Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸೋಲಿಲ್ಲದ ಸರದಾರ ಡಿಕೆಶಿಗೆ ಸಾಮ್ರಾಟ್ ಸವಾಲ್..!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Karnataka Election 2023 | ಸೋಲಿಲ್ಲದ ಸರದಾರ ಡಿಕೆಶಿಗೆ ಸಾಮ್ರಾಟ್ ಸವಾಲ್..!

Karnataka Election 2023

ಸೋಲಿಲ್ಲದ ಸರದಾರ ಡಿಕೆಶಿಗೆ ಸಾಮ್ರಾಟ್ ಸವಾಲ್..!

Public TV
Last updated: April 16, 2023 3:04 pm
Public TV
Share
3 Min Read
DKSHIVAKUMAR AND RASHOK
SHARE

– ವರ್ಕೌಟ್ ಆಗುತ್ತಾ ಒಕ್ಕಲಿಗ ಟ್ರಂಪ್ ಕಾರ್ಡ್?
– ಕಾಂಗ್ರೆಸ್‌ನ ಅಬೇಧ್ಯ ಕೋಟೆಯ ರಾಜಕೀಯ, ಚುನಾವಣೆ, ಜಾತಿ ಲೆಕ್ಕಾಚಾರವೇನು?

ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ತವರು ಕ್ಷೇತ್ರವಾದ ಕನಕಪುರದಲ್ಲಿ (Kanakapura) ಕಾಂಗ್ರೆಸ್‌ನದ್ದೆ (Congress) ಸರ್ವಾಧಿಕಾರ. ಎದುರಾಳಿಗಳೇ ಇಲ್ಲದೇ ನಿರಾಯಾಸವಾಗಿ ಚುನಾವಣೆ ನಡೆಸುತ್ತಿದ್ದ ಕಾಂಗ್ರೆಸ್‌ಗೆ ಈ ಬಾರಿ ಠಕ್ಕರ್ ಕೊಡಲು ಬಿಜೆಪಿ ತಂತ್ರಗಾರಿಕೆ ನಡೆಸಿದೆ. ಎರಡು ದಶಕಗಳ ಹಿಂದೆ ಜೆಡಿಎಸ್ ಪಾಲಿಗೆ ಭದ್ರಕೋಟೆಯಾಗಿದ್ದ ಕನಕಪುರ, ಈಗ ಡಿ.ಕೆ.ಶಿವಕುಮಾರ್ ಅವರ ಮುಷ್ಟಿಯಲ್ಲಿದೆ. ಕಾಂಗ್ರೆಸ್‌ನ ಅಬೇಧ್ಯ ಕೋಟೆಯನ್ನ ಬೇಧಿಸಲು ಬಿಜೆಪಿಯಿಂದ ಸಾಧ್ಯವಾಗುತ್ತಾ ಎಂಬುದನ್ನ ಕಾದುನೋಡಬೇಕಿದೆ.

