– MRSAM ಕ್ಷಿಪಣಿ ಖರೀದಿ, ಅಮೆರಿಕನ್ MQ-9B ಡ್ರೋನ್ ಗುತ್ತಿಗೆಗೆ ಒಪ್ಪಿಗೆ
ನವದೆಹಲಿ: ಆಪರೇಷನ್ ಸಿಂಧೂರ (Operation Sindoor) ಕಾರ್ಯಾಚರಣೆಯು ಭಾರತದ ರಕ್ಷಣಾ ಸಾಮರ್ಥ್ಯ ಏನೆಂಬುದು ಜಗತ್ತಿಗೇ ತೋರಿಸಿಕೊಟ್ಟಿದೆ. ಯುದ್ಧಭೂಮಿ ನಿಖರತೆ ಪ್ರದರ್ಶಿಸಿದ ಭಾರತದ ಶಕ್ತಿಗೆ ಬದ್ಧವೈರಿ ಹಾಗೂ ಬಲಾಢ್ಯ ರಾಷ್ಟ್ರಗಳೇ ಬೆಕ್ಕಸ ಬೆರಗಾಗಿವೆ. ಹೀಗಾಗಿ ಭಾರತ ರಕ್ಷಣಾ ವಲಯಕ್ಕೆ ಹೆಚ್ಚು ಮಹತ್ವ ನೀಡುತ್ತಿರುವ ಭಾರತ ಸರ್ಕಾರ ಈಗ ಸಶಸ್ತ್ರ ಪಡೆಗಳ ಕಾರ್ಯಾಚರಣೆಯ ಸಾಮರ್ಥ್ಯವನ್ನ ಬಲಪಡಿಸಲು ಮಹತ್ವದ ಪ್ರಸ್ತಾವನೆಯೊಂದಕ್ಕೆ ಅನುಮೋದನೆ ನೀಡಿದೆ.
The Defence Acquisition Council (DAC), chaired by Raksha Mantri Rajnath Singh, has accorded Acceptance of Necessity (AoN) for various proposals of the three Services amounting to a total of about Rs 79,000 crore. During the meeting held on December 29, 2025, AoN was approved for… pic.twitter.com/agLzBmCNiR
— ANI (@ANI) December 29, 2025
ಹೌದು. ರಕ್ಷಣಾ ಸಚಿವಾಲಯದ ರಕ್ಷಣಾ ಸ್ವಾಧೀನ ಮಂಡಳಿ (DAC) ಸುಮಾರು 79,000 ಕೋಟಿ ರೂಪಾಯಿ ಮೌಲ್ಯದ ರಕ್ಷಣಾ ಉತ್ಪನ್ನಗಳ ಖರೀದಿ ಮತ್ತು ಉನ್ನತೀಕರಿಸುವ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದೆ. ಭಾರತೀಯ ಸೇನೆ, ವಾಯುಪಡೆ ಮತ್ತು ನೌಕಾಪಡೆಯ ಯುದ್ಧ ಕಾರ್ಯಾಚರಣೆಯ ಸಾಮರ್ಥ್ಯ ಬಲಪಡಿಸಲು ಈ ನಿರ್ಧಾರ ಕೈಗೊಂಡಿರುವುದಾಗಿ ಡಿಸಿಎ ತಿಳಿಸಿದೆ. ಈ ಯೋಜನೆಯಲ್ಲಿ ನೂತನ ಹಾಗೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಖರೀದಿಯೂ ಸೇರಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: 31 MQ-9B ಡ್ರೋನ್ ಖರೀದಿಗೆ ಅಮೆರಿಕ ಗ್ರೀನ್ ಸಿಗ್ನಲ್ – ಭಾರತಕ್ಕೆ ಆನೆ ಬಲ – ಡೆಡ್ಲಿ ಡ್ರೋನ್ ವಿಶೇಷತೆ ಏನು?

ಯಾವುದಕ್ಕೆಲ್ಲ ಅನುಮೋದನೆ?
* ಸರಿಸುಮಾರು 200 T-90 ಭೀಷ್ಮ ಟ್ಯಾಂಕ್‌ಗಳನ್ನ ಜೀವಿತಾವಧಿ ಉನ್ನತೀಕರಿಸುವುದು, ಕಾರ್ಯಾಚರಣೆ ಸಾಮರ್ಥ್ಯ ಹೆಚ್ಚಿಸಲು ಕೂಲಂಕುಷ ಪರೀಕ್ಷೆಗೆ ಒಳಪಡಿಸುವುದು. ಈ ಕೆಲಸವನ್ನ ರಕ್ಷಣಾ ಸಾರ್ವಜನಿಕ ವಲಯ ಘಟಕ (DPSU) ನಿರ್ವಹಿಸುತ್ತದೆ.
* ಮಧ್ಯಮ ಗಾತ್ರದ ಲಿಫ್ಟ್ ಹೆಲಿಕಾಪ್ಟರ್ Mi-17 ನ ಜೀವಿತಾವಧಿ ಅಪ್‌ಗ್ರೇಡ್ ಮಾಡುವುದು ಜೊತೆಗೆ ಕಾರ್ಯಾಚರಣೆ ಸಾಮರ್ಥ್ಯ ಹೆಚ್ಚಿಸುವುದು
* ಆಧುನಿಕ ತಂತ್ರಗಾರಿಕೆಯ ಯುದ್ಧ ಕಾರ್ಯಾಚರಣೆಗಾಗಿ ಕಾಮಿಕೇಜ್ ಡ್ರೋನ್ (ಆತ್ಮಹತ್ಯಾ ಡ್ರೋನ್) ಗಳನ್ನ ಖರೀದಿ ಮಾಡುವುದು. ಇದು ಶತ್ರು ನೆಲೆಗಳನ್ನ ನಿಖರವಾಗಿ ಗುರುತಿಸಿ ದಾಳಿ ಮಾಡುತ್ತದೆ.
* ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ತನ್ನ ಸಾಮರ್ಥ್ಯ ತೋರಿದ ಮಧ್ಯಮ-ಶ್ರೇಣಿಯ ಭೂಮಿಯ ಮೇಲ್ಮೈನಿಂದ ಗಾಳಿಗೆ ಚಿಮ್ಮುವ MRSAM ಕ್ಷಿಪಣಿಗಳ ಖರೀದಿಸಲು ಅನುಮೋದನೆ ನೀಡಲಾಗಿದೆ. ಇದು ಏರ್ ಮಿಸೈಲ್ ಆಗಿದ್ದು, ಕಡಲ ಮತ್ತು ವಾಯುರಕ್ಷಣೆಗೆ ಬಲ ತುಂಬಲಿದೆ. ಇದನ್ನೂ ಓದಿ: ಮೆಕ್ಸಿಕೋದಲ್ಲಿ ಹಳಿ ತಪ್ಪಿದ ರೈಲು – 13 ಮಂದಿ ಸಾವು, 98 ಜನರಿಗೆ ಗಾಯ

* 200 ಕಿಮೀ ಗಿಂತಲೂ ಹೆಚ್ಚಿನ ವ್ಯಾಪ್ತಿ ಹೊಂದಿರುವ ಅಸ್ತ್ರ ಮಾರ್ಕ್-2 (ಏರ್ ಟು ಏರ್ ಮಿಸೈಲ್) ಕ್ಷಿಪಣಿಯನ್ನ ಅಭಿವೃದ್ಧಿಪಡಿಸಿ, ವಾಯುಪಡೆಗೆ ಖರೀದಿಸುವುದು.
* ಇಸ್ರೇಲ್‌ನಿಂದ ಹೆಚ್ಚಿನ ಸಂಖ್ಯೆಯ ಸ್ಪೈಸ್-1000 ಬಾಂಬ್‌ಗಳನ್ನ ಖರೀದಿಸೋದಕ್ಕೂ ಅನುಮೋದನೆ ನೀಡಲಾಗಿದೆ. ಇದು ಗಾಳಿಯಿಂದ ಭೂಮಿಗೆ ನಿಗದಿತ ಮಾರ್ಗಸೂಚಿಯಂತೆ ದಾಳಿ ನಡೆಸುವ ಬಾಂಬ್‌ಗಳಾಗಿದೆ.
* 120 ಕಿಮೀ ವ್ಯಾಪ್ತಿಯ ಹೊಸ ಪಿನಾಕಾ ರಾಕೆಟ್ (ಬಹು-ಬ್ಯಾರೆಲ್ ರಾಕೆಟ್ ಲಾಂಚರ್) ಅಭಿವೃದ್ಧಿಪಡಿಸಲು ಅನುಮೋದನೆ ನೀಡಲಾಗಿದೆ. ಇದರೊಂದಿಗೆ ಇದರ ಸಾಮರ್ಥ್ಯವನ್ನ 40 ಕಿಮೀ ವ್ಯಾಪ್ತಿಯಿಂದ 80 ಕಿಮೀ ವ್ಯಾಪ್ತಿಗೆ ಅಪ್‌ಗ್ರೇಡ್ ಮಾಡುವುದು.
* ಇದರೊಂದಿಗೆ ಏರ್-ಟು-ಏರ್ ರೀಫ್ಯೂಯೆಲರ್, ಏರ್‌ಬೋರ್ನ್ ವಾರ್ನಿಂಗ್ ಮತ್ತು ಕಂಟ್ರೋಲ್ ಸಿಸ್ಟಮ್ಸ್ (AWACS) ಸೇರಿದಂತೆ ಹಲವು ರಕ್ಷಣಾ ಉತ್ಪನ್ನಗಳ ಖರೀದಿಗೆ ಅನುಮೋದನೆ ನೀಡಲಾಗಿದೆ. ಇದನ್ನೂ ಓದಿ: 36 ಗಂಟೆಗಳಲ್ಲಿ 80 ಡ್ರೋನ್ ದಾಳಿ – ಭಾರತದ ದಾಳಿಯಲ್ಲಿ ನೂರ್ ಖಾನ್ ವಾಯುನೆಲೆ ಧ್ವಂಸ; ಸತ್ಯ ಒಪ್ಪಿಕೊಂಡ ಪಾಕ್
ಅಮೆರಿಕದ MQ9B ಡ್ರೋನ್ ಗುತ್ತಿಗೆಗೆ ಅಸ್ತು
ಅಮೆರಿಕ ನಿರ್ಮಿತ ಎರಡು `MQ9B ಡ್ರೋನ್’ (ಹೈ ಆಲ್ಟಿಟ್ಯೂಡ್ ಲಾಂಗ್ ಎಂಡ್ಯೂರೆನ್ಸ್ (HALE) ಡ್ರೋನ್‌ಗಳನ್ನ ಮೂರು ವರ್ಷಗಳ ಕಾಲ ಗುತ್ತಿಗೆಗೆ ಪಡೆಯಲು ಒಪ್ಪಿಗೆ ಸೂಚಿಸಲಾಗಿದೆ.

2023ರಲ್ಲೇ ಆಗಿತ್ತು ಒಪ್ಪಂದ
ಈಗಾಗಲೇ ಭಾರತ 31 ʻMQ9B ಡ್ರೋನ್ʼ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದ್ದು, 2028ಕ್ಕೆ ವಿತರಣೆ ಶುರುವಾಗುತ್ತದೆ. 2023ರಲ್ಲಿ ಪ್ರಧಾನಿ ಮೋದಿ ಅವರು ಅಮೆರಿಕ ಪ್ರವಾಸ ಕೈಗೊಂಡಿದ್ದ ವೇಳೆ ಭಾರತ 31 MQ-9B ಸ್ಕೈ ಗಾರ್ಡಿಯನ್ ಡ್ರೋನ್‌ಗಳನ್ನು ಖರೀದಿಸಲು ಪ್ರಸ್ತಾಪಿಸಿತ್ತು. ಭಾರತ ಖರೀದಿಸಲಿರುವ 31 ಡ್ರೋನ್‌ಗಳನ್ನು ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳು ಬಳಸಲಿದ್ದು, ಇದರ ಅಂದಾಜು ವೆಚ್ಚ 3.99 ಶತಕೋಟಿ ಡಾಲರ್ ನಷ್ಟು ಆಗಲಿದೆ.
