಿಯಿಂದ ಲಾಭ, ಸ್ವಂತ ಉದ್ಯಮ, ವ್ಯಾಪಾರ, ವ್ಯವಹಾರದಲ್ಲಿ ಅನುಕೂಲ.
Advertisement
ಮಿಥುನ: ಸಂಗಾತಿಯಿಂದ, ಪಾಲುದಾರಿಕೆಯಿಂದ ಧನಾಗಮನ, ಸ್ಥಿರಾಸ್ತಿ ವಿಷಯವಾಗಿ ವಾಗ್ವಾದ ಸಮಸ್ಯೆ, ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ಉದ್ಯೋಗಕ್ಕಾಗಿ, ಅಲಂಕಾರ ವಸ್ತುಗಳಿಗಾಗಿ ಖರ್ಚು.
ಕಟಕ: ಸ್ಥಿರಾಸ್ತಿ ಖರೀದಿ, ಗೃಹನಿರ್ಮಾಣ ಬಗ್ಗೆ ಅಲೋಚನೆ, ಸ್ವಯಂಕೃತ ಅಪರಾಧಗಳಿಂದ ಶತ್ರುತ್ವ, ಶೀತ, ಕಫ, ಮಹಿಳಾ ಮಿತ್ರರಿಂದ ನಷ್ಟ-ಸಂಕಷ್ಟ.
ಸಿಂಹ: ಮಕ್ಕಳಿಗಾಗಿ ಅಲಂಕಾರಿಕ ವಸ್ತುಗಳಿಗೆ ಖರ್ಚು, ಸ್ಥಳ ಹಾಗೂ ಉದ್ಯೋಗ ಬದಲಾವಣೆ ಆಲೋಚನೆ, ಅಪಚಾರ, ನಷ್ಟ, ನಿರಾಸೆಗಳು ಉಂಟಾಗುವುದು.
ಕನ್ಯಾ: ಭೂಮಿ, ಮನೆ, ವಾಹನ ಕೊಳ್ಳುವ ಆಲೋಚನೆ, ಪಾಲುದಾರಿಕೆಯಲ್ಲಿ ಆರ್ಥಿಕ ಸಮಸ್ಯೆ, ತಾಯಿಯಿಂದ, ಮಹಿಳಾ ಮಿತ್ರರಿಂದ ಅನುಕೂಲ, ಸನ್ಮಾನ, ಪ್ರಶಂಸೆ, ಹೊಗಳಿಕೆಗೆ ಪಾತ್ರರಾಗುವಿರಿ.
ತುಲಾ: ಸ್ವಂತ ಉದ್ಯಮ ವ್ಯವಹಾರಗಳಲ್ಲಿ ನಷ್ಟ, ಅನಾರೋಗ್ಯದಿಂದ ಆಸ್ಪತ್ರೆ ಅಲೆದಾಟ, ಅಜೀರ್ಣ, ಉದ್ಯೋಗದಲ್ಲಿ ಆಕಸ್ಮಿಕ ಪ್ರಯಾಣ, ಶತ್ರುಗಳಿಂದ ಸವಾಲು
ವೃಶ್ಚಿಕ: ಐಷರಾಮಿ ಜೀವನ, ಮೃಷ್ಟಾನ್ನ ಭೋಜನ, ಮನರಂಜನೆ, ಪಾಲುದಾರಿಕೆಯಲ್ಲಿ ಲಾಭ, ಸಂಗಾತಿಯಿಂದ ಅನುಕೂಲ, ರಸಿಕತನದ ಮಾತುಗಳನ್ನಾಡಿವಿರಿ, ಪಿತ್ರಾರ್ಜಿತ ಕಲಹಗಳಿಗೆ ಮುಕ್ತಿ
ಧನಸ್ಸು: ಚರ್ಮ ಸಮಸ್ಯೆ, ಕೆಮ್ಮ, ಶೀತ, ಕಾಯಿಲೆಗಳಿಂದ ನರಳಾಟ, ಶತ್ರುಗಳು ಹಿತೈಷಿಗಳಾಗುವ ಸಂದರ್ಭ, ಅತಿಯಾದ ಮೋಜುಮಸ್ತಿಯಿಂದ ಎಡವಟ್ಟು
ಮಕರ: ಸಂತಾನ ದೋಷಗಳು ಕಾಡುವುದು, ಗರ್ಭಿಣಿಯರು ಎಚ್ಚರವಹಿಸಬೇಕು, ಸ್ಥಳ ಹಾಗೂ ಉದ್ಯೋಗ ಬದಲಾವಣೆಯಿಂದ, ಉತ್ತಮ ಅವಕಾಶಗಳು. ಮೋಜು ಮಸ್ತಿ, ಜೂಜು ದುಷ್ಚಟಗಳಿಂದ ನಷ್ಟ
ಕುಂಭ: ಆರ್ಥಿಕ ಸಂಕಷ್ಟ, ಸ್ಥಿರಾಸ್ಥಿಗಾಗಿ ಕೋರ್ಟ್ ಮೆಟ್ಟಿಲು, ವಾಹನಗಳಿಂದ ಪೆಟ್ಟು, ತಾಯಿಯಿಂದ ಬೈಗುಳ, ಮಿತ್ರರಿಂದಲೇ ನಷ್ಟ, ನಿರಾಸೆ, ಅಪವಾದ
ಮೀನ: ಮಕ್ಕಳಿಗೆ ಅವಘಡ, ದೂರ ಪ್ರದೇಶದಲ್ಲಿ ಉದ್ಯೋಗ, ದಾಂಪತ್ಯ, ಉದ್ಯೋಗ ತೊಂದರೆಗಳಿಂದ ಕೋರ್ಟ್ ಅಲೆದಾಟ, ದೂರವಾದ ನೆರೆಹೊರೆಯವರು ಆತ್ಮೀಯತೆ ತೋರುವರು