d.k.shivakumar

ಅಶೋಕ್‌ಗೆ ಸಹೋದರರ ಸವಾಲ್
ಕನಕಪುರದಲ್ಲಿ ಬಿಜೆಪಿಯಿಂದ (BJP) ಸಚಿವ ಆರ್. ಅಶೋಕ್ (R.Ashok) ಸ್ಪರ್ಧೆ ಕನಕಪುರ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ಆದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸ್ವಕ್ಷೇತ್ರಕ್ಕೆ ಲಗ್ಗೆ ಇಟ್ಟು ಗೆಲುವು ಸಾಧಿಸಲು ಸಾಧ್ಯವೇ ಎಂಬ ಪ್ರಶ್ನೆ ಕೂಡಾ ಉದ್ಭವ ಆಗಿದೆ. ಸತತ ಏಳು ಬಾರಿ ವಿಧಾನಸಭೆಗೆ ಆಯ್ಕೆಯಾಗಿರುವ ಶಿವಕುಮಾರ್ ಒಮ್ಮೆಯೂ ಸೋತಿಲ್ಲ. ಇಲ್ಲಿ ಡಿಕೆಶಿಯಷ್ಟೇ ಅವರ ಸಹೋದರ, ಸಂಸದ ಡಿ.ಕೆ.ಸುರೇಶ್ (D.K.Suresh) ಸಹ ಪ್ರಭಾವಿ. ಹೀಗಾಗಿ ಅಶೋಕ್ ಇಲ್ಲಿ ಸಹೋದರರ ಸವಾಲ್ ಎದುರಿಸಬೇಕಿದೆ. ಕೆಪಿಸಿಸಿ ಅಧ್ಯಕ್ಷರನ್ನು ತವರು ಕ್ಷೇತ್ರದಲ್ಲಿ ಕಟ್ಟಿಹಾಕುವ ಉದ್ದೇಶದಿಂದಲೇ ಅಶೋಕ್ ಕಣಕ್ಕೆ ಇಳಿಯುತ್ತಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಇದನ್ನು ಅರಿತಿರುವ ಡಿ.ಕೆ.ಸುರೇಶ್ ಈಗಾಗಲೇ ಕ್ಷೇತ್ರದಲ್ಲಿ ಸಕ್ರಿಯರಾಗಿ ಸಂಚಾರ ಮಾಡ್ತಿದ್ದಾರೆ. ಇದನ್ನೂ ಓದಿ: ವರುಣಾದಲ್ಲಿ ಬಿಗ್‌ ಫೈಟ್‌: ಸಿದ್ದು v/s ಸೋಮಣ್ಣ – ಯಾರ ಕೈ ಹಿಡೀತಾರೆ ವರುಣಾ ಮತದಾರ?

R.Ashok

ಒಕ್ಕಲಿಗ ನಾಯಕರ ಫೈಟ್
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಬೃಹತ್ ಪ್ರತಿಮೆ ಸ್ಥಾಪನೆ, ವಿಧಾನಸೌಧದ ಮುಂದೆ ಕೆಂಪೇಗೌಡರ ಪುತ್ಥಳಿ ನಿರ್ಮಾಣದಂತಹ ಕಾರ್ಯಗಳ ಮೂಲಕ ಒಕ್ಕಲಿಗ ಮತಗಳ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಅದರ ಮುಂದುವರಿದ ಭಾಗವಾಗಿ ಕನಕಪುರದಲ್ಲಿ ಕಾಂಗ್ರೆಸ್‌ನ ಒಕ್ಕಲಿಗ ನಾಯಕನ ವಿರುದ್ಧ ತನ್ನ ಪಕ್ಷದಲ್ಲಿನ ಅದೇ ಸಮುದಾಯದ ಪ್ರಭಾವಿ ನಾಯಕನನ್ನು ನಿಲ್ಲಿಸಿದೆ. ಈ ಮೂಲಕ ಕನಕಪುರದಲ್ಲಿ ಒಕ್ಕಲಿಗ ಟ್ರಂಪ್ ಕಾರ್ಡ್ ಬಳಸಿದೆ. ಕನಕಪುರ ಕ್ಷೇತ್ರದಲ್ಲಿ 2.2 ಲಕ್ಷದಷ್ಟು ಮತದಾರರು ಇದ್ದು, ಇದರಲ್ಲಿ ಅಂದಾಜು ಅರ್ಧದಷ್ಟು ಮಂದಿ ಒಕ್ಕಲಿಗ ಸಮುದಾಯದವರಿದ್ದಾರೆ. ಹೀಗಾಗಿ ಈ ಬಾರಿ ಇಬ್ಬರು ಒಕ್ಕಲಿಗ ನಾಯಕರ ನಡುವಿನ ಸ್ಪರ್ಧೆ ಕುತೂಹಲ ಮೂಡಿಸಿದೆ.

