ಬೆಂಗಳೂರು: ದಲಿತರ ಮೇಲೆ ದೌರ್ಜನ್ಯ ಮಾಡಿರೋ ಸಚಿವ ಡಿ ಸುಧಾಕರ್ ಅವರನ್ನು (D Sudhakar) ಸಚಿವ ಸಂಪುಟದಿಂದ ತೆಗೆದು ಹಾಕಿ ಕೂಡಲೇ ಅವರ ಬಂಧನ ಮಾಡಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಸರ್ಕಾರವನ್ನು ಆಗ್ರಹಿಸಿದ್ದಾರೆ.
ಸಚಿವ ಸುಧಾಕರ್ ಮೇಲೆ ದೂರು ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ಸರ್ಕಾರ ದಲಿತ ಉದ್ಧಾರ ಮಾಡ್ತೀವಿ ಅಂತ ಉದ್ದುದ್ದ ಭಾಷಣ ಮಾಡ್ತಾರೆ. ದಲಿತರ ರಕ್ಷಣೆಗೆ ಬಿಲ್ ತಂದಿದ್ದೇವೆ ಅಂತಾರೆ. ಇದೇನಾ ನಿಮ್ಮ ದಲಿತರ ರಕ್ಷಣೆ ಮಾಡೋ ವೈಖರಿ? ಸಚಿವರು ಮಚ್ಚು ತಗೊಂಡು ಹೆಣ್ಣು ಮಕ್ಕಳಿಗೆ ಧಮ್ಕಿ ಹಾಕ್ತಾರೆ ಅಂದರೆ ಇದು ಎಂತಹ ವ್ಯವಸ್ಥೆ ಅಂತ ಕಿಡಿಕಾರಿದರು.
Advertisement
Advertisement
ಅಧಿವೇಶನದಲ್ಲಿ ಉಪ ಸಭಾಧ್ಯಕ್ಷರ ಮೇಲೆ ಪೇಪರ್ ಎಸೆದಿದ್ದಕ್ಕೆ ಸಿಎಂ, ಕೃಷ್ಣಭೈರೇಗೌಡ ಉದ್ದುದ್ದವಾಗಿ ಮಾತಾಡಿದ್ರು. ಈಗ ದಲಿತರ ರಕ್ಷಣೆ ಮಾಡೋದು ಹೀಗೆನಾ ಅಂತ ಪ್ರಶ್ನೆ ಮಾಡಿದ್ರು. ದೂರು ದಾಖಲಾದ ಕೂಡಲೇ ಸಚಿವ ಸುಧಾಕರ್ ಯಾವ ಯಾವ ಸಚಿವರ ಮನೆಗೆ ಹೋಗಿದ್ರು ಗೊತ್ತಿದೆ. ಗೃಹ ಸಚಿವರ ಮನೆಗೆ ಹೋಗಿದ್ದು ಕೇಸ್ ಮುಚ್ಚಿ ಹಾಕಲು ಅಲ್ಲವಾ ಅಂತ ಪ್ರಶ್ನೆ ಮಾಡಿದ್ರು. ಎಫ್‌ಐಆರ್ ಹಾಕಿದ ಅಧಿಕಾರಿಯನ್ನು ಬೆದರಿಸೋ ಕೆಲಸ ಮಾಡ್ತಿದ್ದಾರೆ. ಯಾಕೆ ಕೇಸ್ ಹಾಕಿದೆ ಅಂತ ಒತ್ತಡ ಮಾಡ್ತಿದ್ದಾರೆ ಅಂತ ಆರೋಪ ಮಾಡಿದ್ರು. ಇದನ್ನೂ ಓದಿ: ದಲಿತ ಕುಟುಂಬಕ್ಕೆ ಧಮ್ಕಿ ಆರೋಪ – ವೀಡಿಯೋ ಫೇಕ್ ಎಂದ ಡಿ ಸುಧಾಕರ್
Advertisement
Advertisement
ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಸಚಿವರನ್ನು ಒಂದು ನಿಮಿಷವೂ ಸಂಪುಟದಲ್ಲಿ ಇರಿಸಿಕೊಳ್ಳಬಾರದು. ಕೂಡಲೇ ರಾಜೀನಾಮೆ ಪಡೆದು ಅವರನ್ನು ಬಂಧನ ಮಾಡಬೇಕು ಅಂತ ಸಿಎಂ ಸಿದ್ದರಾಮಯ್ಯರನ್ನು ಆಗ್ರಹ ಮಾಡಿದ್ರು. ಇದು ದಲಿತ ವಿರೋಧ ಸರ್ಕಾರ, ಜನ ವಿರೋಧ ಸರ್ಕಾರ ಅಂತ ಕಿಡಿಕಾರಿದರು. ಇದನ್ನೂ ಓದಿ: ಯಲಹಂಕ ದೊಡ್ಡದೇನಲ್ಲ ನನಗೆ. ಬಾರಲೇ ಅಲ್ಲಿಗೆ ಬರೀನಿ ಬಾ: ಸಚಿವ ಸುಧಾಕರ್ ಧಮ್ಕಿ
Web Stories