ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಕೃಷ್ಣಪಕ್ಷ, ಚತುರ್ದಶಿ ತಿಥಿ,
ಭಾನುವಾರ, ಕೃತ್ತಿಕಾ ನಕ್ಷತ್ರ
ರಾಹುಕಾಲ: ಸಂಜೆ 5:09 ರಿಂದ 6:45
ಗುಳಿಕಕಾಲ: ಮಧ್ಯಾಹ್ನ 3:33 ರಿಂದ 5:09
ಯಮಗಂಡಕಾಲ: ಮಧ್ಯಾಹ್ನ 12:21 ರಿಂದ 1:57
Advertisement
ಮೇಷ: ಉದ್ಯೋಗದಲ್ಲಿ ಅಭಿವೃದ್ಧಿ, ಆರೋಗ್ಯದಲ್ಲಿ ಚೇತರಿಕೆ, ಬಂಧು-ಮಿತ್ರರಲ್ಲಿ ಸ್ನೇಹ ವೃದ್ಧಿ, ಅನಿರೀಕ್ಷಿತ ದ್ರವ್ಯ ಲಾಭ, ಕಾರ್ಯ ಬದಲಾವಣೆ, ಸ್ಥಿರಾಸ್ತಿ ಮಾರಾಟ ಮಾಡುವ ಸಾಧ್ಯತೆ.
Advertisement
ವೃಷಭ: ಪ್ರೀತಿ ಸಮಾಗಮ, ಸ್ತ್ರೀಯರಿಗೆ ಅನುಕೂಲ, ಪ್ರಿಯ ಜನರ ಭೇಟಿ, ಹಿತ ಶತ್ರುಗಳ ಬಾಧೆ, ಯಾರನ್ನೂ ಹೆಚ್ಚು ನಂಬಬೇಡಿ, ಅಧಿಕವಾದ ಖರ್ಚು, ವಾಹನದಿಂದ ತೊಂದರೆ.
Advertisement
ಮಿಥುನ: ಯತ್ನ ಕಾರ್ಯದಲ್ಲಿ ಸ್ವಲ್ಪ ವಿಳಂಬ, ಬಾಕಿ ಹಣ ವಸೂಲಿ, ಸ್ತ್ರೀ ಸಮಾನ ವ್ಯಕ್ತಿಯಿಂದ ಶುಭ, ವಾಹನ ಖರೀದಿ ಯೋಗ, ಒಳ್ಳೆಯ ಅನುಕೂಲ ಪ್ರಾಪ್ತಿ, ಸಂತಾನ ಯೋಗ, ಅಧಿಕವಾದ ಖರ್ಚು, ಮನಃಕ್ಲೇಷ.
Advertisement
ಕಟಕ: ಸ್ನೇಹಿತರಿಂದ ಸಹಾಯ, ಮನೆಯಲ್ಲಿ ನೆಮ್ಮದಿ, ವ್ಯಾಪಾರದಲ್ಲಿ ಅಲ್ಪ ಲಾಭ, ಪ್ರೀತಿ ಪಾತ್ರರೊಂದಿಗೆ ಬಾಂಧವ್ಯ ವೃದ್ಧಿ, ಅರ್ಥಿಕ ಪರಿಸ್ಥಿತಿ ಚೇತರಿಕೆ, ಶತ್ರುಗಳ ನಾಶ.
ಸಿಂಹ: ಕೆಲಸ ಕಾರ್ಯಗಳಲ್ಲಿ ಮಂದಗತಿ, ಆಕಸ್ಮಿಕ ಧನ ಲಾಭ, ಸ್ಥಿರಾಸ್ತಿ ಖರೀದಿ ಯೋಗ, ಮಾರಾಟ ಪ್ರತಿನಿಧಿಗಳಿಗೆ ಉತ್ತಮ ಆದಾಯ, ಹೆತ್ತವರಲ್ಲಿ ದ್ವೇಷ, ಅಕಾಲ ಭೋಜನ.
ಕನ್ಯಾ: ಪರಿಶ್ರಮಕ್ಕೆ ಪ್ರತಿಫಲ ಪ್ರಾಪ್ತಿ, ಮಾನಸಿಕ ನೆಮ್ಮದಿ, ಉದ್ಯೋಗದಲ್ಲಿ ಒತ್ತಡ, ಸಹೋದ್ಯೋಗಿಗಳಿಂದ ತೊಂದರೆ, ಪಾಲುದಾರಿಕೆಯ ಮಾತುಕತೆ, ರಾಜಕೀಯ ವಿಚಾರಗಳಲ್ಲಿ ಗೌಪ್ಯ.
ತುಲಾ: ಪ್ರಚಾರ ಕಾರ್ಯಗಳಲ್ಲಿ ಭಾಗಿ, ವೈಯುಕ್ತಿಕ ವಿಚಾರಗಳ ಬಗ್ಗೆ ಗಮನವಿರಲಿ, ಬುದ್ಧಿವಂತಿಕೆಯಿಂದ ಕಾರ್ಯ ಪ್ರಗತಿ, ಕೆಲಸ ಕಾರ್ಯಗಳಲ್ಲಿ ಸಾಧನೆ, ದೇವಾನುಗ್ರಹಕ್ಕೆ ಪಾತ್ರರಾಗುವಿರಿ, ಈ ವಾರ ಶುಭ ಫಲ ಪ್ರಾಪ್ತಿ.
ವೃಶ್ಚಿಕ: ಕೈಗೊಂಡ ಕಾರ್ಯಗಳಲ್ಲಿ ಜಯ, ಪಿತ್ರಾರ್ಜಿತ ಆಸ್ತಿ ಲಭ್ಯ, ದಾಂಪತ್ಯದಲ್ಲಿ ಪ್ರೀತಿ, ಕೃಷಿಕರಿಗೆ ಲಾಭ, ಶೀಘ್ರದಲ್ಲಿ ಸಂತಸದ ಸುದ್ದಿ ಕೇಳುವಿರಿ, ಸ್ವಂತ ಉದ್ಯಮಸ್ಥರಿಗೆ ಲಾಭ.
ಧನಸ್ಸು: ಆರ್ಥಿಕ ವ್ಯವಹಾರಗಳಲ್ಲಿ ಉತ್ತಮ, ಕೌಟುಂಬಿಕ ಸಮಸ್ಯೆಗಳು ಇತ್ಯರ್ಥ, ವೃತ್ತಿ ಕ್ಷೇತ್ರದಲ್ಲಿ ಸದಾವಕಾಶ, ಉದ್ಯೋಗ ಅವಕಾಶಗಳು ಪ್ರಾಪ್ತಿ, ಮಿತ್ರರಿಂದ ತೊಂದರೆ, ವಿದೇಶ ಪ್ರಯಾಣ.
ಮಕರ: ಉದ್ಯೋಗದಲ್ಲಿ ಬಡ್ತಿ, ಮೇಲಾಧಿಕಾರಿಗಳಿಂದ ಪ್ರಶಂಸೆ, ದೈವಾನುಗ್ರಹಕ್ಕೆ ಪಾತ್ರರಾಗುವಿರಿ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಬದುಕಿಗೆ ಉತ್ತಮ ತಿರುವು ಲಭ್ಯ, ವಿದೇಶಿ ವಿನಿಮಯದಿಂದ ಲಾಭ, ಮಾನಸಿಕ ನೆಮ್ಮದಿ ಪ್ರಾಪ್ತಿ.
ಕುಂಭ: ಹೊಸ ಯೋಜನೆ ಕೈಗೊಳ್ಳುವ ಮುನ್ನ ಯೋಚಿಸಿ, ನಿರ್ಧಾರ ಕೈಗೊಳ್ಳುವ ಮುನ್ನ ಎಚ್ಚರ, ಉದ್ಯೋಗದಲ್ಲಿ ಅಧಿಕವಾದ ಒತ್ತಡ, ವಿಶ್ರಾಂತಿ ಪಡೆಯಲು ಮನಸ್ಸು, ಆಕಸ್ಮಿಕ ಧನ ಲಾಭ, ವಿದ್ಯಾರ್ಥಿಗಳಿಗೆ ಆತಂಕ, ಮನಸ್ಸಿನಲ್ಲಿ ಗೊಂದಲಮಯ ವಾತಾವರಣ.
ಮೀನ: ಉನ್ನತ ಸ್ಥಾನಮಾನ ಪ್ರಾಪ್ತಿ, ಮನಸ್ಸಿಗೆ ಸಂತಸ, ಪರರಿಗೆ ಸಹಾಯ ಮಾಡುವಿರಿ, ಪುಣ್ಯಕ್ಷೇತ್ರಗಳ ದರ್ಶನ, ಹಿರಿಯರಿಂದ ಆಶೀರ್ವಾದ, ನಿರುದ್ಯೋಗಿಗಳಿಗೆ ಉತ್ತಮ ಅವಕಾಶ.