ಕನಕಪುರ ಡಿಕೆಶಿ ಕೋಟೆಯಾದರೂ ಇಲ್ಲಿ ಜೆಡಿಎಸ್ ಸಾಂಪ್ರದಾಯಿಕ ಮತಗಳನ್ನು ಹೊಂದಿದೆ. ಈ ಹಿಂದೆ ಕನಕಪುರ ಕ್ಷೇತ್ರದಲ್ಲಿ ಜನತಾ ಪರಿವಾರದ ಪಿಜಿಆರ್ ಸಿಂಧ್ಯಾ ಸತತವಾಗಿ ಆರಿಸಿ ಬಂದಿದ್ದರು. ಸಾತನೂರು ಪ್ರತ್ಯೇಕ ವಿಧಾನಸಭಾ ಕ್ಷೇತ್ರವಾಗಿದ್ದ ವೇಳೆ 1985ರಲ್ಲಿ ಎಚ್.ಡಿ.ದೇವೇಗೌಡ ಹಾಗೂ ಡಿಕೆಶಿ ಮುಖಾಮುಖಿ ಆಗಿದ್ದು, ಹೆಚ್.ಡಿ.ದೇವೇಗೌಡರು ಗೆದ್ದಿದ್ದರು. ಬಳಿಕ 1999ರಲ್ಲಿ ಹೆಚ್.ಡಿ.ಕುಮಾರಸ್ವಾಮಿ ಇದೇ ಕ್ಷೇತ್ರದಲ್ಲಿ ಡಿಕೆಶಿ ವಿರುದ್ಧ ಸ್ಪರ್ಧೆ ಮಾಡಿ ಪರಾಭವಗೊಂಡಿದ್ದರು. ನಂತರ 2008ರಲ್ಲಿ ಸಾತನೂರು ಕ್ಷೇತ್ರ ಕನಕಪುರ ಕ್ಷೇತ್ರದೊಂದಿಗೆ ವಿಲೀನಗೊಂಡಿತು. ಅಂದಿನಿಂದ ಇಲ್ಲಿಯವರೆಗೂ ಈ ಕ್ಷೇತ್ರದಲ್ಲಿ ಡಿಕೆಶಿ ಗೆಲುವು ಸಾಧಿಸುತ್ತಿದ್ದಾರೆ. ಅಲ್ಲದೇ ಸಾಂಪ್ರದಾಯಿಕ ಮತಗಳನ್ನ ಹೊಂದೊರೋ ಜೆಡಿಎಸ್ ನಿಂದ ಇಲ್ಲಿ ಯಾರೇ ಅಭ್ಯರ್ಥಿ ಆದರೂ 50-60 ಸಾವಿರ ಮತ ಪಡೆಯುತ್ತ ಬಂದಿದ್ದಾರೆ. ಕಳೆದ ಬಾರಿ ಇಲ್ಲಿ ಕಡೆ ಕ್ಷಣದಲ್ಲಿ ಜೆಡಿಎಸ್ ಬಿ ಫಾರಂ ಪಡೆದಿದ್ದ ನಾರಾಯಣ ಗೌಡ ಸಹ 47,643 ಪಡೆದಿದ್ದರು. ಈ ಬಾರಿ ಕನಕಪುರದಿಂದ ಜೆಡಿಎಸ್ ಇನ್ನೂ ತನ್ನ ಅಭ್ಯರ್ಥಿಯನ್ನು ಆಯ್ಕೆ ಮಾಡಿಲ್ಲ. ಹಾಗಾಗಿ ಈ ಬಾರಿ ಜೆಡಿಎಸ್ ಪ್ರಬಲ ಅಭ್ಯರ್ಥಿಯನ್ನ ಹಾಕುತ್ತಾ ಎಂಬುದನ್ನ ಕಾದುನೋಡಬೇಕಿದೆ. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಕಣ್ಣೀರು

ಒಮ್ಮೆಯೂ ಠೇವಣಿಯನ್ನೇ ಉಳಿಸಿಕೊಳ್ಳದ ಬಿಜೆಪಿ
ಇನ್ನೂ ಬಿಜೆಪಿ ರಾಜಕೀಯ ಪ್ರಯೋಗಶಾಲೆಗೆ ಆಯ್ಕೆ ಮಾಡಿಕೊಂಡಿರುವ ಈ ಕ್ಷೇತ್ರ ಪಕ್ಷದ ಪಾಲಿಗೆ ಕಬ್ಬಿಣದ ಕಡಲೆಯಾಗಿದೆ. ಈವರೆಗಿನ ಚುನಾವಣೆಗಳಲ್ಲಿ ಇಲ್ಲಿ ಒಮ್ಮೆಯೂ ಬಿಜೆಪಿ ಪಕ್ಷಕ್ಕೆ ಠೇವಣಿ ಸಹ ಉಳಿದಿಲ್ಲ. ಪಕ್ಷ ಸಂಘಟನೆ ಕೂಡಾ ಅಷ್ಟಕ್ಕಷ್ಟೇ. ಉಳಿದ 25 ದಿನದಲ್ಲೇ ಪಕ್ಷ ಸಂಘಟನೆ ಜೊತೆಗೆ ಪ್ರಚಾರವನ್ನೂ ನಡೆಸಬೇಕಾದ ಸವಾಲು ಅಶೋಕ್ ಮುಂದೆ ಇದೆ.

ಕನಕಪುರ ಜಾತಿ ಲೆಕ್ಕಾಚಾರವೇನು?
ಇನ್ನೂ ಕನಕಪುರ ಕ್ಷೇತ್ರದಲ್ಲಿ ಒಟ್ಟು 2,21,912 ಮತದಾರರಿದ್ದಾರೆ. ಇದರಲ್ಲಿ 1,09,623 ಪುರುಷ ಮತದಾರರು ಹಾಗೂ 1,11,274 ಮಹಿಳಾ ಮತದಾರರಿದ್ದಾರೆ. ಕ್ಷೇತ್ರದ ಜಾತಿವಾರು ಲೆಕ್ಕಾಚಾರದಲ್ಲಿ ಒಕ್ಕಲಿಗ -1,00,000, ದಲಿತ- 44,000, ಮುಸ್ಲಿಂ-22,000, ಲಿಂಗಾಯತ-19,000, ಕುರುಬ – 6,000, ತಿಗುಳರು -11,000, ಕ್ರಿಶ್ಚಿಯನ್ -2,500, ಬೆಸ್ತರು 6,000 ಹಾಗೂ ಇತರೆ- 9,000 ಮತದಾರರು ಕ್ಷೇತ್ರದಲ್ಲಿದ್ದಾರೆ. ಇದನ್ನೂ ಓದಿ: ಶೆಟ್ಟರ್‌ರಂತಹ ದೊಡ್ಡ ನಾಯಕರ ಅವಶ್ಯಕತೆ ನಮಗಿಲ್ಲ: ಹೆಚ್‍ಡಿಕೆ

TAGGED:bjpcongressd k shivakumarkanakapuraKarnataka Election 2023r ashokಆರ್‌.ಅಶೋಕ್‌ಕನಕಪುರಕರ್ನಾಟಕ ಚುನಾವಣೆಕಾಂಗ್ರೆಸ್ಡಿ.ಕೆ.ಶಿವಕುಮಾರ್ಬಿಜೆಪಿ
Share This Article
Facebook Whatsapp Whatsapp Telegram

