ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಪುಷ್ಯ ಮಾಸ,
ಕೃಷ್ಣ ಪಕ್ಷ, ತೃತೀಯಾ ತಿಥಿ,
ಗುರುವಾರ, ಆಶ್ಲೇಷ ನಕ್ಷತ್ರ
ಶುಭ ಘಳಿಗೆ: ಮಧ್ಯಾಹ್ನ 12:13 ರಿಂದ 1:00
ಅಶುಭ ಘಳಿಗೆ: ಬೆಳಗ್ಗೆ 8:14 ರಿಂದ 9:12
ರಾಹುಕಾಲ: ಮಧ್ಯಾಹ್ನ 1:54 ರಿಂದ 3:20
ಗುಳಿಕಕಾಲ: ಬೆಳಗ್ಗೆ 9:36 ರಿಂದ 11:02
ಯಮಗಂಡಕಾಲ: ಬೆಳಗ್ಗೆ 6:45 ರಿಂದ 8:10
Advertisement
ಮೇಷ: ಸ್ಥಿರಾಸ್ತಿ-ವಾಹನದ ಮೇಲೆ ಸಾಲ ಕೇಳುವಿರಿ, ಸೊಸೆಯಿಂದ ಮಾನಸಿಕ ನೋವು, ಚರ್ಮ ತುರಿಕೆ, ಬುದ್ಧಿ ಮಂದತ್ವ, ನರ ದೌರ್ಬಲ್ಯ, ಅಧಿಕ ತಲೆನೋವು.
Advertisement
ವೃಷಭ: ಸಹೋದರಿಯಿಂದ ಸಹಾಯ ಕೇಳುವಿರಿ, ಬಂಧುಗಳಿಂದ ಸಹಕಾರ ಬೇಡುವಿರಿ, ಆರ್ಥಿಕ ಸಹಾಯ ಪ್ರಾಪ್ತಿ, ಪತ್ರ ವ್ಯವಹಾರದಿಂದ ಲಾಭ, ಪ್ರಯಾಣದಿಂದ ಅನುಕೂಲ, ಸಂತಾನ ದೋಷಗಳು ಬಗೆಹರಿಯವುದು.
Advertisement
ಮಿಥುನ: ಉದ್ಯಮ ವ್ಯಾಪಾರದಲ್ಲಿ ಲಾಭ, ವ್ಯವಹಾರಗಳಲ್ಲಿ ಅನುಕೂಲ, ಸ್ಥಿರಾಸ್ತಿಯಿಂದ ಹಣಕಾಸು ಪ್ರಾಪ್ತಿ, ನೀವಾಡುವ ಮಾತಿನಿಂದ ಅನುಕೂಲ, ಕೆಲಸ ಕಾರ್ಯಗಳಲ್ಲಿ ಜಯ.
Advertisement
ಕಟಕ: ಸ್ವಯಂಕೃತ ಅಪರಾಧಗಳಿಂದ ನಷ್ಟ, ಮಕ್ಕಳಿಂದ ನೋವು, ಆರ್ಥಿಕ ಸಂಕಷ್ಟ, ಉದ್ಯೋಗದಲ್ಲಿ ಒತ್ತಡ, ನಿದ್ರಾಭಂಗ, ಅನ್ಯರ ಮಾತಿನಿಂದ ಕಲಹ.
ಸಿಂಹ: ಆತ್ಮೀಯರಿಗಾಗಿ ಅಧಿಕ ಖರ್ಚು, ಕುಟುಂಬಸ್ಥರಿಂದ ಆರ್ಥಿಕ ಸಹಾಯ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅನುಕೂಲ.
ಕನ್ಯಾ: ಐಟಿ ಕ್ಷೇತ್ರದವರಿಗೆ ಅನುಕೂಲ, ಉದ್ಯೋಗಸ್ಥರಿಗೆ ಲಾಭ, ಕೆಲಸ ಕಾರ್ಯಗಳಲ್ಲಿ ಜಯ, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ.
ತುಲಾ: ಉದ್ಯೋಗ ನಿಮಿತ್ತ ಪ್ರಯಾಣ, ಉತ್ತಮ ಗೌರವ ಪ್ರಾಪ್ತಿ, ಅದೃಷ್ಟ ಒಲಿಯುವುದು, ದೇವತಾ ಕಾರ್ಯಗಳಿಗೆ ಖರ್ಚು, ವಿದ್ಯಾಭ್ಯಾಸಕ್ಕಾಗಿ ವೆಚ್ಚ.
ವೃಶ್ಚಿಕ: ತಂದೆಯಿಂದ ಆಕಸ್ಮಿಕ ದುರ್ಘಟನೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅಪಘಾತವಾಗುವ ಸಾಧ್ಯತೆ, ತೆರಿಗೆ ಇಲಾಖೆಯಿಂದ ತೊಂದರೆ.
ಧನಸ್ಸು: ಆಕಸ್ಮಿಕ ಸ್ನೇಹಿತರೊಂದಿಗೆ ಜಗಳ, ಉದ್ಯೋಗ ಸ್ಥಳದಲ್ಲಿ ತೊಂದರೆ, ಮಾಡಿದ ತಪ್ಪಿಗೆ ಶಿಕ್ಷೆ ಪ್ರಾಪ್ತಿ, ಅಹಂಭಾವದಿಂದ ವೈಮನಸ್ಸು, ದಾಂಪತ್ಯದಲ್ಲಿ ಜಗಳ.
ಮಕರ: ಸಾಲ ಬಾಧೆ, ಉಷ್ಣ ಬಾಧೆ, ನರ ದೌರ್ಬಲ್ಯ, ಚರ್ಮ ಸಮಸ್ಯೆ, ತಂದೆಯಿಂದ ಕಿರಿಕಿರಿ, ಸ್ನೇಹಿತರು ದೂರವಾಗುವರು.
ಕುಂಭ: ಋಣ-ರೋಗ ಬಾಧೆ, ಕೆಳ ಹಂತದ ಅಧಿಕಾರಿಗಳಿಂದ ಸಮಸ್ಯೆ, ಸೇವಕರು-ಬಾಡಿಗೆದಾರರಿಂದ ಅವಮಾನ, ಉದ್ಯೋಗ ಪ್ರಾಪ್ತಿ, ಆಕಸ್ಮಿಕ ಸಾಲ ಲಭಿಸುವುದು.
ಮೀನ: ಮಕ್ಕಳಿಂದ ಅನುಕೂಲ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ಉನ್ನತ ವಿದ್ಯಾಭ್ಯಾಸಕ್ಕೆ ಅವಕಾಶ, ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ.