ನಟ ರಾಕ್ಷಸ ಡಾಲಿ (Daali Dhananjay) ಆಗಸ್ಟ್ 23ರಂದು ತಮ್ಮ ಹುಟ್ಟುಹಬ್ಬವನ್ನ ಅಭಿಮಾನಿಗಳ ಜೊತೆ ಆಚರಿಸಿಕೊಂಡಿದ್ದರು. ಇದೀಗ ಚಿತ್ರರಂಗದ ಸ್ನೇಹಿತರಿಗಾಗಿ ಗ್ರ್ಯಾಂಡ್ ಆಗಿ ಬರ್ತ್ಡೇ (Birthday) ಸೆಲೆಬ್ರೇಟ್ ಮಾಡಿದ್ದಾರೆ. ಚಂದನವನದ ನಟ-ನಟಿಯರು ಡಾಲಿ ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ದಾರೆ.
Advertisement
ಬರ್ತ್ಡೇ ಪಾರ್ಟಿಯಲ್ಲಿ ಕೆಜಿಎಫ್ (KGF) ಹೀರೋ ಯಶ್(Yash), ಅಭಿಷೇಕ್ ಅಂಬರೀಶ್, ಮಿಲನಾ-ಡಾರ್ಲಿಂಗ್ ಕೃಷ್ಣ, ಮೇಘನಾ ರಾಜ್, ಪನ್ನಗಭರಣ, ಕೃಷಿ ತಾಪಂಡ, ಲವ್ಲಿ ಸ್ಟಾರ್ ಪ್ರೇಮ್ ಕುಟುಂಬ, ಅಮೃತಾ ಅಯ್ಯಂಗಾರ್, ನಿರೂಪ್ ಭಂಡಾರಿ, ದಿಗಂತ್-ಐಂದ್ರಿತಾ ಜೋಡಿ, ಸಪ್ತಮಿ ಗೌಡ, ವಾಸುಕಿ ವೈಭವ್, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಲವರು ಭಾಗಿಯಾಗಿ ನಟ ಡಾಲಿಗೆ ವಿಶ್ ಮಾಡಿದ್ದರು. ಇದನ್ನೂ ಓದಿ:ಕುಟುಂಬದೊಂದಿಗೆ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ ನಿಖಿಲ್
Advertisement
Advertisement
ಕೊವೀಡ್ ನಿಮಿತ್ತ ಕಳೆದ 2-3 ವರ್ಷಗಳಿಂದ ಡಾಲಿ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಈ ವರ್ಷ ನಂದಿ ಲಿಂಕ್ ಗ್ರೌಂಡ್ನಲ್ಲಿ ಅಭಿಮಾನಿಗಳಿಗೆ ಸಮಯ ಮೀಸಲಿಟ್ಟು, ಬರ್ತ್ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಈ ಬೆನ್ನಲ್ಲೇ ಈಗ ಕನ್ನಡ ಸಿನಿಮಾರಂಗದ ನಟ-ನಟಿಯರ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ.
Advertisement
ಉತ್ತರಕಾಂಡ, ಪುಷ್ಪ 2, ಅಣ್ಣ From Mexico ಸೇರಿದಂತೆ ಹಲವು ಸಿನಿಮಾಗಳು ನಟ ಧನಂಜಯ್ ಕೈಯಲ್ಲಿದೆ. ಈ ವರ್ಷ ಡಾಲಿ ಪರ್ವ ಹೇಗಿರಲಿದೆ ಕಾದುನೋಡಬೇಕಿದೆ.