ಇದಲ್ಲದೇ ಭಾರತ ಸರ್ಕಾರವು 31 MQ-9B ಸ್ಕೈ ಗಾರ್ಡಿಯನ್ ಡ್ರೋನ್ ಖರೀದಿಸಲು ವಿನಂತಿಸಿದೆ. ಇದರೊಂದಿಗೆ 161 ಎಂಬೆಡೆಡ್ ಗ್ಲೋಬಲ್ ಪೊಸಿಷನಿಂಗ್ ಮತ್ತು ಇನರ್ಷಿಯಲ್ ನ್ಯಾವಿಗೇಷನ್ ಸಿಸ್ಟಮ್ಸ್ (EGIs), 35 L3 RIO ಗ್ರಾಂಡೆ ಕಮ್ಯುನಿಕೇಷನ್ಸ್ ಇಂಟೆಲಿಜೆನ್ಸ್ ಸೆನ್ಸರ್ ಸೂಟ್ಸ್, 170 AGM-114R ಹೆಲ್‌ಫೈರ್ ಕ್ಷಿಪಣಿಗಳು, 16 M36E9 ಹೆಲ್ಫೈರ್ ಕ್ಯಾಪ್ಟಿವ್ ಏರ್ ಟ್ರೈನಿಂಗ್ ಕ್ಷಿಪಣಿಗಳು (CATM), ಲೈವ್ ಫ್ಯೂಜ್ ಜೊತೆಗೆ 310 ಜಿಬಿಯು-39B/B ಲೇಸರ್ ಸಣ್ಣ ವ್ಯಾಸದ ಬಾಂಬ್‌ಗಳು (LSDB) ಸೇರಿದಂತೆ ಬಿಡಿ ಭಾಗಗಳು ಸೇರಿದಂತೆ ಹಲವು, ದುರಸ್ತಿ ಉಪಕರಣಗಳನ್ನ ಖರೀದಿಸಲು ಈಗಾಗಲೇ ಒಪ್ಪಂದ ಮಾಡಿಕೊಂಡಿದೆ.
ಆಕ್ರಮಣಕಾರಿ ಡ್ರೋನ್ ವಿಶೇಷತೆ ಏನು?
ವಿಶ್ವದಾದ್ಯಂತ ಆಕ್ರಮಣಕಾರಿ ಕಾರ್ಯಾಚರಣೆಗೆ ಈ ಡ್ರೋನ್ ಹೆಸರು ವಾಸಿಯಾಗಿದೆ. ಲೇಸರ್-ನಿರ್ದೇಶಿತ 4 ಹೆಲ್‌ಫೈರ್ ಕ್ಷಿಪಣಿಗಳು ಮತ್ತು 450 ಕೆಜಿ ಬಾಂಬ್‌ಗಳನ್ನು ಸಹ ಸಾಗಿಸಬಲ್ಲದು. ಭಾರತ ಮತ್ತು ಚೀನಾದ ಗಡಿ ರೇಖೆ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (LAC) ಜೊತೆಗೆ ಹಿಂದೂ ಮಹಾ ಸಾಗರ ಪ್ರದೇಶಗಳಲ್ಲಿ ಇದು ಸಮರ್ಥವಾಗಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿದೆ. ಶತ್ರು ಸೇನೆಗಳ ಆಕ್ರಮಣದ ಬಗ್ಗೆ ಎಚ್ಚರಿಸುತ್ತದೆ. ಸತತ 40 ಗಂಟೆ ಹಾರಾಡುವ ಸಾಮರ್ಥ್ಯ ಹೊಂದಿದೆ.
ಡ್ರೋನ್‌ನಿಂದ ಭಾರತಕ್ಕೆ ಏನು ಪ್ರಯೋಜನ?
MQ9B ಡ್ರೋನ್ ಖರೀದಿಯಿಂದ ಭಾರತ ತನ್ನ ಸಾಮರ್ಥ್ಯವನ್ನ ಸುಧಾರಿಸಿಕೊಳ್ಳಲಿದೆ. ಸಮುದ್ರ ಮಾರ್ಗಗಳಲ್ಲಿ ಮಾನವ ರಹಿತ ಗಸ್ತು ಸಕ್ರೀಯಗೊಳಿಸುತ್ತದೆ. ಮಿಲಿಟರಿ ವ್ಯವಸ್ಥೆಯಲ್ಲಿ ಮತ್ತಷ್ಟು ಆಧುನಿಕತೆ ತರಲಿದೆ. ಸಶಸ್ತ್ರ ಪಡೆಗಳ ಬಲ ಮತ್ತಷ್ಟು ಹೆಚ್ಚಾಗಲಿದೆ.

