ಬೆಂಗಳೂರು: ಡಿಕೆಶಿಗೆ ಕೊರೊನಾ ಅಂಟಿಸಲು ಸೋಂಕಿತ ವ್ಯಕ್ತಿಯನ್ನು ಅವರ ಬಳಿ ಕಳುಹಿಸಿದ್ದಾರೆ ಎಂದು ಸಂಸದ ಡಿ.ಕೆ ಸುರೇಶ್ ಗಂಭೀರ ಆರೋಪ ಮಾಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಕೊರೊನಾ ಅಂಟಿಸಲು ಸೋಂಕಿತ ವ್ಯಕ್ತಿಯನ್ನು ಕಳುಹಿಸಲಾಗಿದೆ. ಬೇಕಂತಲೇ ಸೋಂಕಿತ ವ್ಯಕ್ತಿಯನ್ನು ಅವರ ಬಳಿ ಕಳುಹಿಸಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆ ಬಳಿ ಬಂದಿದ್ದ ಎಡಿಸಿಗೆ ಕೊರೊನಾ ಪಾಸಿಟಿವ್
Advertisement
Advertisement
ಮೇಕೆದಾಟು ಪಾದಯಾತ್ರೆ ನಡೆಸಬೇಡಿ ಎಂದು ಮನವಿ ಮಾಡಲು ಎಡಿಸಿ ಜವರೇಗೌಡ, ಡಿ.ಕೆ ಶಿವಕುಮಾರ್ ಅವರ ಬಳಿ ಬಂದಿದ್ದರು. ಕೊರೊನಾ ನಿಯಮ ಪಾಲಿಸಿ ಎಂದು ಹೇಳಿದ್ದರು. ಬಳಿಕ ಸಂಜೆ ಡಿಕೆಶಿ ಬಳಿ ಬಂದು ಟೆಸ್ಟ್ ಮಾಡಿಸಿಕೊಳ್ಳಿ ಎಂದು ಕೂಡ ಹೇಳಿದ್ದರು. ಈ ವೇಳೆ ಎಡಿಸಿಗೆ, ಡಿ.ಕೆ ಶಿವಕುಮಾರ್ ಬೈದಿದ್ದರು.
Advertisement
ಇತ್ತ ಪಾದಯಾತ್ರೆ ನಡೆಯುತ್ತಿರುವ ಸ್ಥಳಕ್ಕೆ ಹೋಗಿದ್ದ ಕಾರಣ ಎಡಿಸಿ ಇಂದು ಬೆಳಗ್ಗೆ ಟೆಸ್ಟ್ ಮಾಡಿಸಿಕೊಂಡಿದ್ದರು. ಇದೀಗ ಅವರಿಗೆ ಕೊರೊನಾ ಪಾಸಿಟಿವ್ ಎಂದು ವರದಿ ಬಂದಿದ್ದು, ಸದ್ಯ ಅವರು ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದಾರೆ. ಇದನ್ನೂ ಓದಿ: ನನ್ನನ್ನು ನೋಡಿದ್ರೆ ಕೊರೊನಾ ಇದೆ ಅಂತ ಅನ್ನಿಸುತ್ತಾ?: ಡಿ.ಕೆ. ಶಿವಕುಮಾರ್