ಬೆಂಗಳೂರು: ಟನಲ್ ರೋಡ್ ವಿರೋಧಿಸುತ್ತಿರುವ ಸಂಸದ ತೇಜಸ್ವಿಸೂರ್ಯ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ಹೊಸ ಬಾಂಬ್ ಹಾಕಿದ್ದಾರೆ. ನಿನಗೆ ಹೊಸ ಕಾರು ಬೇಕು.. ಬೇರೆಯವರು ಕಾರಲ್ಲಿ ಓಡಾಡೋದು ಬೇಡ್ವಾ? ಹೊಸ ಕಾರಿಗೆ ಅರ್ಜಿ ಹಾಕಿದ್ದ, ಬೇಕು ಅಂದ್ರೆ ಅವನ ಲೆಟರ್ ರಿಲೀಸ್ ಮಾಡ್ಲಾ ಅಂತ ಡಿಕೆಶಿ ಸವಾಲು ಹಾಕಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾರು ಬೇಡ ಅಂತಿದ್ದ. ಆಮೇಲೆ ಮದುವೆ ಆಗ್ತಾ ಇದೀನಿ ಹೊಸ ಕಾರು ಬೇಕು ಅಂತ ಅರ್ಜಿ ಹಾಕಿದ್ದ. ನಿನಗ್ಯಾಕೆ ಹೊಸ ಕಾರು ಬೇಕಿತ್ತು. ನೀನು ಮೆಟ್ರೋದಲ್ಲಿ ಓಡಾಡು ಎಂದು ತೇಜಸ್ವಿ ಸೂರ್ಯ ವಿರುದ್ಧ ಕಿಡಿಕಾರಿದರು. ಎಲ್ಲಾ ಬಿಜೆಪಿಯವರು ಕಾರು ಬಿಟ್ಟು ಮೆಟ್ರೋದಲ್ಲಿ ಓಡಾಡಲಿ ಅಂತ ವ್ಯಂಗ್ಯವಾಡಿದರು.
ಅವನು ದೊಡ್ಡ ಲೀಡರ್, ಬಹಳ ಬುದ್ಧಿವಂತ, ಫ್ಲೈಟ್ ಡೋರ್ ಓಪನ್ ಮಾಡ್ಬಿಟ್ಟ. ಅಮೆರಿಕಕ್ಕೆ ಹೋಗಿ ಅನುಮತಿ ಇಲ್ಲದೆ ಉಗಿಸಿಕೊಂಡು ಬಂದ ಅಂತಾ ವಾಗ್ದಾಳಿ ನಡೆಸಿದರು.
ರಾಮಮೂರ್ತಿ ನಮ್ ಹುಡ್ಗ ಬಿಡ್ರಪ್ಪ. ಯಾವ ಧಮ್ಕಿ ಇಲ್ಲ. ಆದರೆ, ಇವರು ಬಿಡಿ.. ಬುದ್ಧಿವಂತ ಎಂದು ತೇಜಸ್ವಿಗೆ ಡಿಕೆಶಿ ಕುಟುಕಿದರು.

