DistrictsKarnatakaLatestLeading NewsMain Post

ಸ್ವಪಕ್ಷೀಯ ಶಾಸಕರ ವಿರುದ್ಧ ಪ್ರತಾಪ್‍ ಸಿಂಹ ವಾಗ್ದಾಳಿ – ಮುಂದುವರಿದ ಟಾಕ್‌ವಾರ್‌

-ಪ್ರತಾಪ್‍‌ ಸಿಂಹ ಅವರಿಗೆ ಯಾಕೆ ಕಂಪನಿ ಮೇಲೆ ಒಲವು

ಮೈಸೂರು: ಗ್ಯಾಸ್‍ಪೈಪ್‍ಲೈನ್ ಅಳವಡಿಕೆ ವಿಚಾರವಾಗಿ ಮೈಸೂರಿನ ಬಿಜೆಪಿ ಶಾಸಕರಾದ ರಾಮದಾಸ್ ಮತ್ತು ನಾಗೇಂದ್ರ ವಿರುದ್ಧ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ನಿನ್ನೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರತಾಪ್ ಸಿಂಹ, ಮೈಸೂರಿನಲ್ಲಿ ಗ್ಯಾಸ್‍ಪೈಪ್‍ಲೈನ್ ಅಳವಡಿಕೆ ವಿಚಾರವಾಗಿ ಮಾತನಾಡುತ್ತಿರುವವರು ಈ ಹಿಂದೆ ನಗರ ಪಾಲಿಕೆ ಸದ್ಯರಾಗಿದ್ದರು. ಈ ಸಂದರ್ಭ ಮೊಬೈಲ್ ಕಂಪನಿ ಸೇರಿದಂತೆ ಇತರ ಕಾಮಗಾರಿಗೆ ಊರೂರು ಅಗೆದು ಹೋದರು ಆಗ ಯಾರೂ ಕೇಳಿಲ್ಲ. ಆಗ ರಸ್ತೆ ಹದಗೆಟ್ಟು ಹೋಗಿಲ್ವಾ, ಆಗ ಯಾಕೆ ಮಾತನಾಡಿಲ್ಲ. ಈಗಿರುವ ರಸ್ತೆಯ ಬಗ್ಗೆ ಮಾತನಾಡುವ ಶಾಸಕರು ರೋಡ್‍ನ ಕ್ವಾಲಿಟಿ ಗಮನಿಸಿದ್ದೀರಾ? 300 ಕೋಟಿ ರಸ್ತೆ ಮಾಡಿದ್ದೀರಿ ಎಂದು ಹೇಳುತ್ತಿರಿ ಅದೂ ವರ್ಷನೂ ಬಾಳಿಕೆ ಬರಲ್ಲ ಎಂದು ವಾಗ್ದಾಳಿ ನಡೆಸಿದ್ದರು. ಇದನ್ನೂ ಓದಿ: ಭಾರತದಲ್ಲಿ ಶೇ.75 ವಯಸ್ಕರಿಗೆ ಎರಡೂ ಡೋಸ್‌ ಲಸಿಕೆ – ಪ್ರಧಾನಿ ಅಭಿನಂದನೆ

ಪ್ರತಾಪ್ ಸಿಂಹ ವಿರುದ್ಧ ಕಮಿಷನ್‌ ಆರೋಪ:
ಇಂದು ಶಾಸಕ ನಾಗೇಂದ್ರಗೆ ಮೈಸೂರಿನಲ್ಲಿ ಮನೆ ಮನೆಗೆ ಗ್ಯಾಸ್ ಪೈಪ್ ಅಳವಡಿಕೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿ, ಪ್ರತಾಪ್ ಸಿಂಹ ಅವರನ್ನು ಕಂಪನಿಯವರು ವೈಯಕ್ತಿಕವಾಗಿ ಭೇಟಿ ಮಾಡದಿರಬಹುದು, ಅದಕ್ಕಾಗಿ ವಿರೋಧ ವ್ಯಕ್ತಪಡಿಸುತ್ತಿರುಬಹುದು ಎಂದು ಟಾಂಗ್ ನೀಡಿ, ಚಾಮುಂಡೇಶ್ವರಿ ಆಣೆಗೂ ನಾನು ಕಮಿಷನ್‍ಗಾಗಿ ಅಲ್ಲ ಜನರ ಹಿತದೃಷ್ಟಿಯಿಂದಾಗಿ ಧ್ವನಿ ಎತ್ತಿದ್ದೇನೆ. ನನಗೆ ಕಮಿಷನ್ ವಿಚಾರ ಗೊತ್ತಿಲ್ಲ. ಇದು ನನ್ನೂರು ಇಲ್ಲಿನ ಸಮಸ್ಯೆಗಳು ನನಗೆ ಚೆನ್ನಾಗಿ ಗೊತ್ತಿದೆ. ಗ್ಯಾಸ್ ಯೋಜನೆ ಕಾಮಗಾರಿ ವೇಳೆ ಅನಾಹುತ ಆದರೆ ಯಾರು ಜವಾಬ್ದಾರಿ. ಬೇರೆ ಬೇರೆ ಕಡೆ ಅನಾಹುತಗಳು ಆಗಿವೆ. ಅನಾಹುತಕ್ಕೆ ಯಾರು ಹೊಣೆ ಅದನ್ನು ಪ್ರಶ್ನಿಸಿದರೆ ತಪ್ಪಾ? ಪ್ರತಾಪ್ ಸಿಂಹ ಅವರಿಗೆ ಏಕೆ ಕಂಪನಿ ಮೇಲೆ ಒಲವು? ಕಂಪನಿಯವರು ನೇರವಾಗಿ ಪಾಲಿಕೆ ಅಧಿಕಾರಿಗಳ ಜೊತೆ ಮಾತನಾಡಲಿ ಎಂದರು. ಇದನ್ನೂ ಓದಿ: ತಪಾಸಣೆ ನೆಪದಲ್ಲಿ ಮಹಿಳಾ ರೋಗಿಗೆ ಕಿರುಕುಳ – ವೈದ್ಯನ ವಿರುದ್ಧ ದೂರು

ತನ್ನ ಹುಟ್ಟೂರಲ್ಲಿ ಲೀಡ್ ಸಿಕ್ಕಿಲ್ಲ ಎಂದ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿ, ಸಂಸದರು ತಮ್ಮ ವ್ಯಾಪ್ತಿಯಲ್ಲಿ ಎಷ್ಟು ಜಿ.ಪಂ ತಾ.ಪಂ ಸದಸ್ಯರನ್ನು ಗೆಲ್ಲಿಸಿದ್ದಾರೆ. 7 ವರ್ಷದಿಂದ ನೀವೆ ಸಂಸದರಾಗಿದ್ದೀರಾ ಮೊದಲು ಅದನ್ನು ಹೇಳಿ. ನಾನು ನನ್ನ ಹುಟ್ಟೂರಿನಲ್ಲಿ ಪಾಲಿಕೆ ಸದಸ್ಯನಾಗಿದ್ದೇನೆ. ನೀವು ನಮ್ಮ ಊರಲ್ಲಿ ಜಿ.ಪಂ ಗೆದ್ದು ಬಂದಿದ್ದರೆ ನಿಮಗೆ ಶರಣಾಗುತ್ತೇನೆ. ನಾನು ನಿಮ್ಮ ರೀತಿ ದಿಢೀರ್ ಅಂತಾ ಬಂದು ಪದವಿ ಪಡೆದವನಲ್ಲ. 25 ವರ್ಷದಿಂದ ಜನಪ್ರತಿನಿಧಿಯಾಗಿದ್ದೇನೆ. ನನ್ನ ಲೀಡ್ ಕಡಿಮೆಯಾಗಲು ಒಂದೇ ಊರಿನ ಇಬ್ಬರು ಅಭ್ಯರ್ಥಿಗಳು ಕಾರಣ ಮುಂದಿನ ಚುನಾವಣೆಯಲ್ಲಿ ಅತಿ ಹೆಚ್ಚು ಲೀಡ್ ಪಡೆಯುತ್ತೇನೆ. ನಿಮ್ಮ ಚುನಾವಣೆಯಲ್ಲಿ ನನ್ನ ಮುಖ ನನ್ನ ಅಭಿವೃದ್ಧಿ ನೋಡಿ ನಿಮಗೆ ಲೀಡ್ ಕೊಟ್ಟಿದ್ದು. ನನ್ನ ಕ್ಷೇತ್ರದಲ್ಲಿ ಪಾಲಿಕೆ ಸದಸ್ಯರು ಸೋಲಲು ಕಾರಣ ನೀವು. ನೀವೆ ಅದರ ಜವಾಬ್ದಾರಿ ಪಡೆದು ಟಿಕೆಟ್ ನೀಡಿದ್ದೀರಿ. ಅದರಲ್ಲಿ ಎಷ್ಟು ಜನರನ್ನು ಗೆಲ್ಲಿಸಿದ್ದೀರಾ? ಎಂ.ಎಲ್.ಸಿ ಚುನಾವಣೆ ಉಸ್ತುವಾರಿ ನೀವೆ ವಹಿಸಿದ್ದಿರಿ ಅದನ್ನು ಗೆಲ್ಲಿಸಿದ್ದೀರಾ?. ನಾನು ನಿಮ್ಮಷ್ಟು ವಿದ್ಯಾವಂತ ಬುದ್ದಿವಂತ ಅಲ್ಲಬೀದಿಯಲ್ಲಿ ನಿಂತು ನಮಗೆ ಪಾಠ ಮಾಡಬೇಡಿ ಎಂದು ತಿರುಗೇಟು ನೀಡಿದ್ದಾರೆ.

Leave a Reply

Your email address will not be published. Required fields are marked *

Back to top button