Cinema news

Ranbir Kapoor Yash Sai Pallavi
ಟೀಸರ್‌ ರಿಲೀಸ್‌ ಬೆನ್ನಲ್ಲೇ ‘ರಾಮಾಯಣ’ ನಟರ ಸಂಭಾವನೆ ಬಹಿರಂಗ – ರಣಬೀರ್‌ಗೆ 150 ಕೋಟಿ, ಯಶ್‌ಗೆ ಎಷ್ಟು?
Bollywood Cinema Latest Top Stories
Parliament House witnessed Azad Bharat screening in honor of Netaji Subhas Chandra Bose 1
ನೇತಾಜಿ ಗೌರವಾರ್ಥ ಆಜಾದ್ ಭಾರತ್ ಚಿತ್ರ ಪ್ರದರ್ಶನಕ್ಕೆ ಸಂಸತ್ ಭವನ ಸಾಕ್ಷಿ
Cinema Latest National Top Stories
Ramayana
`ರಾಮಾಯಣ’ ಟೀಸರ್ ರಿಲೀಸ್ – ಮರ್ಯಾದಾ ಪುರುಷೋತ್ತಮನ ಗೆಟಪ್‌ನಲ್ಲಿ ಕಂಗೊಳಿಸಿದ ರಣಬೀರ್
Bollywood Cinema Latest Top Stories
Malayalam director Ranjith
ನಟಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಮಲಯಾಳಂ ನಿರ್ದೇಶಕ ರಂಜಿತ್ ಅರೆಸ್ಟ್
Cinema Latest Main Post National South cinema

You Might Also Like

Siddaramaiah R Ashok
Bengaluru City

ಅನ್ನರಾಮಯ್ಯ ಅಲ್ಲ ಕನ್ನರಾಮಯ್ಯ, ಕೇಂದ್ರ ಸರ್ಕಾರ ನೀಡುವ ಅಕ್ಕಿಗೆ ಕನ್ನ: ಆರ್.ಅಶೋಕ್‌ ಟೀಕೆ

Public TV
By Public TV
20 minutes ago
Ayush Mhatre Rohit Sharma
Cricket

ರೋಹಿತ್ ಭಾಯ್‌ ಟಿಪ್ಸ್‌ನಿಂದ U19 ವಿಶ್ವಕಪ್‌ ಗೆಲ್ಲಲು ಸಾಧ್ಯವಾಯ್ತು – ಆಯುಷ್ ಮ್ಹಾತ್ರೆ

Public TV
By Public TV
60 minutes ago
mustafizur rahman 2
Cricket

ಬಾಂಗ್ಲಾ ಆಟಗಾರರಿಗೆ ಐಪಿಎಲ್‌ನಲ್ಲಿ ಆಡಲು ಬಿಸಿಸಿಐ ಗ್ರೀನ್‌ ಸಿಗ್ನಲ್‌?

Public TV
By Public TV
2 hours ago
BJP MP Vishweshwar Hegde Kageri
Kalaburagi

ಇರಾನ್-ಇಸ್ರೇಲ್ ಯುದ್ಧದ ಸಂದರ್ಭದಲ್ಲಿ ದೇಶಕ್ಕೆ ಸಮಸ್ಯೆಯಾಗಿಲ್ಲ: ಕಾಗೇರಿ

Public TV
By Public TV
2 hours ago
Behnam Rezaei
Latest

ಇರಾನ್‌ಗೆ ಶಾಕ್: ನೌಕಾಪಡೆ ಉಪ ಗುಪ್ತಚರ ಮುಖ್ಯಸ್ಥ ಬೆಹ್ನಾಮ್ ರೆಝಾಯ್ ಹತ್ಯೆ – ಖಚಿತಪಡಿಸಿದ IRGC

Public TV
By Public TV
2 hours ago
eve Sweet 2
Latest

ವಿಶ್ವದ ನಂ.1 ನೀಲಿ ತಾರೆಗೆ 1 ತಿಂಗಳಲ್ಲಿ 1000 ಪುರುಷರಿಂದ ಬಂತು ಮದುವೆ ಪ್ರಪೋಸಲ್‌

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?