ನಮ್ಮ ನಾಯಕರ ತ್ಯಾಗ ಬಲಿದಾನದಷ್ಟು ಬೇರೆಯವರಿಗೆ ಇತಿಹಾಸ ಇಲ್ಲ: ಡಿಕೆಶಿ

Public TV
2 Min Read
DK SHIVAKUMAR 3

ಬೆಂಗಳೂರು: ಈ ದೇಶದ ಇತಿಹಾಸವೇ ಕಾಂಗ್ರೆಸ್ ಇತಿಹಾಸ. ನಮ್ಮ ನಾಯಕರ ತ್ಯಾಗ ಬಲಿದಾನದಷ್ಟು ಬೇರೆಯವರಿಗೆ ಇತಿಹಾಸ ಇಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಧ್ವಜ ಕಾಂಗ್ರೆಸ್ ಧ್ವಜ, ಅದರಲ್ಲೇ ಗಾಂಧೀಜಿಯವರ ಚರಕ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

KPCC OFFICE

ಕಾಂಗ್ರೆಸ್ ಕಚೇರಿಯಲ್ಲಿ ಸರ್ವೋದಯ ದಿನಾಚರಣೆ ಆಚರಿಸಲಾಯಿತು. ಡಿಕೆ ಶಿವಕುಮಾರ್, ಸೇರಿದಂತೆ ಕಾಂಗ್ರೆಸ್ ನಾಯಕರು ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿ 2 ನಿಮಿಷ ಮೌನಾಚರಣೆ ಮೂಲಕ ಮಹಾತ್ಮ ಗಾಂಧೀಜಿಯವರಿಗೆ ನಮನ ಸಲ್ಲಿಸಿದರು. ಇದನ್ನೂ ಓದಿ: ಸ್ವಪಕ್ಷೀಯ ಶಾಸಕರ ವಿರುದ್ಧ ಪ್ರತಾಪ್‍ ಸಿಂಹ ವಾಗ್ದಾಳಿ – ಮುಂದುವರಿದ ಟಾಕ್‌ವಾರ್‌

ಬಳಿಕ ಮಾತನಾಡಿದ ಡಿಕೆ ಶಿವಕುಮಾರ್, ಗಾಂಧಿ ತತ್ವ ಆದರ್ಶ ಸಿದ್ಧಾಂತ ಮುಂದೆ ಬೇರೆ ಯಾವ ಪ್ರೇರಣೆಯೂ ಇಲ್ಲ ಅಂತ ಇಡೀ ಪ್ರಪಂಚವೇ ಒಪ್ಪಿಕೊಂಡಿದೆ. ಹೇ ರಾಂ ಅಂತ ಗಾಂಧಿ ಕೊನೆ ಉಸಿರಲ್ಲೂ ಕೂಡ ಹೇಳಿದ್ದರು. ರಘುಪತಿ ರಾಘವ ರಾಜಾರಾಂ ಎಂಬ ಪದಗಳು ಅವರ ಕೊನೆ ಕ್ಷಣದಲ್ಲೂ ಇತ್ತು. ನಮ್ಮ ನಾಯಕರ ತ್ಯಾಗ ಬಲಿದಾನದಷ್ಟು ಬೇರೆಯವರಿಗೆ ಇತಿಹಾಸ ಇಲ್ಲ. ಗಾಂಧಿ ಕೊನೆ ಉಸಿರು ಇರುವವರೆಗೂ ಕೂಡ ದೇಶಕ್ಕೆ ಸಮಾಜಕ್ಕೆ ಮಾರ್ಗದರ್ಶನ ಮಾಡಿಕೊಂಡು ಬಂದರು. ಗಾಂಧೀಜಿ ಚರಕದ ಮೂಲ ಸಂದೇಶ ಯಾರ ಅವಲಂಬನೆ ಬೇಡ, ಸ್ವಾವಲಂಬಿಗಳಾಗೋಣ ಅನ್ನೋದು. ಮೊನ್ನೆ ತಾನೇ ನಾವು, ನಮ್ಮ ನೀರು ನಮ್ಮ ಹಕ್ಕು ಅಂತ ಪಾದಯಾತ್ರೆ ಮಾಡಿದೆವು. ಕಾಂಗ್ರೆಸ್‍ನವರಿಗೆ ಮಾತ್ರ ಇಂಥ ಪಾದಯಾತ್ರೆ ಯೋಚನೆ ಬರುವುದಕ್ಕೆ ಸಾಧ್ಯ. ನಾವು ಲಾಠಿ ಹಿಡಿದುಕೊಂಡು ಬಂದೂಕು ಹಿಡಿದುಕೊಂಡು ಹೋರಾಟಕ್ಕೆ ಹೋಗಿರಲಿಲ್ಲ. ಇದನ್ನು ಕೆಲವರು ಒಪ್ಪಿಕೊಳ್ಳೋದಿಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಭಾರತದಲ್ಲಿ ಶೇ.75 ವಯಸ್ಕರಿಗೆ ಎರಡೂ ಡೋಸ್‌ ಲಸಿಕೆ – ಪ್ರಧಾನಿ ಅಭಿನಂದನೆ

ಬಿಜೆಪಿ ವಿವಿಧ ವಿಚಾರದಲ್ಲಿ ಜನರನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ. ದೇಶದಲ್ಲಿ ತಾತ್ಕಾಲಿಕ ತುರ್ತು ಪರಿಸ್ಥಿತಿ ಬಂದಿದೆ, ಇದು ಶಾಶ್ವತ ಪರಿಹಾರ ಅಲ್ಲ. ಅಧಿಕಾರ, ವೋಟು, ದರ್ಪ ಇದ್ಯಾವುದು ಶಾಶ್ವತ ಅಲ್ಲ ಅನ್ನೋದನ್ನು ರೈತರು ತಿಳಿಸಿಕೊಟ್ಟಿದ್ದಾರೆ. ನ್ಯಾಯಾಲಯಗಳು ಬೇಕಾದಷ್ಟಿವೆ, ನ್ಯಾಯಾಲಯಗಳಿಗಿಂತ ದೊಡ್ಡ ತೀರ್ಪು ನಮ್ಮ ಮನಸಾಕ್ಷಿ ಎಂದರು.

ಕಾರ್ಯಕ್ರಮದಲ್ಲಿ ಪರಿಷತ್ ವಿಪಕ್ಷ ನಾಯಕ ಹರಿ ಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್, ಮಾಜಿ ಸಂಸದ ಉಗ್ರಪ್ಪ, ಮಾಜಿ ಸಚಿವ ಆಂಜನೇಯ ಸೇರಿ ಹಲವರು ಭಾಗಿಯಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *