ಪಂಚಾಂಗ:
ಶ್ರೀವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ಚತುರ್ಥಿ ತಿಥಿ,
ಭಾನುವಾರ, ಉತ್ತರ ನಕ್ಷತ್ರ
ರಾಹುಕಾಲ: ಸಂಜೆ 5:14 ರಿಂದ 6:48
ಗುಳಿಕಕಾಲ: ಮಧ್ಯಾಹ್ನ 3:39 ರಿಂದ 5:14
ಯಮಗಂಡಕಾಲ: ಮಧ್ಯಾಹ್ನ 12:29 ರಿಂದ 2:04
Advertisement
ಮೇಷ: ಪ್ರತಿಯೊಂದು ವಿಚಾರದಲ್ಲಿ ಎಚ್ಚರ, ರಾಜ ಸನ್ಮಾನ, ಶತ್ರುಗಳ ಬಾಧೆ, ಮಾತಿನ ಚಕಮಕಿ, ಲ್ಯಾಂಡ್ ಡೆವಲಪರ್ಸ್‍ಗೆ ಅಲ್ಪ ಲಾಭ, ಕಾರ್ಯ ಕ್ಷೇತ್ರದಲ್ಲಿ ಒತ್ತಡ.
Advertisement
ವೃಷಭ: ನೀವಾಡುವ ಮಾತಿಗೆ ಪಶ್ಚಾತ್ತಾಪ, ವಿದ್ಯಾರ್ಥಿಗಳಲ್ಲಿ ಪ್ರಗತಿ, ನಂಬಿದ ಜನರಿಂದ ಮೋಸ, ಆರೋಗ್ಯದಲ್ಲಿ ವ್ಯತ್ಯಾಸ, ತೀರ್ಥಯಾತ್ರೆ ದರ್ಶನ, ವಾಹನ ರಿಪೇರಿಯಿಂದ ಸಮಸ್ಯೆ.
Advertisement
ಮಿಥುನ: ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಮಾನಸಿಕ ನೆಮ್ಮದಿ, ವಿವಿಧ ಮೂಲಗಳಿಂದ ಧನಾಗಮನ, ಮನೆಯಲ್ಲಿ ಸಂತಸ, ಅನ್ಯ ಜನರಲ್ಲಿ ವೈಮನಸ್ಸು.
Advertisement
ಕಟಕ: ಗುರು ಹಿರಿಯರಲ್ಲಿ ಭಕ್ತಿ, ವಿದ್ಯೆಯಲ್ಲಿ ಆಸಕ್ತಿ, ನೀಚ ಜನರ ಸಹವಾಸದಿಂದ ತೊಂದರೆ, ಮಹಿಳೆಯರಿಗೆ ಶುಭ, ಎಲ್ಲಿ ಹೋದರೂ ಅಶಾಂತಿ, ದೈವಿಕ ಚಿಂತನೆ, ವಸ್ತ್ರ ಖರೀದಿ ಸಾಧ್ಯತೆ.
ಸಿಂಹ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಸ್ಥಳ ಬದಲಾವಣೆ, ಉತ್ತಮ ಆದಾಯ, ಮನಸ್ಸಿಗೆ ಬೇಸರ, ವಿರೋಧಿಗಳಿಂದ ಕಿರುಕುಳ, ಅಕಾಲ ಭೋಜನ, ಕೆಲಸದಲ್ಲಿ ಒತ್ತಡ ಹೆಚ್ಚು.
ಕನ್ಯಾ: ದಿನಸಿ ವ್ಯಾಪಾರಿಗಳಿಗೆ ಲಾಭ, ಹಿತ ಶತ್ರುಗಳ ಕಾಟ, ಮಹಿಳೆಯರಿಗೆ ಅನುಕೂಲ, ಕೃಷಿಕರಿಗೆ ಲಾಭ, ಕುಟುಂಬ ಸೌಖ್ಯ, ಅನಿರೀಕ್ಷಿತ ಧನಾಗಮನ, ತೀರ್ಥಕ್ಷೇತ್ರ ದರ್ಶನ.
ತುಲಾ: ವೈವಾಹಿಕ ಜೀವನದಲ್ಲಿ ತೃಪ್ತಿ, ದಾಂಪತ್ಯದಲ್ಲಿ ಅನ್ಯೋನ್ಯತೆ, ಅವಿವಾಹಿತರಿಗೆ ವಿವಾಹ ಯೋಗ, ವಿಪರೀತ ಖರ್ಚು, ಮನಸ್ಸಿನಲ್ಲಿ ಕೆಟ್ಟಾಲೋಚನೆ, ಇಲ್ಲ ಸಲ್ಲದ ಅಪವಾದ, ಉದ್ಯೋಗದಲ್ಲಿ ತೊಂದರೆ, ಶತ್ರುಗಳ ನಾಶ.
ವೃಶ್ಚಿಕ: ನೀವಾಡುವ ಮಾತಿನಿಂದ ಕಲಹ, ಪರಸ್ಥಳ ವಾಸ, ವಾಹನ ಅಪಘಾತ ಸಾಧ್ಯತೆ, ವ್ಯವಹಾರದಲ್ಲಿ ಎಚ್ಚರ, ಮೋಸ ಹೋಗುವ ಸಾಧ್ಯತೆ, ದಾಂಪತ್ಯದಲ್ಲಿ ಪ್ರೀತಿ, ಮಾನಸಿಕ ನೆಮ್ಮದಿ.
ಧನಸ್ಸು: ಪ್ರಭಾವಿ ವ್ಯಕ್ತಿಗಳ ಭೇಟಿ, ಬಡ ವಿದ್ಯಾರ್ಥಿಗಳಿಗೆ ನೆರವು, ಹಣ ಸಹಾಯ ಮಾಡುವಿರಿ, ಬೆಲೆ ಬಾಳುವ ವಸ್ತುಗಳ ಖರೀದಿ, ಮಂಗಳ ಕಾರ್ಯಗಳಲ್ಲಿ ಭಾಗಿ, ಉತ್ತಮ ಬುದ್ಧಿ ಶಕ್ತಿ.
ಮಕರ: ಹೆತ್ತವರಲ್ಲಿ ಕಲಹ, ತಾಳ್ಮೆ ಅತ್ಯಗತ್ಯ, ಪರಸ್ತ್ರೀಯಿಂದ ತೊಂದರೆ, ದಂಡ ಕಟ್ಟುವ ಪರಿಸ್ಥಿತಿ, ಪಿತ್ರಾರ್ಜಿತ ಆಸ್ತಿ ಗಳಿಕೆ, ಸರ್ಕಾರಿ ಕೆಲಸಗಳಲ್ಲಿ ವಿಘ್ನ, ಅಧಿಕವಾದ ತಿರುಗಾಟ.
ಕುಂಭ: ಪಾಲುದಾರಿಕೆಯ ಮಾತುಕತೆ, ಮಾನಸಿಕ ಒತ್ತಡ, ಮಿತ್ರರಿಂದ ಸಹಾಯ, ಕಾರ್ಯದಲ್ಲಿ ವಿಳಂಬ, ಅನ್ಯ ಜನರಲ್ಲಿ ವೈಮನಸ್ಸು, ಸಾಲ ಬಾಧೆ, ಸಹೋದರರಿಂದ ಬೋಧನೆ.
ಮೀನ: ಥಳುಕಿನ ಮಾತಿಗೆ ಮರುಳಾಗಬೇಡಿ, ಹಿರಿಯರ ಭಾವನೆಗಳಿಗೆ ಗೌರವ ನೀಡಿ, ಅನಾವಶ್ಯಕ ದ್ವೇಷ ಸಾಧನೆ ಒಳ್ಳೆಯದಲ್ಲ, ದಾಂಪತ್ಯದಲ್ಲಿ ಪ್ರೀತಿ ಸಮಾಗಮ, ಸುಖ ಭೋಜನ ಪ್ರಾಪ್ತಿ.