ರಾಹುಕಾಲ: 12.25 ರಿಂದ 1.58
ಗುಳಿಕಕಾಲ : 10.52 ರಿಂದ 12.25
ಯಮಗಂಡಕಾಲ : 7.46 ರಿಂದ 9.19
ವಾರ: ಬುಧವಾರ, ತಿಥಿ : ತ್ರಯೋದಶಿ ಉಪರಿ ಚತುರ್ದಶಿ, ನಕ್ಷತ್ರ : ಶ್ರವಣ
ಶ್ರೀ ಪರಭಾವ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು,
ಶ್ರಾವಣ ಮಾಸ, ಶುಕ್ಲ ಪಕ್ಷ
ಮೇಷ: ಪ್ರಿಯ ಜನರ ಭೇಟಿ, ಋಣ ವಿಮೋಚನೆ, ಅಲ್ಪ ಲಾಭ ಖರ್ಚು ಜಾಸ್ತಿ, ಸಂತಾನ ಪ್ರಾಪ್ತಿ.
ವೃಷಭ: ಈ ದಿನ ಸಲ್ಲದ ಅಪವಾದ, ದಾಯಾದಿ ಕಲಹ, ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ.
ಮಿಥುನ: ಈ ದಿನ ನೌಕರಿಯಲ್ಲಿ ಕಿರಿಕಿರಿ, ಮಹಿಳೆಯರಿಗೆ ತೊಂದರೆ, ಶರೀರದಲ್ಲಿ ತಳಮಳ, ಮಾತಿನಲ್ಲಿ ಹಿಡಿತವಿರಲಿ, ಸಾಲಭಾದೆ.
ಕಟಕ: ಈ ದಿನ ದೂರ ಪ್ರಯಾಣ, ಮಕ್ಕಳ ಅಗತ್ಯಕ್ಕೆ ಖರ್ಚು, ಹಿರಿಯರ ಸಲಹೆ, ಕೆಲಸವನ್ನು ಪರಿಶ್ರಮವಹಿಸಿ ಮಾಡುವಿರಿ.
ಸಿಂಹ: ವ್ಯವಹಾರಗಳಲ್ಲಿ ಏರುಪೇರು, ಮಹಿಳೆಯರಿಗೆ ಶುಭ, ಅಕಾಲ ಭೋಜನ, ವಿನಾಕಾರಣ ದ್ವೇಷ, ಕಠೋರವಾಗಿ ಮಾತನಾಡುವಿರಿ.
ಕನ್ಯಾ: ಈ ದಿನ ದುರಾಲೋಚನೆ, ಹೇಳಿಕೆ ಮಾತನ್ನು ಕೇಳುವ ಸಂಭವ, ದಂಡ ಕಟ್ಟುವಿರಿ, ಗುರುಗಳ ಭೇಟಿ, ಎಷ್ಟೇ ಕಷ್ಟ ಬಂದರೂ ಮುನ್ನುಗುವಿರಿ.
ತುಲಾ: ಈ ದಿನ ಮಾತಿನ ಚಕಮಕಿ, ಪಿತ್ರಾರ್ಜಿತ ಆಸ್ತಿ ವಿವಾದ, ಮನಕ್ಲೇಶ, ಆರೋಗ್ಯದಲ್ಲಿ ಸಮಸ್ಯೆ, ಕೋಪ ಜಾಸ್ತಿ.
ವೃಶ್ಚಿಕ: ಈ ದಿನ ಕಾರ್ಯ ಸಾಧನೆ, ಅತಿಯಾದ ಪ್ರಯಾಣ, ಚೋರ ಭಯ, ತಾಳ್ಮೆ ಅಗತ್ಯ, ಅಪರಿಚಿತ ವ್ಯಕ್ತಿಗಳಿಂದ ತೊಂದರೆ.
ಧನಸ್ಸು: ದ್ರವರೂಪದ ವಸ್ತುಗಳಿಂದ ಲಾಭ, ವಿದೇಶ ಪ್ರಯಾಣ, ಕಾರ್ಯ ಸಾಧನೆ, ಬರಬೇಕಾದ ಬಾಕಿ ಹಣ ಕೈ ಸೇರುವುದು.
ಮಕರ: ಈ ದಿನ ಆಪ್ತ ಸ್ನೇಹಿತರ ಭೇಟಿ, ಷೇರು ವ್ಯವಹಾರಗಳಲ್ಲಿ ಅಲ್ಪ ಲಾಭ, ಸುಖ ಭೋಜನ, ಶತ್ರುಗಳು ನಿಮಗೆ ಮಿತ್ರರಾಗುವ ಸುದಿನ.
ಕುಂಭ: ಈ ದಿನ ಕುಟುಂಬ ಸೌಖ್ಯ, ದಾಂಪತ್ಯದಲ್ಲಿ ಪ್ರೀತಿ, ಹಿತ ಶತ್ರುಭಾದೆ, ಉನ್ನತ ಸ್ಥಾನಮಾನ, ಅನ್ಯರ ಸಹಕಾರದಿಂದ ಉತ್ತಮ ಪ್ರಗತಿ.
ಮೀನ: ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ, ವಿವಾಹ ಯೋಗ, ಸ್ಥಿರಾಸ್ತಿ ಪ್ರಾಪ್ತಿ, ಅಪವಾದದಿಂದ ಮುಕ್ತಿ, ಪರರಿಗೆ ಸಹಾಯ.
